ನಾಡಿನ ಪ್ರಮುಖ ಗುರುಗಳಿಂದ ಲಿಂಗೈಕ್ಯ ಶರಣರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಬಸವ ಮೀಡಿಯಾ
ಬಸವ ಮೀಡಿಯಾ

ಕುರಕುಂದಿ

ಕುರಕುಂದಿ ಗ್ರಾಮದಲ್ಲಿ ಲಿಂಗೈಕ್ಯ ಶರಣ ವೀರಭದ್ರಪ್ಪ ಅವರ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಬಸವ ತತ್ವ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.

ಪೂಜ್ಯ ತೋಂಟದ ಸಿದ್ಧರಾಮ ಶ್ರೀಗಳು ಕುರಕುಂದಿ ವೀರಭದ್ರಪ್ಪ ಅವರು ಮಾದರಿ ಬದುಕು ಸಾಗಿಸಿದರು ಎಂದರು. ಅಂತರಂಗದಲ್ಲಿ ಶರಣರು ಅಪಾರ ಶಕ್ತಿ ಪಡೆದವರು. ವಚನದಂತೆ ಉಪಮಿಸಬಾರದ ಉಪಮಾತೀತರು ಅವರಾಗಿದ್ದರು, ಲಿಂಗದಲ್ಲಿ ಸಾಮರಸ್ಯ ಸಾಧಿಸಿದರು. ಕಾಲವನ್ನು, ಕರ್ಮವನ್ನು ಗೆದ್ದವರು ವೀರಭದ್ರಪ್ಪ ಶರಣ ಜಂಗಮರು. ಸಾವಿಲ್ಲದ ಶರಣರು, ಜ್ಞಾನವಂತ, ಹೃದಯವಂತರು ಅವರಾಗಿದ್ದರು. ಅವರ ಆದರ್ಶದ ದಾರಿಯಲ್ಲಿ ನಾವು, ನೀವೆಲ್ಲ ಸಾಗುವುದೇ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ, ಎಂದು ಹೇಳಿದರು.

ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ಮಾತನಾಡುತ್ತ ವೀರಭದ್ರಪ್ಪ ಅವರು ಶರಣ ಸಿದ್ಧಾಂತಕ್ಕೆ ತನು ಮನ ಧನವನ್ನು ಅರ್ಪಿಸಿದವರು, ಅವರು ನಮಗಷ್ಟೇ ಅಲ್ಲ, ಮಕ್ಕಳು-ಸತಿ ಬಂಧುಗಳಿಗೆಲ್ಲರಿಗೂ ಬಸವ ಸಂಸ್ಕಾರ ನೀಡಿ ಹೋಗಿದ್ದಾರೆ, ಅದೇ ಬಸವತತ್ವದ ದಾರಿಯಲ್ಲೇ ಅವರೆಲ್ಲ ಸಾಗಿದ್ದಾರೆ, ಎಂದರು.

ಬಸವದೇವರು ದೇವದುರ್ಗ, ನವಲಿಂಗ ಶರಣರು ಸಂತೆಕಡೂರು, ವೀರಭದ್ರ ಸ್ವಾಮಿಗಳು ಜಾಡಲದಿನ್ನಿ, ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ತಂಗಡಗಿ, ಮಹಾಂತಸ್ವಾಮಿ ಮುದಗಲ್ಲ ಮತ್ತೀತರರು ಸ್ವಾಮಿಗಳು ಆಗಮಿಸಿ ದರ್ಶನ ಪಡೆದು, ನುಡಿನಮನ ಸಲ್ಲಿಸಿದರು.

ರಾಜೇಶ ಸಸಿಮಠ ಕೊಪ್ಪಳ, ಗಡಿಹಳ್ಳಿ ಶರಣಮ್ಮ ಸೋಮಸಾಗರ, ರಾಜಶೇಖರ ನಾರನಾಳ ಗಂಗಾವತಿ, ಶಿಲ್ಪಾ ನಾರನಾಳ ಹಟ್ಟಿ, ತಿಮ್ಮನಗೌಡ ತಿಲಕರಾಗಿ ಸಿಂಧನೂರು, ಲಿಂಗರಾಜ ಚಾವಳ್ಳಿ ಮೈಸೂರು, ವೀರಭದ್ರಗೌಡ ಅಮರಾಪುರ ಸಿಂಧನೂರು, ನಿರುಪಾದಿ ವಕೀಲರು ಸಿಂಧನೂರು, ಮಲ್ಲಣ್ಣ ಲಿಂಗಸ್ಗೂರು, ಅಶೋಕ ಬರಗುಂಡಿ ಗದಗ, ರವಿ ಯಡಹಳ್ಳಿ ಜಮಖಂಡಿ, ಶರಣಪ್ಪ ವಕೀಲರು ಕುಷ್ಟಗಿ ಮಾತನಾಡಿದರು.

ಸೇರಿದ ಸಾವಿರಾರು ಜನ ಹಾಗೂ ಪೂಜ್ಯರು ಸಾಮೂಹಿಕವಾಗಿ ವಚನ ಪ್ರಾರ್ಥನೆ ಮೂಲಕ ಲಿಂಗೈಕ್ಯ ಶರಣರಿಗೆ ಗೌರವ ಸಲ್ಲಿಸಿದರು.

Share This Article
Leave a comment

Leave a Reply

Your email address will not be published. Required fields are marked *