ರಂಗಕರ್ಮಿ ಪಿ‌. ಗಂಗಾಧರಸ್ವಾಮಿ‌ ನಿಧನಕ್ಕೆ ಪಂಡಿತಾರಾಧ್ಯ ಶ್ರೀಗಳು ಸಂತಾಪ

ಸಾಣೇಹಳ್ಳಿ‌:

ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕರು, ಸಮುದಾಯ ಚಳವಳಿಯ ಪ್ರಮುಖ ಸಂಘಟಕರು ಹಾಗೂ ರಂಗಾಯಣದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟ ಮಾರ್ಗದರ್ಶಕರಾದ ಪಿ. ಗಂಗಾಧರಸ್ವಾಮಿ ಅವರ ನಿಧನಕ್ಕೆ ಪಂಡಿರಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮತ್ತು ಸಾಣೇಹಳ್ಳಿ ಕಲಾಸಂಘ ಸಂತಾಪ ವ್ಯಕ್ತಪಡಿಸಿವೆ.

ಅವರು ನಮ್ಮ ಕಲಾಸಂಘದ ಹಾಗೂ ನಮ್ಮ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದರು. ರಂಗಭೂಮಿ ಹಾಗೂ ಕಲಾಕ್ಷೇತ್ರಕ್ಕೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಗೌರವಿಸಿ ಅವರಿಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿತ್ತು. ತಮ್ಮ ಜೀವಿತಾವಧಿಯುದ್ದಕ್ಕೂ ನೂರಾರು ರಂಗಕರ್ಮಿಗಳನ್ನು ತಿದ್ದಿ-ತೀಡಿ ಬೆಳೆಸಿದ ಅವರ ರಂಗಸೇವೆ ಹಾಗೂ ಮಾರ್ಗದರ್ಶನ ಎಂದೆಂದಿಗೂ ಸ್ಮರಣೀಯ.

ಗಂಗಾಧರ ಸ್ವಾಮಿ ಅಗಲಿಕೆಯಿಂದ ಕನ್ನಡ ರಂಗಭೂಮಿಗೆ ನಷ್ಟವಾಗಿದೆ. ಅವರ ಅಗಲುವಿಕೆಯಿಂದ ಅವರ ಪತ್ನಿ ಶೀಲಾ, ಮಗಳು ಸಮತಾ, ಮಗ ಸಂಘರ್ಷ ಮತ್ತು ಅವರ ಕುಟುಂಬವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಶಿವಶರಣರು ಕರುಣಿಸಲಿ ಎಂದು ಸ್ವಾಮಿಗಳು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *