ಬಸವ ಜಯಂತಿಗೆ ಪುತ್ಥಳಿ ಲೋಕಾರ್ಪಣೆ ಆಗದಿದ್ದರೆ ನಾವೇ ಮಾಡುತ್ತೇವೆ: ಸಂಘಟನೆಗಳ ಎಚ್ಚರಿಕೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

“ಲಿಂಗಾಯತ ಸಂಘಟನೆಗಳೆಲ್ಲ ಸೇರಿಕೊಂಡು ನಮ್ಮ ಕರೆಗೆ ಓಗೊಟ್ಟು ಬರುವ ಸ್ವಾಮೀಜಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆಯನ್ನು ನಾವೇ ಮಾಡಿ ಮುಗಿಸಿಬಿಡುತ್ತೇವೆ.”

ಬೆಂಗಳೂರು

ಮಹಾನಗರದ ರಾಜಾಜಿನಗರ ಕ್ಷೇತ್ರ ವ್ಯಾಪ್ತಿಯ ಬಸವ ಮಂಟಪದ ಹತ್ತಿರ, ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗಿರುವ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿ ಕಳೆದ ಎರಡು ವರ್ಷಗಳಿಂದ ಲೋಕಾರ್ಪಣೆಯಾಗದೇ ಮುಸುಕು ಮುಚ್ಚಿಕೊಂಡು ಕಾಯುತ್ತಿರುವುದು ಬಸವ ಅಭಿಮಾನಿಗಳಿಗೆ ತೀವ್ರ ಅಸಮಾಧಾನವನ್ನುಂಟುಮಾಡಿದೆ.

ಸ್ಥಳೀಯ ಶಾಸಕ ಸುರೇಶಕುಮಾರ ಈ ವಿಷಯದಲ್ಲಿ ಅವರು ನಿರಾಸಕ್ತಿ ತಾಳಿದ್ದಾರೆ ಎನ್ನಲಾಗಿದೆ. ಹಾಗಾಗಿ ಎಲ್ಲ ಕೆಲಸಗಳು ಬಹುತೇಕ ಮುಗಿದಿದ್ದರೂ ಲೋಕಾರ್ಪಣೆ ಆಗಬೇಕಿದ್ದ ಬಸವಣ್ಣನವರ ಮೂರ್ತಿ ಮುಸುಕು ಹಾಕಿಕೊಂಡು ತುಕ್ಕು ಹಿಡಿಯುತ್ತಿದೆ.

ಬಸವಣ್ಣನವರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಎಂದು ಪಾಲಿಕೆ, ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿರುವ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಮೋಹನಕುಮಾರ ಹೇಳುತ್ತಾರೆ, ಬರುವ ಬಸವ ಜಯಂತಿಗೆ ಪುತ್ಥಳಿ ಲೋಕಾರ್ಪಣೆಗೊಳ್ಳುತ್ತೆ ಎಂಬ ಭರವಸೆ ಇಟ್ಟುಕೊಂಡಿದ್ದೇವೆ.

ಲೋಕಾರ್ಪಣೆಗೊಳ್ಳದೇ ಹೋದರೆ, ನಾವು ಬಸವಾಭಿಮಾನಿಗಳು, ಲಿಂಗಾಯತ ಸಂಘಟನೆಗಳೆಲ್ಲ ಸೇರಿಕೊಂಡು, ನಮ್ಮ ಕರೆಗೆ ಓಗೊಟ್ಟು ಬರುವ ಸ್ವಾಮೀಜಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆಯನ್ನು ನಾವೇ ಮಾಡಿ ಮುಗಿಸಿಬಿಡುತ್ತೇವೆ. ಅಲ್ಲಿ ಮಾಡಬೇಕಾದ ಉಳಿದ ಕಾರ್ಯಗಳನ್ನು ಸರ್ಕಾರ, ಪಾಲಿಕೆಯವರು ಮುಂದೆ ಮಾಡಿಕೊಳ್ಳಲಿ ಎನ್ನುತ್ತಾರೆ.

