ಎಂದಿನಂತೆ ಲಿಂಗಾಯತರಲ್ಲಿ ಗೊಂದಲ ಸೃಷ್ಟಿಸುವುದು ಇದರ ಉದ್ದೇಶ
ವಿಜಯಪುರ
ಬಸವಣ್ಣನವರ ಪ್ರಭಾವ ಮತ್ತು ಬಸವತತ್ವವನ್ನು ನಾಶಮಾಡಲು ಮಾಡುತ್ತಿರುವ ಪ್ರಯತ್ನಗಳು ಇಂದು ನಿನ್ನೆಯವಲ್ಲ. ಅವು ಹನ್ನೆರಡನೇ ಶತಮಾನದಲ್ಲಿಯೆ ಆರಂಭಗೊಂಡಿವೆ. ಒಂಬತ್ತು ಶತಮಾನಗಳಾದರೂ ಬಸವದ್ರೋಹಿಗಳು ಅದರಲ್ಲಿ ಯಶಸ್ಸು ಕಂಡಿಲ್ಲ.
೧೫೦ ವರ್ಷಗಳ ಬ್ರಿಟೀಷ್ ಆಡಳಿತ ಹಾಗೂ ಸ್ವಾತಂತ್ರ ಭಾರತದ ೫೫ ವರ್ಷಗಳ ಆಡಳಿತದಲ್ಲಿ ವೀರಶೈವ ಪದ ಸರಕಾರಿ ದಾಖಲೆಯಲ್ಲಿರಲಿಲ್ಲ. ೨೦೦೨ ರಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತದ ಜೊತೆಗೆ ವೀರಶೈವ ಶಬ್ದ ಸೇರಿಸುವಲ್ಲಿ ಪಂಚಪೀಠದ ಜಂಗಮರು ಯಶಸ್ವಿಯಾದರು. ಈಗ ಕಾಲ್ಪನಿಕ ರೇಣುಕನ ಜಯಂತಿ ಕೂಡ ಸರಕಾರ ಆಚರಿಸುವಂತಾಗಿದೆ.
(ಸರಕಾರಿ ಕಾರ್ಯಕ್ರಮವಾಗಿ ಆಚರಣೆಯಾಗುತ್ತಿರುವ ರೇಣುಕಾಚಾರ್ಯ ಜಯಂತಿಗೆ ಶರಣ ತತ್ವ ಚಿಂತಕ ಜೆ ಎಸ್ ಪಾಟೀಲರ ಪ್ರತಿಕ್ರಿಯೆ.)
೧. ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?
ರೇಣುಕ ಜಯಂತಿ ಆಚರಣೆ ನನ್ನ ೫೮ ವರ್ಷದ ಬದುಕಿನಲ್ಲಿ ಯಾವತ್ತೂ ನೋಡಿಲ್ಲ. ಬಹುಶಃ ಪಂಚಪೀಠದ ಜಾತಿ ಜಂಗಮರ ಮಠಗಳು ಬಿಟ್ಟರೆ ಅದು ಬೇರೆಡೆ ಎಲ್ಲೂ ಆಚರಣೆ ಆಗುತ್ತಿರಲಿಲ್ಲ. ಸಾಮಾನ್ಯ ಜಾತಿ ಜಂಗಮರೂ ಕೂಡ ಇಂದಿಗೂ ಅದನ್ನು ಆಚರಿಸುವುದಿಲ್ಲ. ಈಗಲೂ ರೇಣುಕ ಜಯಂತಿಯ ಆಚರಣಾ ಪ್ರಮಾಣ ಏರಿಕೆಯಾಗಿಲ್ಲ.
೨. ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?
೨೦೧೯ರ ಸಮ್ಮಿಶ್ರ ಸರಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಸರಕಾರ ರೇಣುಕ ಜಯಂತಿ ಆಚರಣೆ ಘೋಷಿಸಬೇಕೆಂದು ಮನವಿ ಮಾಡಲಾಗಿತ್ತು. ಇದ್ದುದ್ದರಲ್ಲಿಯೆ ಅಲ್ಪಸ್ವಲ್ಪ ಪ್ರಜ್ಞಾವಂತರಾಗಿದ್ದ ಯಡಿಯೂರಪ್ಪ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಮುಂದೆ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಬಿಜೆಪಿಯನ್ನು ನಿಯಂತ್ರಿಸುವ ಹಿಂದುತ್ವವಾದಿ ಸಂಘಟನೆಯ ಪ್ರಭಾವದಿಂದ ಪಂಚಪೀಠದ ಜಂಗಮರು ರೇಣುಕನ ಜಯಂತಿ ಸರಕಾರಿ ಆಚರಣೆಯಾಗಿ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾದರು.
