ಪೀಠ ತ್ಯಜಿಸಿ ನಿವೃತ್ತರಾಗಬೇಕೆಂದು ಕರೆ ಕೊಟ್ಟಿದ್ದ ಸಾಧು ಲಿಂಗಾಯತ ಮುಖಂಡರ ಬೇಡಿಕೆಯನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿರಸ್ಕರಿಸಿದ್ದಾರೆ.
‘ಕೆಲವರು ಹೇಳಿದ ಕೂಡಲೇ ನಿವೃತ್ತಿ ಘೋಷಣೆ ಮಾಡಲು ನಾನು ಸರ್ಕಾರಿ ನೌಕರನಲ್ಲ. 60 ವರ್ಷವಾದ ನಂತರ ನಿವೃತ್ತಿ ಘೋಷಣೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ,” ಎಂದರು.
“ರೆಸಾರ್ಟ್‌ನಲ್ಲಿ ನಡೆಸಿದ ಸಭೆಗೆ ನಾನು ಪ್ರಾಮುಖ್ಯತೆ ನೀಡುವುದಿಲ್ಲ. ಆ.18ರಂದು ಪಾದಯಾತ್ರೆಯಲ್ಲಿ ಬಂದರೂ ನಾನು ಅವರನ್ನು ಭೇಟಿಯಾಗುವುದಿಲ್ಲ” ಎಂದು ಹೇಳಿದರು.
“ಮೊದಲು ಕೋರ್ಟ್ ನಲ್ಲಿನ ಕೇಸ್ ವಾಪಸ್ ಪಡೆದು ಬರಲಿ. ಮುಕ್ತವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಮ್ಮ ವಿರೋಧ ಇಲ್ಲ,” ಎಂದು ತಿಳಿಸಿದರು.