ಈ ಬಗ್ಗೆ ಶ್ರೀ ಸಿದ್ದಗಂಗಾ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಚಂದ್ರಶೇಖರ್ ಅವರನ್ನು ಮಾತಾಡಿಸಿದಾಗ ಅವರು ಹೇಳಿದ್ದು, ಹಲವಾರು ಬಾರಿ ಶಾಸಕರಿಗೆ, ಪಾಲಿಕೆ ಗಮನಕ್ಕೆ ಪುತ್ಥಳಿ ವಿಷಯ ಗಮನಕ್ಕೆ ತರಲಾಗಿದೆ. ಈಚೆಗೆ ಮಹಾನಗರ ಪಾಲಿಕೆ ಮಂಡಿಸಿದ ಬಜೆಟ್ ನಲ್ಲಿ ಇದಕ್ಕಾಗಿ ಹಣಕಾಸು ನೀಡಲಾಗಿದೆಯಂತೆ. ಬಸವೇಶ್ವರ ಪುತ್ಥಳಿ ಲೋಕಾರ್ಪಣೆಗೆ ಸಂಬಂಧಿಸಿದ ಉಳಿದ ಅಲ್ಪ ಸ್ವಲ್ಪ ಕಾಮಗಾರಿ ಏಪ್ರಿಲ್ ತಿಂಗಳಲ್ಲಿ ಮಾಡಿ ಮುಗಿಸಲಾಗುತ್ತದೆ. ಮೇ ತಿಂಗಳಲ್ಲೇ ಇದರ ಲೋಕಾರ್ಪಣೆ ಆಗಬಹುದು ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ಹೇಳುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
5 Comments
  • ಬೇಗ ಲೋಕಾರ್ಪಣೆ ಆಗಲಿ, ವಿಳಂಬಮಾಡುವುದು ಒಂದುರೀತಿಯ ಅವಮಾನಕರವೆನಿಸುತ್ತದೆ. ಮಾನರು ಗಮನಹರಿಸಸಬೇಕು.

  • ಮಾಜಿ ಮೇಯರ್ ಅಕ್ಕ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತು ಅವರ ಪತಿ ಮಲ್ಲಿಕಾರ್ಜುನ್ ರವರು ಪುತ್ತಳಿ ಕಾರ್ಯ ಮುಗಿಸಿ ಉದ್ಘಾಟನೆ ನೆರವೇರಿಸಲು ಬಿಬಿಎಂಪಿ ಆಯುಕ್ತರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆಯುವ ಕಾರ್ಯ ಮಾಡುತ್ತಿದ್ದಾರೆ. ಈ ವರ್ಷದ ಬಸವ ಜಯಂತಿಯ ನಂತರ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ರವರ ಕೈಯಿಂದ ವಿಶ್ವಗುರು ಬಸವಣ್ಣ ನವರ ಪುತ್ತಳಿ ಉದ್ಘಾಟನೆ ನೆರವೇರಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಅಕ್ಕ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತು ಅವರ ಪತಿ ಮಲ್ಲಿಕಾರ್ಜುನ್ ರವರು ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಈ ವರ್ಷ ಪುತ್ತಳಿ ಉದ್ಘಾಟನೆ ಆಗುತ್ತದೆ. ಇದರ ಬಗ್ಗೆ ಶ್ರೀ ಸಿದ್ದಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಟಿ.ಎಂ. ಚಂದ್ರಶೇಖರ್ ನನ್ನ ಗಮನಕ್ಕೆ ತಂದಿದ್ದರು. ಅದನ್ನು ಅಕ್ಕ ಗಂಗಾಂಬಿಕೆ ಮಲ್ಲಿಕಾರ್ಜುನ್ ಬಳಿ ಪ್ರಸ್ತಾಪ ಮಾಡಿದ್ದೆ. ಆಗ ಅವರು ಮತ್ತು ಅವರ ಪತಿ ಮಲ್ಲಿಕಾರ್ಜುನ್ ಇಬ್ಬರೂ ಸೇರಿ ಪುತ್ತಳಿ ಉದ್ಘಾಟನೆ ನೆರವೇರಿಸುವ ದಿಶೆಯಲ್ಲಿ ಮಾಡುತ್ತಿರುವ ಪ್ರಯತ್ನ ನನ್ನ ಗಮನಕ್ಕೆ ತಂದಿದ್ದರು. ಶರಣು ಶರಣಾರ್ಥಿ.

