ಶರಣ ಸಾಹಿತ್ಯ ಸಮ್ಮೇಳನ: ವಚನ ದರ್ಶನ ತಂಡದ ಜೊತೆ ಕೈ ಜೋಡಿಸುವುದು ಹೇಯ ಕೃತ್ಯ

ಮೀನಾಕ್ಷಿ ಬಾಳಿ
ಮೀನಾಕ್ಷಿ ಬಾಳಿ

ಇವರೆಲ್ಲಾ ಅದಾವ ಆಮಿಷಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ.

ಕಲಬುರಗಿ

ಶರಣ ಸಾಹಿತ್ಯ ಸಮ್ಮೇಳನ ಎಂದು ಕರೆದುಕೊಂಡು ವಚನ ದರ್ಶನ ತಂಡಕ್ಕೆ, ಅವರ ಸಿದ್ದಾಂತಕ್ಕೆ, ವೇದಿಕೆ ಕಲ್ಪಿಸಿಕೊಡುವುದು ಅತ್ಯಂತ ಹೇಯ ಕೃತ್ಯ.

ನನ್ನ ಗಮನಕ್ಕೆ ತರದೇ ಮಲ್ಲೇಪುರಂ ವೆಂಕಟೇಶ್ ಅವರನ್ನು ಮಾರ್ಚ್ 23ರ ಮೈಸೂರಿನ ಸಮ್ಮೇಳನಕ್ಕೆ ಕರೆಯಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ ಸೋಮಶೇಖರ್ ಹೇಳಿದ್ದಾರೆ.

ಈ ಮಾತನ್ನು ಯಾರೂ ಒಪ್ಪುವುದಿಲ್ಲ. ಅಧ್ಯಕ್ಷರ ಗಮನಕ್ಕೆ ತರದೆ ಯಾವುದನ್ನೂ ರೂಪಿಸಲಾಗುವುದಿಲ್ಲ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮೈಸೂರಿನವರೆ ಆಗಿರುವುದರಿಂದ ನುಣುಚಿಕೊಳ್ಳುತ್ತಿದ್ದಾರೆ.

ತಾವು ಬಸವತತ್ವ ಪರ ಎನ್ನುತ್ತಲೆ ಅದನ್ನು ಮಣ್ಣು ಮುಕ್ಕಿಸುವವರೊಂದಿಗೆ ಕೈ ಜೋಡಿಸುತ್ತಿರುವ ಇವರನ್ನು ಬಸವ ತತ್ವಾನುಯಾಯಿಗಳು ಎನ್ನಬಹುದೆ.

ಮಿಥ್ಯ-ಸತ್ಯ ಪುಸ್ತಕದ ಕಾರ್ಯಕ್ರಮದಲ್ಲಿ ಏನು ನಡೆಯಿತು ಎನ್ನುವುದು ತನಗೆ ಗೊತ್ತಿಲ್ಲ ಎನ್ನುತ್ತಾರೆ. ಇವರಿಗೆ ವಚನ ದರ್ಶನ ಪುಸ್ತಕದ ವಾದ, ಉದ್ದೇಶ, ಹಿಂದಿರುವ ಸಂಘಟನೆಗಳೂ ಗೊತ್ತಿಲ್ಲವೇ? ಒಂದು ವರ್ಷದಿಂದ ಈ ವೈದಿಕ ಪುಸ್ತಕವೆಬ್ಬಿಸಿರುವ ವಿವಾದ, ಅದಕ್ಕೆ ಬಂದಿರುವ ತೀಕ್ಷ್ಣ ಪ್ರತಿಕ್ರಿಯೆಯೂ ಗೊತ್ತಿಲ್ಲವೇ?

ಸೋಮಶೇಖರ ಅವರು ಈ ಎಲ್ಲ ಕೃತಿಗಳನ್ನು ಓದಿಲ್ಲವಾದರೆ ಪಟ್ಟಾಗಿ ಕುಳಿತು ಓದಲಿ, ಬಸವ ತತ್ವವನ್ನು ಗೌರವಿಸುವುದನ್ನು ಕಲಿಯಲಿ. ಇಲ್ಲವೇ ವೈದಿಕರ ಬಾಲಂಗೋಚಿಯಾಗಿ ಅತ್ತಲೆ ಹೋಗಲಿ.

ಸುತ್ತೂರು ಶ್ರೀಗಳು ಕುಂಭಮೇಳಕ್ಕೆ ಹೋಗಿ ಡುಮಕಿ ಹೊಡೆದು ಬರುತ್ತಾರೆ. ಇನ್ನೊಂದೆಡೆ ಅರವಿಂದ ಜತ್ತಿ ಎಂಬ ಮಹಾನುಭಾವರು ವಚನಗಳ ಕುರಿತು ಸುಳ್ಳು ಹೇಳುತ್ತಿರುವ ವೈದಿಕರ ದರ್ಬಾರಿನಲ್ಲಿ ಕುಳಿತು ತಲೆದೂಗುತ್ತಾರೆ. ಸೋಮಶೇಖರ ತಮಗೇನೂ ಗೊತ್ತಿಲ್ಲ ಎಂದು ಅಮಾಯಕರಂತೆ ನಟಿಸುತ್ತಾರೆ. ಇವರೆಲ್ಲಾ ಅದಾವ ಆಮಿಷಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ.

