ದಾವಣಗೆರೆ
ತಾಲೂಕಿನ ಹೆಮ್ಮನಬೇತೂರು ಗ್ರಾಮಸ್ಥರು ರಕ್ತದಲ್ಲಿ ಸಹಿ ಮಾಡುವ ಮೂಲಕ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ ಶ್ರೀಪೀಠದಲ್ಲಿ ಮು೦ದುವರಿಯುವಂತೆ ಒತ್ತಾಯಿಸಿದ್ದಾರೆ.
ಗ್ರಾಮದ ದೇವಸ್ಥಾನ ಮುಂಭಾಗದಲ್ಲಿ ನೆರೆದ ಭಕ್ತರು ಉಸಿರಿರುವವರೆಗೂ ಶ್ರೀಗಳೇ ಪೀಠದ ಗುರುಗಳಾಗಿ ಮುಂದುವರಿಯಬೇಕೆಂದು ಒತ್ತಾಯಿಸಿ ರಕ್ತದಲ್ಲಿ ಸಹಿ ಮಾಡಿದ ಪತ್ರವನ್ನು ಸಿರಿಗೆರೆ ಮಠಕ್ಕೆ ಕಳಿಸಿಕೊಟ್ಟರು.
ಶ್ರೀಗಳ ವಿರುದ್ಧ ಆರೋಪ ಮಾಡುತ್ತಿರುವ ಮುಖಂಡರ ವರ್ತನೆಯನ್ನೂ ಖಂಡಿಸಿದರು.