  • ದಾವಣಗೆರೆಯಿಂದ ಬೆಂಗಳೂರು ಮೈಸೂರು ಭಾಗದ ಜನರು ಲಿಂಗಾಯತ ಧರ್ಮ ಅನ್ನದೆ, ವೀರಶೈವ ಲಿಂಗಾಯತ ಅನ್ನುತ್ತಾರೆ.
    ಅವರಿಗೆ ಲಿಂಗಾಯತ ಧರ್ಮದ ಒಂದು ಪಂಗಡ ವೀರಶೈವ ಪಂಗಡ ಅನ್ನುವುದು ಗೊತ್ತಿಲ್ಲ. ವೀರಶೈವರು ಕೇವಲ 0.5% ಜನರು ಇಲ್ಲ.
    ಈ ಪಂಗಡವು15 ನೇ ಶತಮಾನದಲ್ಲಿ ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿದರು. ಚಿಕ್ಕ ದೇವರಾಜ ಮಹಾರಾಜ ಎಲ್ಲ ಲಿಂಗಾಯತ ಮಠಾಧೀಶರ ಕೊಲೆ ಮಾಡಿದ ನಂತರ, ಇವರು ಮಠಗಳನ್ನು ಹೊಕ್ಕು ಆಸ್ತಿ ಹಿಡಿತದಲ್ಲಿ ಪಡೆದರು.
    ಇವರು ಪೂರ್ಣ ಪ್ರಮಾಣದ ಲಿಂಗಾಯತರು ಅಲ್ಲ. ಇನ್ನೂ ತಮ್ಮ ಪಂಗಡ ಪುರುಷರಿಗೆ ಮಾತ್ರ ಆಯ್ಯಚಾರ (ಉಪನಯನ ) ಮಾಡುತ್ತಾರೆ.
    ಕಾರಣ ಯಾರು ಆಯ್ಯಚಾರ ಮಾಡಿಸಿಕೊಳ್ಳುವ ಸಂಪ್ರದಾಯ ಇಟ್ಟು ಕೊಂಡಿದ್ದಾರೋ ಅವರು ವೀರಶೈವ ಪಂಗಡದವರು,
    ಉಳಿದವರು ಲಿಂಗಾಯತರು.
    ಕಾರಣ ವೀರಶೈವ ಲಿಂಗಾಯತ ಧರ್ಮ ಅಂತ ಹೇಳದೆ, ಲಿಂಗಾಯತ ಧರ್ಮ ಅಂತ ಹೇಳಿರಿ.

    • ಸರ್ಕಾರಗಳು ಹಾಗು ಆಡಳಿತವರ್ಗ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಪುತ್ಥಳಿಯ ಮುಂದೆ ಒಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ನಂತರ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ. ಇಂತಹ ವಿಚಾರಗಳನ್ನ ಗಮನಿಸಿ ಬಸವ ಭಕ್ತರಿಗೆ ಎಚ್ಚರಿಸುತ್ತಿರುವ ಬಸವ ಮೀಡಿಯಾಕ್ಕೆ ಅನಂತ ಶರಣಾರ್ಥಿಗಳು

Leave a Reply

Your email address will not be published. Required fields are marked *