ಕೊಪ್ಪಳದಲ್ಲಿ ನಡೆಯುತ್ತಿರುವ ಸಂಚಾರಿ ಅರಿವಿನ ಮನೆ ಅರಿವು ಗೋಷ್ಠಿಗಳು

ಕೊಪ್ಪಳ

ಕೊಪ್ಪಳದಲ್ಲಿ ಸಂಚಾರಿ ಅರಿವಿನ ಮನೆ ಅರಿವು, ಆಚಾರ ಅನುಭಾವ ಗೋಷ್ಠಿಗಳು ನಡೆಯುತ್ತಿವೆ.

ಶರಣೆ ಶ್ರೀ ಕವಿತಾ ಬಸವರಾಜ ಸಜ್ಜನ್ ಗೃಹ ಮಂಡಳಿ ಕಾಲೂನಿ ನವನಗರ-ಭಾಗ್ಯನಗರದಲ್ಲಿ ಇತ್ತೀಚೆಗೆ ಇಷ್ಟಲಿಂಗ ಶಿವಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ವಿಶ್ವ ಗುರು ಬಸವೇಶ್ವರ ಟ್ರಸ್ಟನ ಅಧ್ಯಕ್ಷರಾದ ಶರಣ ಗುಡದಪ್ಪ ಹಡಪಾದ ಅವರು ರುದ್ರಾಕ್ಷಿ ಮನುಷ್ಯನ ಅಂಗದ ಮೇಲೆ ಧರಿಸುವುದರಿಂದ ಉಷ್ಣತೆಯನ್ನು ಸಮತೊಲನದಲ್ಲಿಡುತ್ತದೆ, ದೇಹದ ಮೇಲೆ ದುಷ್ಪರಿಣಾಮ ತಡೆಯುವ ಶಕ್ತಿ ದೊರೆಯಲಿದೆ ಎಂದು ತಿಳಿಸಿದರು.

ವಿಶ್ವ ಗುರು ಬಸವೇಶ್ವರ ಟ್ರಸ್ಟ್ ನ ಅಧ್ಯಕ್ಷರು, ಸರ್ವ ಸದಸ್ಯರು, ಕೊಪ್ಪಳ ಜಿಲ್ಲಾ JLM ಯುವ ಘಟಕ ಶೇಖರ್ ಎಸ್ ಇಂಗಳದಾಳ, ಮಹಿಳಾ ಘಟಕದ ಅಧ್ಯಕ್ಷರು ಅರ್ಚನಾಗ ಸಸಿಮಠ, ಮಾಸಿಕ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಹಾಗೂ ತಾಲೂಕ ಮತ್ತು ಬಸವಪರ ಸಂಘಟನೆಗಳ ಕಾರ್ಯಕರ್ತರು ಇತರರು ಭಾಗವಹಿಸಿದ್ದರು.


“ಸಂಚಾರಿ ಅರಿವಿನ ಮನೆ” ಗೋಷ್ಠಿ ಶರಣೆ ಶ್ರೀದೇವಿ ಶೇಖರ್ ಇಂಗಳದಾಳ ನವನಗರ-ಭಾಗ್ಯನಗರದಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಅಷ್ಟಾವರಣದಲ್ಲಿನ ಜಂಗಮ ತತ್ವದ ಕುರಿತು ವಿಶ್ವ ಗುರು ಬಸವೇಶ್ವರ ಟ್ರಸ್ಟನ ಗವಿಶ ಸಸಿಮಠ ಇವರು ಜಂಗಮ ಎಂದರೆ ಚಲಿಸುವ ಪ್ರಾಣಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ಮಾರ್ಗವೆ ಜಂಗಮ ಎಂದು ಹೇಳಿದರು.

JLM ಕೊಪ್ಪಳ ಜಿಲ್ಲಾ ಗೌರವ ಅಧ್ಯಕ್ಷರಾದ ಶರಣರಾದ ಡಾ ಸಂಗಮೇಶ ಕಲಹಾಳ ಇವರು ಕೊಡ ಮಾತನಾಡಿದರು.

ವಿಶ್ವ ಗುರು ಬಸವೇಶ್ವರ ಟ್ರಸ್ಟ್ ನ ಅಧ್ಯಕ್ಷರು, ಸದಸ್ಯರು, ಕೊಪ್ಪಳ ಜಿಲ್ಲಾ JLM ಯುವ ಘಟಕ ಶೇಖರ್ ಎಸ್ ಇಂಗಳದಾಳ, ಮಹಿಳಾ ಘಟಕದ ಅಧ್ಯಕ್ಷರು ಸದಸ್ಯರು ಅರ್ಚನಾಗ ಸಸಿಮಠ ಹಾಗೂ ತಾಲೂಕ ಮತ್ತು ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು, ಜಿಲ್ಲಾ ಯುವಘಟಕ, ಜಾ ಲಿಂ ಮಹಾಸಭಾ ಕೊಪ್ಪಳ.