ಇದಕ್ಕೆ ಕಾರಣˌ ವೀರಶೈವ ಲಿಂಗೀ ಬ್ರಾಹ್ಮಣರು ಮತ್ತು ಸಂಘಿ ಬ್ರಾಹ್ಮಣರಿಗೆ ಲಿಂಗಾಯತರಲ್ಲಿ ಹೆಚ್ಚುತ್ತಿರುವ ಬಸವ ಪ್ರಜ್ಞೆಯ ಭಯ. ಇದರ ಉದ್ದೇಶ ಎಂದಿನಂತೆ ಲಿಂಗಾಯತರಲ್ಲಿ ಗೊಂದಲ ಸೃಷ್ಟಿಸುವುದು.
೩. ಕಳೆದ ಕೆಲವು ವರ್ಷಗಳ ಯಾವುದಾದರು ಬೆಳವಣಿಗೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಅನಿಸುತ್ತದೆಯೇ?
ಹೌದುˌ ಬಸವ ಪ್ರಜ್ಞೆಯ ಹೆಚ್ಚಳˌ ಲಿಂಗಾಯತ ಸ್ವತಂತ್ರ ಧರ್ಮದ ಸಂವಿಧಾನ ಮಾನ್ಯತೆ ಬೇಡಿಕೆಗೆ ಹೆಚ್ಚಿದ ಕೂಗು, ಸರಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವ ನಿರ್ಧಾರ, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿ ಘೋಷಣೆ ಮಾಡಿದ್ದರ ಕುರಿತು ಮತ್ಸರ ಹಾಗೂ ಭಯ ಹೊಂದಿರುವ ಪಂಚಪೀಠದ ಜಂಗಮರು ರೇಣುಕ ಜಯಂತಿಯ ಮೂಲಕ ಪ್ರತಿಕ್ರೀಯೆ ನೀಡುತ್ತಿದ್ದಾರೆ.
೪. ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?
ಹಿಂದುತ್ವವಾದಿಗಳು ರಾಮಾಯಣˌ ಮಹಾಭಾರತ ಮುಂತಾದ ಕಾಲ್ಪನಿಕ ಪುರಾಣಗಳನ್ನು ಇತಿಹಾಸವಾಗಿ ಬಿಂಬಿಸಲು ಹೇಗೆ ಪ್ರಯತ್ನಿಸುತ್ತಿದ್ದಾರೆಯೋ ಹಾಗೆಯೇ ವೀರಶೈವ ಲಿಂಗಿ ಬ್ರಾಹ್ಮಣರು ಕಾಲ್ಪನಿಕ ರೇಣುಕರನ್ನು ಐತಿಹಾಸಿಕ ವ್ಯಕ್ತಿ ಎಂದು ಸಾಬೀತು ಮಾಡಲು ಪ್ರಯತ್ನಿಸುವುದರ ಸಂದೇಶ ಹರಡುತ್ತಿದ್ದಾರೆ.
೫. ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?
ರೇಣುಕ ಜಯಂತಿಯ ಆಚರಣೆಯ ಹಿಂದೆ ಪಂಚಪೀಠದ ಜಾತಿ ಜಂಗವರುˌ ವೀರಶೈವ ಮಹಾಸಭೆಯ ಕೆಲವು ಪುಢಾರಿಗಳುˌ ಮಾಜಿ ಶಾಸಕ ವೀರಣ್ಣ ಚರಂತಿಮಠˌ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕೌಟಗಿಮಠˌ ಜಮಖಂಡಿ ಶಾಸಕ ಜಗದೀಶ ಗುಡಗಂಟಿˌ ಮಾಜಿ ಮಂತ್ರಿ ರೇಣುಕಾಚಾರ್ಯ ಮುಂತಾದ ವೀರಶೈವ ಲಿಂಗೀ ಬ್ರಾಹ್ಮಣರು ಮತ್ತು ಬಿಜೆಪಿಯನ್ನು ನಿಯಂತ್ರಿಸುವ ಹಿಂದುತ್ವವಾದಿ ಸಂಘಟನೆಯ ಸಂಘಿ ಬ್ರಾಹ್ಮಣರು ಇದರ ಹಿಂದಿದ್ದಾರೆ. ಆದರೆ ಇದಕ್ಕೆಲ್ಲ ಜನ ಬೆಂಬಲವಿಲ್ಲ. ಆದರೆ ಇವರಿಗೆ ಜನಬೆಂಬಲಕ್ಕಿಂತ ಸರಕಾರಿ ದಾಖಲೆಯಲ್ಲಿ ವೀರಶೈವ ಪದ ಮತ್ತು ರೇಣುಕರ ಹೆಸರು ಸೇರಿಸುವುದೆ ಮುಖ್ಯವಾಗಿದೆ ಅಷ್ಟೆ.
೬. ಈ ಬೆಳವಣಿಗೆಯನ್ನು ಲಿಂಗಾಯತರು ಹೇಗೆ ನೋಡಬೇಕು? ಹೇಗೆ ಪ್ರತಿಕ್ರಿಯೆ ನೀಡಬೇಕು?
