ಪ್ರಜಾಪ್ರಭುತ್ವಕ್ಕೆ ಧ್ವನಿಯಾದ ಶರಣರು

ವಿಶ್ವಗುರು ಬಸವಣ್ಣನವರು 12ನೇ ಶತಮಾನ ಕಂಡ ಶ್ರೇಷ್ಠ ದಾರ್ಶನಿಕ ಪ್ರವಾದಿಗಳು.

ಲಿಂಗಾಯತ ಧರ್ಮ ಸ್ಥಾಪನೆ ಮಾಡುವುದರ ಮೂಲಕ ಇಡೀ ವಿಶ್ವಕ್ಕೆ ಸಮಾನತೆಯನ್ನು ಸಾರಿದರು. ಅವರು ಬೋಧಿಸಿದ ವಚನಗಳಲ್ಲಿ ಮಾನವೀಯತೆ ದಯಾಶೀಲತೆ ವಿನಯತೆ ಸಾಮಾಜಿಕ ಸಮಾನತೆ ಧಾರ್ಮಿಕತೆ, ಆಧ್ಯಾತ್ಮಿಕತೆ ವಿಚಾರಗಳು ಇವೆ.

ಬಸವಣ್ಣನವರ ಸಮಕಾಲಿನದಲ್ಲಿ 770 ಅಮರ ಗಣಗಳು ಆಗಿ ಹೋಗಿದ್ದಾರೆ. ಬಸವಾದಿ ಶರಣರ ವಚನಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಅವು ಕಾಲ ದೇಶ ಭಾಷೆ ಜಾತಿ ಮತ ಪಂಥ ಪಂಗಡಗಳ ಮೀರಿ ಸರ್ವರ ಹೃದಯವನ್ನು ಬೆಸೆಯುತ್ತವೆ.

ಶರಣರು ಬೋಧಿಸಿದ ಮುಖ್ಯವಾದ ವಿಚಾರವೆಂದರೆ ಕಾಯಕ ದಾಸೋಹ. ಪ್ರತಿಯೊಬ್ಬ ವ್ಯಕ್ತಿ ದುಡಿದು ಉಣ್ಣಬೇಕು ತನ್ನ ಕುಟುಂಬವನ್ನು ಸ್ವಾಭಿಮಾನದಿಂದ ಮುನ್ನೆಡೆಸಬೇಕು ಮತ್ತು ಗಳಿಸಿದ ಹಣದಲ್ಲಿ ಒಂದು ಪಾಲಾದರೂ ಸಮಾಜ ದೇಶ ವಿಶ್ವದ ಜನತೆಗೆ ದಾಸೋಹದ ಮೂಲಕ ವಿನಿಯೋಗ ಮಾಡಬೇಕು ಎಂಬುದು ಅವರ ಆಶಯವಾಗಿತ್ತು.

ಪ್ರಜಾಪ್ರಭುತ್ವದ ದಿನ ಅಂಗವಾಗಿ ಪ್ರಜಾಪ್ರಭುತ್ವಕ್ಕೆ ಧ್ವನಿಯಾದ ಹಾಗೂ ಪ್ರಜಾಪ್ರಭುತ್ವವನ್ನು ಹುಟ್ಟು ಹಾಕಿದ ಬಸವಾದಿ ಶರಣರನ್ನು ಇಂದು ನಾವು ಸ್ಮರಿಸಿಕೊಳ್ಳೋಣ. ಶರಣರ ಪ್ರಜಾಪ್ರಭುತ್ವವನ್ನು 21ನೇ ಶತಮಾನದಲ್ಲಿ ಯಶಸ್ವಿಗೊಳಿಸುತ್ತಿರುವ ಭಾರತದ ಆದಿಯಾಗಿ ವಿಶ್ವದ ಪ್ರಜಾಪ್ರಭುತ್ವ ಅಳವಡಿಸಿಕೊಂಡ ರಾಷ್ಟ್ರಗಳನ್ನು ಗೌರವಿಸೋಣ. ಭಾರತದ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳಿಸಿದ ಭಾರತದ ಗಣ್ಯರನ್ನು ಹಾಗೂ ಜನತೆಯನ್ನು ಅಭಿನಂದಿಸೋಣ.

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.