ರೇಣುಕಾ ಜಯಂತಿ: ಬಸವಣ್ಣನವರ ಭಾವಚಿತ್ರ ಬಳಸಿಕೊಳ್ಳುತ್ತಿದ್ದಾರೆ (ಬಸವರಾಜ ರೊಟ್ಟಿ)

ಬಸವರಾಜ ರೊಟ್ಟಿ
ಬಸವರಾಜ ರೊಟ್ಟಿ

ಪಂಚಾಚಾರ್ಯರು ವೀರಶೈವ ಲಿಂಗಾಯತದ ಮೂಲ ಪುರುಷರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

ಬೆಳಗಾವಿ

(ರೇಣುಕಾಚಾರ್ಯ ಜಯಂತಿಗೆ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರ ಪ್ರತಿಕ್ರಿಯೆ.)

1) ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?

ರೇಣುಕಾಚಾರ್ಯರ, ಜಯಂತಿಯನ್ನು ಇತ್ತೀಚೆಗೆ ಆಚರಣೆ ಮಾಡುವ ಸಂಪ್ರದಾಯ ಪ್ರಾರಂಭವಾಗಿದೆ. ಈಗ ಸುಮಾರು ಮೂರು ವರ್ಷಗಳ ಹಿಂದೆ ಬೊಮ್ಮಾಯಿ ಸರಕಾರದ ವತಿಯಿಂದ ಆದೇಶವಾಗಿ ರೇಣುಕಾಚಾರ್ಯರ ಜಯಂತಿ ಆಚರಿಸುವ ಪದ್ಧತಿ ಪ್ರಾರಂಭವಾಗಿದೆ.

2) ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?

ರೇಣುಕಾಚಾರ್ಯ ಜಯಂತಿಯನ್ನು ಜನಪ್ರಿಯಗೊಳಿಸುವ ಕಾರ್ಯ ವೀರಶೈವರಿಂದ ಹಾಗೂ ಹಿಂದುಪರ ಸಂಘಟನೆಗಳಿಂದ ನಡೆದಿದೆ. ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪ್ರಭಾವ ವಿಶ್ವವ್ಯಾಪಿ ಆಗುತ್ತಿರುವುದನ್ನು ಕಂಡು, ಪರ್ಯಾಯವಾಗಿ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲು ಪ್ರಾರಂಭಿಸಿದ್ದಾರೆ. ಬಸವಣ್ಣನವರ ಅನುಯಾಯಿಗಳನ್ನು ಆಕರ್ಷಿಸಲು ಜಯಂತಿಯ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ.

3) ಕಳೆದ ಕೆಲವು ವರ್ಷಗಳ ಯಾವುದಾದರು ಬೆಳವಣಿಗೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಅನಿಸುತ್ತದೆಯೇ?

ಪಂಚಪೀಠಗಳ ಜಗದ್ಗುರುಗಳು, ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಯ ಹೋರಾಟಕ್ಕೆ ವಿರೋಧವಾಗಿದ್ದಾರೆ. ಅವರು ಲಿಂಗಾಯತ (ವೀರಶೈವ ಲಿಂಗಾಯತ) ಹಿಂದು ಧರ್ಮದ ಒಂದು ಭಾಗವೆಂದು ಪ್ರತಿಪಾದಿಸುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ವಚನದರ್ಶನ ಮಿಥ್ಯ vs ಸತ್ಯ ಗ್ರಂಥ ಬಿಡುಗಡೆಯ ಕಾರ್ಯಕ್ರಮವನ್ನು ವಿರೋಧಿಸಿ ಎರಡು ಕಂತುಗಳಲ್ಲಿ (2+3) ಐವರು ಪಂಚಾಚಾರ ಜಗದ್ಗುರುಗಳು ಬೇರೆ ಬೇರೆಯಾಗಿ ಹೇಳಿಕೆಯನ್ನು ನೀಡಿದ್ದಾರೆ.

4) ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?

ರೇಣುಕಾಚಾರ್ಯ ಜಯಂತಿಯಲ್ಲಿ ಅವರು ವೀರಶೈವದ ಪ್ರಾಚೀನತೆಯ ಬಗ್ಗೆ, ರೇಣುಕಾಚಾರ್ಯರು, ಪಂಚಾಚಾರ್ಯ ಜಗದ್ಗುರುಗಳು ವೀರಶೈವ ಲಿಂಗಾಯತದ ಮೂಲ ಪುರುಷರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

5) ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?

ರೇಣುಕಾಚಾರ್ಯರ ಜಯಂತಿಯನ್ನು ಕರ್ನಾಟಕ ರಾಜ್ಯ ಸರ್ಕಾರವು ಆಚರಿಸುತ್ತಿದ್ದು, ಆ ಕಾರ್ಯಕ್ರಮಗಳಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಜಂಗಮ ಸಂಘಟನೆಗಳು, ಹಿಂದುಪರ ಸಂಘಟಣೆಗಳು ರೇಣುಕಾಚಾರ್ಯ ಜಯಂತಿಯಲ್ಲಿ ಕೈ ಜೋಡಿಸುತ್ತಿದ್ದಾರೆ.

