ಪಾಂಡೋಮಟ್ಟಿ
ಸುವರ್ಣ ಟಿವಿಯಲ್ಲಿ ಮಾತನಾಡುತ್ತ, ಕನ್ನೇರಿ ಕಾಡಸಿದ್ದೇಶ್ವರ ಮಠದ ಶ್ರೀಗಳು ನಾಲಿಗೆಯ ಮೇಲೆ ಹತೋಟಿ ಕಳೆದುಕೊಂಡು ಬಸವ ಅನುಯಾಯಿಗಳನ್ನು ‘ಬಸವ ತಾಲಿಬಾನ್’ಗಳು ಎಂದು ಕರೆದದ್ದನ್ನು ವಿರಕ್ತಮಠ, ಪಾಂಡೋಮಟ್ಟಿ-ಕಮ್ಮತ್ತಹಳ್ಳಿಯ ಡಾ. ಗುರುಬಸವ ಸ್ವಾಮಿಗಳು ಖಂಡಿಸಿದ್ದಾರೆ.
ಬಸವತತ್ವದ ಅನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದಿರುವುದು ಅತ್ಯಂತ ಖಂಡನೀಯ, ಅಷ್ಟೇ ದುರದೃಷ್ಟಕರ.
ಒಂದು ಧರ್ಮದ ಅನುಯಾಯಿಗಳನ್ನು ಈ ರೀತಿಯಾಗಿ ಕರೆದಿರುವುದು ಖೇದಕರ ವಿಚಾರ. ಕೆಲವರನ್ನು ಮೆಚ್ಚಿಸಲು ಏನು ಬೇಕಾದರೂ ಮಾತನಾಡಬಹುದು ಎಂದು ಅವರು ಅಂದುಕೊಂಡಿದ್ದರೆ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ.
ಕಾಡಸಿದ್ದೇಶ್ವರ ಶ್ರೀಗಳು ಬಹಿರಂಗವಾಗಿ ಬಸವ ಅನುಯಾಯಿಗಳ ಕ್ಷಮೆಯನ್ನು ಕೇಳಬೇಕು. ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಶ್ರೀಗಳು ಎಚ್ಚರಿಸಿದ್ದಾರೆ.
ಹೌದು ಕ್ಷಮೆ ಕೇಳಬೇಕು.