ದೂಳುಹಿಡಿದು ಮಾಸುತ್ತಿರುವ ಬಸವ ಪುತ್ತಳಿ ನೋವಿನ ಸಂಗತಿ: ಸಿದ್ದಗಂಗಾ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ತಕ್ಷಣ ಕ್ರಮಕ್ಕೆ ಸ್ಥಳೀಯ ಶಾಸಕ, ಸಂಸದರಿಗೆ ಸಿದ್ದಗಂಗಾ ಶ್ರೀ ಪತ್ರ

ತುಮಕೂರು

ಬೆಂಗಳೂರಿನ ರಾಜಾಜಿನಗರದ ರಾಜಕುಮಾರ್ ರಸ್ತೆಯ ವೃತ್ತದಲ್ಲಿ ಸ್ಥಾಪಿಸಿರುವ ಶ್ರೀ ಜಗಜ್ಯೋತಿ ಬಸವೇಶ್ವರರ ಕಂಚಿನ ಮೂರ್ತಿಯ ಲೋಕಾರ್ಪಣೆಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ರಾಜಾಜಿನಗರದ ಶಾಸಕ ಸುರೇಶಕುಮಾರ ಮತ್ತು ಬೆಂಗಳೂರು ಕೇಂದ್ರದ ಸಂಸದ ಪಿ.ಸಿ. ಮೋಹನ್ ಅವರಿಗೆ ಸಿದ್ದಗಂಗಾಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಪತ್ರ ಬರೆದು ಕೋರಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಬೆಂಗಳೂರು ಮಹಾನಗರದ ಪಶ್ಚಿಮ ಕಾರ್ಡ್ ರಸ್ತೆ, ನವರಂಗ ಚಿತ್ರಮಂದಿರದ ಮೇಲುಸೇತುವೆಯ ಬಳಿಯ ಪಾರ್ಕ್‌ನಲ್ಲಿ ಇಟ್ಟು ಹಲವು ವರ್ಷಗಳೇ ಸಂದಿವೆ. ಪ್ರತಿಮೆಯ ಪ್ರತಿಷ್ಠಾನ ಮತ್ತು ಲೋಕಾರ್ಪಣೆಗೆ ಯಾವ ಕ್ರಮಗಳು ಆಗಿರುವುದಿಲ್ಲ.

ನೋವಿನ ಸಂಗತಿ ಏನೆಂದರೆ ಈ ಪ್ರತಿಮೆ ದೂಳುಹಿಡಿದು ಪ್ರತಿಮೆಗೆ ಸುತ್ತಿರುವ ಬಟ್ಟೆಯು ಹರಿದುಹೋಗಿ ಬಿಸಿಲು ಮಳೆಗೆ ಪ್ರತಿಮೆಯ ಬಣ್ಣ ಮಾಸಿಹೋಗಿ ಅಲ್ಲಲ್ಲಿ ಬಿರುಕುಬಿಟ್ಟುಕೊಂಡಿರುವುದು ಕಂಡುಬರುತ್ತಿದೆ. ಈ ಸ್ಥಳವು ಸಹ ಕುಡುಕರ, ಧೂಮಪಾನ ಮಾಡುವವರ ದಾರಿಹೋಕರ ತಾಣವಾಗಿದೆ. ಹೀಗೆಯೇ ಬಿಟ್ಟರೆ ಅಕ್ರಮ ಚಟುವಟಿಕೆಗಳಿಗೆ ಕಾರಣವಾಗುತ್ತದೆ, ಎಂದು ಪತ್ರದಲ್ಲಿ ಹೇಳಿದ್ದಾರೆ.

ರಾಜಾಜಿನಗರದ ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್‌ನವರು ಸ್ಥಳವನ್ನು ಸ್ವಚ್ಛಗೊಳಿಸಿ ಪ್ರತಿಮೆಗೆ ಹೊಸ ಹೊದಿಕೆಯನ್ನು ಹೊದಿಸಿದ್ದಾರೆ.

ಪ್ರಯುಕ್ತ, ಈ ಸ್ಥಳವನ್ನು ಸ್ವಚ್ಛಗೊಳಿಸಿ, ಸುತ್ತಲು ಗ್ರಿಲ್‌ಗಳನ್ನು ಅಳವಡಿಸಿ, ಹೂವಿನ ಕುಂಡಗಳನ್ನು ಇರಿಸಿ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲು ಸರ್ಕಾರ, ಮಹಾನಗರ ಪಾಲಿಕೆಯ ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬೀರಿ ಕ್ರಮಕೈಗೊಳ್ಳಬೇಕೆಂದು ಸಿದ್ದಲಿಂಗ ಶ್ರೀಗಳು ಶಾಸಕ, ಸಂಸದರನ್ನು ಕೋರಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
1 Comment
  • Welcome to you call Swamiji. What you have argued is highly re ll evant. You suggestion for BJP MLA and MP is in the right perspective. However, they are busy with realising of Anti- Basava and anti- vachana samskruti book prepared by the RSS’s gousts. And we followers of Basavanna believes in the principles of Basava philosophy yhan the statue.

Leave a Reply

Your email address will not be published. Required fields are marked *