ಪಂಚಮಸಾಲಿಗಳು ಯಾರು? 1/2
ಪಂಚಮಸಾಲಿಗಳ ಮೂಲದ ಬಗ್ಗೆ ಗೊಂದಲವಿದೆ. ಅವರನ್ನು ಪಂಚಾಚಾರ್ಯರೊಡನೆ ಜೋಡಿಸುವ ಪ್ರಯತ್ನಗಳೂ ನಡೆದಿದೆ. ಆದರೆ ಇಲ್ಲಿ ಪ್ರಾಸ ಬಿಟ್ಟರೆ ಬೇರೆ ಯಾವುದೇ ಸಂಬಂಧವಿಲ್ಲ.
ಪ್ರಾಚೀನ ಕರ್ನಾಟಕದಲ್ಲಿ ಪಂಚಮಸಾಲಿಗಳು ಜೈನ ಮತ್ತು ಶೈವ ಧರ್ಮಗಳನ್ನು ಪಾಲಿಸುತ್ತಿದ್ದರು ಎಂದು ಹೇಳಲು ದಾಖಲೆಗಳಿವೆ. ಮುಂದೆ ಅವರು ಬಸವಣ್ಣನ ಪ್ರಭಾವದಿಂದ ಲಿಂಗಾಯತರಾದರು.
ಪಂಚಮಸಾಲಿಗಳ ಬಗ್ಗೆ ೧೧ನೇ ಶತಮಾನದಿಂದ ಶಾಸನಗಳು ಮತ್ತು ಅವರಿಗೆ ಪೌರಾಣಿಕ ಹಿನ್ನಲೆ ಸೃಷ್ಟಿಸುವ ಕೆಲವು ಹಳೆಯ ಕನ್ನಡದ ಕೃತಿಗಳು ಸಿಗುತ್ತವೆ (ಉದಾ – ಪಂಚಮಸಾಲಿ ಉತ್ಪತ್ತಿ).
ಗೋಮುಖಾಸುರನನ್ನು ವಧಿಸಲು ಶಿವನ ಕೃಪೆಯಿಂದ ಪಂಚಮುಖ ಗಣಾಧೀಶ್ವರನು ಐಹೊಳೆಯಲ್ಲಿ ಜನಿಸಿದ. ಅವನ ಮಗ ಮಖಾರಿ ಪಾತಾಳದ ರಾಜಕುಮಾರಿ ಫಣಾಮಣಿಯನ್ನು ಮದುವೆಯಾದನು.
ಮಖಾರಿಗೆ ಪಂಚಸೆಟ್ಟಿಗಳೆಂಬ ೫ ಮಕ್ಕಳು: ನಾಡನ್ನಾಳುವ ಶೆಟ್ಟಿ, ಸೆಟ್ಟಿಗುತ್ತ, ಮಹಾಜನ ಶೆಟ್ಟಿ, ಪಟ್ಟಣಶೆಟ್ಟಿ, ಮಿಂಡಗುದ್ದಲಿಸೆಟ್ಟಿ. ಅವನು ಅವರಿಗೆ ಬೇರೆ ಬೇರೆ ವೃತ್ತಿಗಳನ್ನು ಹಚ್ಚಿಕೊಟ್ಟನು.
(‘ಪಂಚಮಸಾಲಿ: ಹಾಗೆಂದರೇನು ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪.)