ಒಂದು ಮಾತ್ರ ಸತ್ಯ. ಇವರು ನಮ್ಮೊಳಗಿರುವ ಬಸವ ತತ್ವದ ವೈರಿಗಳು. ಅವಕಾಶವಾದಿಗಳು ಮತ್ತು ಜಾತಿ ಜಾಡ್ಯದ ಕರ್ಮಠರು. ದುರಂತವೆಂದರೆ ಇವರೆಲ್ಲರೂ ತಮ್ಮ ಮಾತುಗಳಲ್ಲಿ ಪುಂಖಾನುಪುಂಖವಾಗಿ ವಚನಗಳನ್ನು ಉದ್ಧರಿಸುತ್ತಾರೆ.

ಒಟ್ಟಾರೆ ಇವರಿಗೆ ಬಸವ ತತ್ವವೆಂಬುದು ಹುರಿಯುವ ಹಂಚು ಇದ್ದ ಹಾಗೆ. ಈ ಹಂಚಿನ ಮೇಲೆ ತಮ್ಮ ತಮ್ಮ ಬೇಳೆ ಬೇಯಿಸಿಕೊಂಡು ಹೊಟ್ಟೆ ಹೊರೆಯುತ್ತಾರೆ.

ಬಸವಣ್ಣನವರು ಅಂದು “ಏನಯ್ಯ ವಿಪ್ರರು ನುಡಿದಂತೆ ನಡೆಯರು. ತಮಗೊಂದು ಬಟ್ಟೆ, ಲೋಕಕ್ಕೊಂದು ಬಟ್ಟೆ” ಎಂದಿದ್ದಾರೆ. ಆದರೆ ಈ ಅಬ್ರಾಹ್ಮಣ್ಯ ತೋರಿಕೆಯ ಲಿಂಗಧಾರಿಗಳಿಗೆ ಹೊಟ್ಟೆ ಹೊರೆಯಲಿಕ್ಕೆ ಅದೆಷ್ಟು ಬಟ್ಟೆಗಳೋ ಲೆಕ್ಕವಿಟ್ಟವರಾರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
8 Comments
  • ಒಂದು ಮಾತ್ರ ಸತ್ಯ. ಇವರು ನಮ್ಮೊಳಗಿರುವ ಬಸವ ತತ್ವದ ವೈರಿಗಳು

  • ಮಿನಾಕ್ಷಿ ಬಾಳಿದವರ ಯುವರ ಈ ಮಾತು 💯 right
    ಬಸವತತ್ವದವರೆಂದು ಹೇಳಿಕೊಳ್ಳುವ ಅನೇಕ ಹಿರಿಯರು ನಮಗರಿವಿಲ್ಲದೆ rss ಕುತಂತ್ರಕ್ಕೆ ಬಲಿಯಾಗಿ ಅದನ್ನು ಹೇಳಿಕೊಳ್ಳದಂತ ಮನಸ್ಥಿತಿಯಲ್ಲಿದ್ದಾರೆ ಆ ತಪ್ಪುಗಳಿಂದ ಆಚೆ ಬಂದು ,ಸರಿಪಡಿಸದ ಹೊರತು ಅವರು ಇಷ್ಟುದಿನ ಶ್ರಮಿಸಿದ ಶ್ರಮ ವ್ಯಥ೯ವಾಗುವುದಲ್ಲದೆ “ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ” ಯಂಬಂತಾಗುತ್ತದೆ.
    (ಲಿಂಗಸಾಕ್ಷಿಯಾಗಿ)

  • ಬಸವತತ್ವನಿಯಾಯಿಗಳು ಅಂತ ಹೇಳಿಕೊಳ್ಳುತ್ತಲೇ ಬಸವ ವಿರೋಧಿಗಳ ಜೊತೆ ಕೈಜೋಡಿಸುವವರ ಬಗ್ಗೆ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯ.

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ, ಬೀದರ says:

    ಮಲ್ಲೇಪುರಂ ವೆಂಕಟೇಶ ಎನ್ನುವ ಈ ಸಂಸ್ಕೃತ ಪಂಡಿತರು ಸೇರಿ ವಚನ ಸಾಹಿತ್ಯ ಕುರಿತು ಆರ್ ಎಸ್ ಎಸ್ ನೊಂದಿಗೆ ಕೖ ಜೋಡಿಸಿದ ತಮಗೆಲ್ಲ ಗೊತ್ತಿಲ್ಲದಂತೆ ಸೋಂಗುಹಾಕುವ ಇವರ ಹುಸಿ ಅಮಾಯಕ ನಡೆಗೆ ನಾಚಿಕೆ ಆಗಬೇಕು.ಶರಣ ಸಾಹಿತ್ಯ ಪರಿಷತನ ಅದ್ಯಕ್ಷರ ಹುಸಿನಡೆಗೆ ಏನನ್ನ ಬೇಕೋ. ವಚನ ದರ್ಶನ ಎನ್ನುವ ವಿಷಯವಾಗಿ ತಮಗೆಗೊತ್ತಿಲ್ಲ ಎನ್ನುವ ಹುಸಿ ಹೇಳಿಕೆ ಒತ್ತಟ್ಟಿಗಿರಲಿ. ಸಮ್ಮೇಳನದಲ್ಲಿ ಈ ವಿಷಯವನ್ನು ಬಲವಾಗಿ ಪ್ರತಿಭಟಿಸಿ ಆ ಪುಸ್ತಕವನ್ನು ಹಿಂಪಡೆಯುವಂತೆ ಮಾಡಲೇಬೇಕು. ಈ ಕೆಲಸ ಅವಶ್ಯ ನಡೆಯಬೇಕು. ವಂದನೆಗಳೊಂದಿಗೆ.

Leave a Reply

Your email address will not be published. Required fields are marked *