6) ಈ ಬೆಳವಣಿಗೆಯನ್ನು ಲಿಂಗಾಯತರು ಹೇಗೆ ನೋಡಬೇಕು? ಹೇಗೆ ಪ್ರತಿಕ್ರಿಯೆ ನೀಡಬೇಕು?

ರೇಣುಕಾಚಾರ್ಯ ಜಯಂತಿಯನ್ನು ಸಾಮಾನ್ಯವಾಗಿ ಸರ್ಕಾರದಿಂದ ಆಚರಿಸುವ ಇತರೆ ಜಯಂತಿಗಳಂತೆ ನೋಡಬೆಕು, ವಿಶ್ಲೇಷಿಸಸಬೇಕು. ಅದರ ಹೊರತಾಗಿ ಬೇರೆ ಏನು ವಿಶೇಷತೆ ಇಲ್ಲ. ರೇಣುಕಾಚಾರ್ಯರ ಅನುಯಾಯಿಗಳು ಅವರ ಜಯಂತಿಯನ್ನು ಆಚರಿಸಲಿ. ಅದಕ್ಕೆ ನಾವು ಪ್ರತಿಕ್ರಿಸುವ ಅವಶ್ಯಕತೆ ಇಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
3 Comments
  • Yes sir
    It’s true Renuka jayanthi celebrations started recently.
    Absolutely it’s confusion and more ever conflicts between lingyath,Veershaiva dharma.
    In between recent days started Renuka Charya Jayanthi, the government of Karnataka full officially celebrated in Ravindra kalachethra.
    It’s not good sign, the present government wants much more conflicts between with in us.
    Firstup all to stop the all issues and conflicts
    Amoung
    Lingyath
    Veershiva,Renuka charts followers
    Groupism
    Conclusion: it’s my opinion , doest’t consider as a generalized. unity is the strength .lastly the we are all following lord Baswanna and we believe the same.

    • ಈಗಾಗಲೇ ಹಾಲು ಮತ ಕುರುಬರ ಸಮಾಜದ ಸ್ವಾಮಿಗಳು ಸರ್ಕಾರದ ವತಿಯಿಂದ ಆಚರಿಸಲ್ಪಡುತ್ತಿರುವ ರೇಣುಕಾಚಾರ್ಯರ ಜಯಂತಿಗೆ ತಮ್ಮ ವಿರೋಧವಿದೆ ಬದಲಿಗೆ, ರೇವಣಸಿದ್ಧರ ಜಯಂತಿಯನ್ನಾಗಿ ಆಚರಿಸಬೇಕು ಎ೦ದು ಕರೆ ನೀಡಿದ್ದಾರೆ. ರೇಣುಕಾಚಾರ್ಯ ಪೌರಾಣಿಕ ಮತ್ತು ಕಾಲ್ಪನಿಕ. ರೇವಣಸಿದ್ಧರು ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದ ಬಸವತತ್ವಗಳಿಂದ ಆಕರ್ಷಿತರಾಗಿ ಅದನ್ನು ಅನುಸರಿಸುತ್ತಾ ಬಂದಿದ್ದ ಐತಿಹಾಸಿಕ ಮಹಾಪುರುಷರು …. ಇಲ್ಲದ ರೇಣುಕಾಚಾರ್ಯರ ಬದಲಿಗೆ ಇತಿಹಾಸ ಹೊಂದಿದ ಜಗದ್ಗುರು ರೇವಣಸಿದ್ದೇಶ್ವರ ಜಯಂತಿಯನ್ನು ಸರ್ಕಾರಿ ವೆಚ್ಚದಲ್ಲಿ ಆಚರಿಸುವುದು ಅರ್ಥಪೂರ್ಣ!

  • ಗುರುಲಿಂಗಪ್ಪ ಹೊಗತಾಪುರ, ಬೀದರಜಿಲ್ಲೆ, ಬೀದರ. says:

    ರೇವಣಸಿದ್ಧನನ್ನೇ ಕೇಣುಕಾಚಾರ್ಯ ಎಂದು ಕಾಲ್ಪನಿಕ ಪುರಾಣವನು ಬರೆದಿರುತ್ತಾರೆ.ರೇವಣಸಿದ್ಧ ಒಬ್ಬ ಕಾಳಾಮುಖ ಶೖವ, ಇವನಿಗೆ ಹೆಂಡಿರು ಮಕ್ಕಳು ಹೊಂದಿದ ವ್ಯಕ್ತಿ. ಬಸವಾದಿ ಶರಣರ ವಿಚಾರದವನಾಗಿರಲಿಲ್ಲ.

Leave a Reply

Your email address will not be published. Required fields are marked *