ಲಿಂಗಾಯತರು ಈ ಬೆಳವಣಿಗೆಯನ್ನು ೯೦೦ ವರ್ಷಗಳಿಂದ ಹೇಗೆ ನೋಡಿದ್ದಾರೊ ಹಾಗೆ ನೋಡಬೇಕು. ಇದರಲ್ಲಿ ವಿಶೇಷವೇನಿಲ್ಲ. ಮುಂಜಾನೆ ಹುಟ್ಟಿ ˌ ಮಧ್ಯಾನ ಬೆಳೆದುˌ ಸಂಜೆಗೆ ಸಾಯುವ ಯಾವ ಸಿದ್ಧಾಂತಗಳೂ ಶಾಸ್ವತವಲ್ಲ ಹಾಗೂ ಅವು ಯಾವ ಗುಣಾತ್ಮಕ ಪ್ರಭಾವವನ್ನು ಬೀರಲಾರವು. ಬಸವಣ್ಣ ಮತ್ತು ಶರಣರ ಪ್ರಭಾವದ ಎದುರಿಗೆ ಇವು ಯಾವತ್ತೂ ಮುಂಚೂಣಿಗೆ ಬರಲು ಸಾಧ್ಯವಿಲ್ಲ. ಲಿಂಗಾಯತರು ಬಸವಪ್ರಜ್ಞೆಯನ್ನು ಇನ್ನೂ ಹೆಚ್ಚು ಜಾಗೃತೆಗೊಳಿಸಬೇಕು. ಪಂಚಪೀಠದ ವೀರಶೈವ ಲಿಂಗೀ ಬ್ರಾಹ್ಮಣರ ಬಸವದ್ವೇಷವನ್ನು ಜನರಿಗೆ ತಿಳಿ ಹೇಳುವ ಕಾರ್ಯ ಇನ್ನಷ್ಟು ಚುರುಕುಗೊಳಿಸುವುದೊಂದೆ ಇದಕ್ಕೆ ಸೂಕ್ತ ಪ್ರತಿಕ್ರಿಯೆಯಾಗಬಲ್ಲುದು.
ನಾವು ನಮ್ಮವರನ ಸಂಘಟನೆ ಮಾಡುವ ಕಡೆ.ಗಮನ ಕೊಡೋಣ ಎಲ್ಲರಿಗೂ ಹೇಳೋಣ ನಿಮ್ಮ ಶಾಲೆಯ ದಾಖಲೆ ಯನ್ನು ಪರಿಶೀಲನೆ ಮಾಡಿ ಸಂಘಟನೆ ಬನ್ನಿ ಎನ್ನುತ್ತೋ ಸಂಘಟನೆ ಮಾಡೋಣ , ವೀರಶೈವ ಮತ್ತು ಲಿಂಗಾಯತ ಪದದಲ್ಲಿ. ಗೊಂದುಲ ಉಂಟಾದಾಗ ನನ್ನ ಶಾಲೆ ದಾಖಲೆ ಪರಿಶೀಲಿಸಿದಾಗ ಜಾತಿ ಕಾಲಂ ನಲ್ಲಿ ಲಿಂಗಾಯತ ಎಂದು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ ದೆ ಇಷ್ಟೇ ಸಾಕಲ್ಲವೇ
ಈವಾಗ ತಿದ್ದಿಕೊಳ್ಳಬವುದು ಅಲ್ಲವೇ
Thank you sir for sharing and giving us an understanding so clearly. Sanghis and the like are so much into changing the social fabric of the society. This must be defended assertively.
ವೀರಶೖವ ಮಹಾಸಭೆಯು ತನ್ನ ಹೆಸರನ್ನು ದ್ವಿ ನಾಮಕರಣ ಗೊಳಿಸಿಕೊಂಡು ಹುಸಿ ರೇಣುಕಾಚಾರ್ಯ ನ ಜಯಂತಿ ಆಚರಣೆ ಮಾಡಲುಹೊರಟಿದೆ.
ಇದು ನಿಜ ಲಿಂಗಾಯತರಿಗೆ ಎಚ್ಚರಿಕೆಯಿಂದ ಧರ್ಮ ಜಾಗೃತ ಮಾಡಲು ಕರೆ ಕೊಟ್ಟಂತಿದೆ. ಕಾರಣ ಊಹಾಪೋಹಗಳು ನಮ್ಮ ಬಸವತತ್ವದಲ್ಲಿಲ್ಲ, ಆದ್ದರಿಂದ ಇಂತಹ ಕಾರ್ಯಕ್ರಮಗಳು ಕೆಲ ಪಟ್ಟಭದ್ರರಷ್ಟೆ ನಡೆಸುತ್ತಾರೆ. ಬಸವಾಭಿಮಾನಿಗಳು ಬಸವಪ್ರಜ್ಞೆ ಇನ್ನೂ ಜಾಗ್ರತೆ ಮಾಡಿಕೊಳ್ಳಲು ವಿನಂತಿ.