ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದ ಶರಣ ಚನ್ನಬಸವ ಮಹಾಮನೆಯಲ್ಲಿ, 'ಸಂಚಾರಿ ಅರಿವಿನ ಮನೆ' ಕಾಯ೯ಕ್ರಮ ಗುರವಾರ ಜರುಗಿತು. ಶಿವಯೋಗ ಕುರಿತು ಗವೀಶ ಸಸಿಮಠ, ಅಚ೯ನಾ ಸಸಿಮಠ, ಡಾ. ಸಂಗಮೇಶ ಕಲಹಾಳ ಮಾತನಾಡಿದರು. ಚನ್ನಬಸವ ಮಹಾಮನೆಯ ಮುಖ್ಯಸ್ಥೆ ನೀಲಮ್ಮ ಎಸ್. ಪಾಟೀಲ ಪ್ರಸಾದ ಸೇವೆಗೈದರು.
ಬೆಳಗಾವಿ ಸಂಚಾರಿ ಗುರುಬಸವ ಬಳಗದವರು ಬಸವ ಪಂಚಮಿಯನ್ನು ನಾಗನೂರು ಶ್ರೀ ರುದ್ರಾಕ್ಷಿ ಮಠದ ವಸತಿ ನಿಲಯದ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಆಚರಿಸಿದರು. ಡಾ.ಅಲ್ಲಮ್ಮಪ್ರಭು ಮಹಾಸ್ವಾಮಿಗಳು ಸಾನಿಧ್ಯವಹಿಸಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ರೊಟ್ಟಿ, ಅಂದಾನಯ್ಯ ಅಳಗುಂಡಿ ಹಾಗೂ ಸಂಚಾರಿ ಗುರುಬಸವ ಬಳಗದ ಪ್ರಮುಖರು ವೇದಿಕೆ ಮೇಲಿದ್ದರು. ನೀಲಮ್ಮ ಮಹಾದೇವ ಕುಂಬಾರ ಅವರು ದಾಸೋಹ ಸೇವೆಗೈದರು.
ಮಂಡ್ಯದ ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬಸವ ಫೌಂಡೇಶನ್, ಮಾನವಬಂಧುತ್ವ ವೇದಿಕೆ ಹಾಗೂ ಕಾಯಕಯೋಗಿ ಸಮೂಹ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಬಸವಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಯಿತು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.

ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.

ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.

List of Images
1/19

Leave a comment