ಸಿರಿಗೆರೆ ಮಠದಲ್ಲಿ ತರಳಬಾಳು ಶ್ರೀಗಳ ಬೆಂಬಲಿಗರು ಸೋಮವಾರ ಸಭೆ ನಡೆಸಿ ಶ್ರೀಗಳು ನಿವೃತ್ತಿಯಾಗಲಿ ಒಂದು ಒತ್ತಾಯಿಸಿದ್ದ ಸಾಧು ಲಿಂಗಾಯತ ಮುಖಂಡರ ನಿರ್ಣಯವನ್ನು ಖಂಡಿಸಿದರು.
ಸಭೆಯಲ್ಲಿ ಬೃಹನ್ಮಠದಲ್ಲಿ ಭಕ್ತರು, ಸಮಾಜದ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸದ್ಭಕ್ತರು ಜಮಾಯಿಸಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರ ಘೋಷಣೆ ಕೂಗಿದರು.
ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಬಂದಿದ್ದ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಭಾನುವಾರ ನಡೆದ ಸಭೆಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
‘ಕೊನೆ ಉಸಿರು ಇರುವವರೆಗೂ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯೇ ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧಿಪತಿಯಾಗಿ ಮುಂದುವರಿಯಬೇಕು. ನಿವೃತ್ತಿಗೆ ಒತ್ತಾಯಿಸಿದವರು ಕೂಡಲೇ ಶ್ರೀಗಳ ಪದತಲಕ್ಕೆ ಬಂದು ಕ್ಷಮೆ ಕೋರಬೇಕು’ ಎಂದು ಮಠದ ಭಕ್ತರು ಒತ್ತಾಯಿಸಿದರು.

‘ಶ್ರೀಗಳು ಪ್ರಯತ್ನದಿಂದಾಗಿ ಹಲವಾರು ಕೆರೆಗಳಿಗೆ ನೀರು ಬಂದಿದೆ. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ನಡೆದಿದೆ ಶ್ರೀಗಳು ಎರಡನೇ ವಿವೇಕಾನಂದ ಇದ್ದಂತೆ. ಅವರ ವಿರುದ್ಧ ಮತ್ತೆ ಹಗುರವಾಗಿ ಮಾತನಾಡಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.
“ಆದಿಚುಂಚನಗಿರಿ ಮಠ, ಪೇಜಾವರ ಮಠ, ಸಿದ್ಧಗಂಗಾ ಮಠದ ಶ್ರೀಗಳು ಪೀಠಾಧಿಪತಿಯಾಗಿಯೇ ಐಕ್ಯರಾಗಿದ್ದಾರೆ. ಅದೇ ರೀತಿ ಶಿವಮೂರ್ತಿ ಶಿವಾಚಾರ್ಯರೂ ಮುಂದುವರಿಯಬೇಕು,” ಒತ್ತಾಯಿಸಿದರು.
ಆರೋಗ್ಯವಾಗಿರುವ ಶ್ರೀಗಳನ್ನು ಪೀಠ ತ್ಯಾಗ ಮಾಡುವಂತೆ ಯಾರೂ ಕೇಳಕೂಡದು ಎಂದು ಆಗ್ರಹಿಸಿದರು.