ರೇಣುಕಾ ಜಯಂತಿ: ಸಂಘ ಪರಿವಾರದ ಬಹಿರಂಗ ಬೆಂಬಲ (ಕುಮಾರಣ್ಣ ಪಾಟೀಲ್)

ಬಸವಣ್ಣನವರಿಗೆ ರೇಣುಕಾಚಾರ್ಯರನ್ನು ಪ್ರತಿಸ್ಪರ್ಧಿಯಾಗಿ ಬೆಳೆಸುವ ಹತಾಶೆಯ ಪ್ರಯತ್ನವಿದು.

ಹುಬ್ಬಳ್ಳಿ

(ರೇಣುಕಾಚಾರ್ಯ ಜಯಂತಿಗೆ ಬಸವ ಗಣಾಚಾರಿ ಕುಮಾರಣ್ಣ ಪಾಟೀಲ್ ಅವರ ಪ್ರತಿಕ್ರಿಯೆ.)

1) ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?

ಈ ಹಿಂದೆ ರೇಣುಕಾಚಾರ್ಯ ಜಯಂತಿಯನ್ನು 2013ರಲ್ಲಿ ಏಪ್ರಿಲ್ 12ರಂದು ಆಚರಣೆ ಮಾಡಲಾಗಿತ್ತು. 2022 ರಲ್ಲಿ ಮಾರ್ಚ್ 16ರಂದು ಆಚರಣೆ ಮಾಡಿದ್ದರು. ಈಗ 2025 ರಲ್ಲಿ ಮಾರ್ಚ್ 12ರಂದು ಹಾಗೂ ಮಾರ್ಚ್ 16ರಂದು ಆಚರಿಸುತ್ತಿದ್ದಾರೆ.

ಇದರಿಂದ ರೇಣುಕಾಚಾರ್ಯರ ಜಯಂತಿಯನ್ನು ಯಾವ ದಿನ ಮಾಡಬೇಕೆಂದು ಅವರಿಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ ಅನ್ನೋದನ್ನು ತಿಳಿಯಬಹುದು.

ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಮೇಲೆ ಜಯಂತಿ ಆಚರಣೆಯನ್ನು ಹೆಚ್ಚು ಮಾಡಿದ್ದಾರೆ.

ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಮೇಲೆ ರೇಣುಕಾ ಜಯಂತಿ ಆಚರಣೆಯನ್ನು ಹೆಚ್ಚು ಮಾಡಿದ್ದಾರೆ.

2) ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?

ರೇಣುಕಾಚಾರ್ಯ ಜಯಂತಿಯನ್ನು ಜನಪ್ರಿಯಗೊಳಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಬಿಜೆಪಿ ಸರಕಾರ ಇದ್ದಾಗ ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವಂತೆ ಆದೇಶ ತಂದಿದ್ದಾರೆ. ಲಿಂಗಾಯತ ಧರ್ಮವನ್ನು ವಿರೋಧಿಸೋ ವೀರಶೈವ, ಸಂಘ ಪರಿವಾರದ ಸಂಘಟನೆಗಳು ಹಠ ಹಿಡಿದು ಜನ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.

ರೀಲ್ ಮಾಡುವವರನ್ನು, ಸಂಘ ಪರಿವಾರದ ಹಿಂದುತ್ವವಾದಿ ಭಾಷಣಕಾರರನ್ನು, DJಗಳನ್ನೂ ಕರೆಸಿದ್ದಾರೆ.

ಲಿಂಗಾಯತರ ಜಾಗೃತಿ ಹೆಚ್ಚುತ್ತಿರುವುದರಿಂದ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವೀರಶೈವರು, ಸಂಘ ಪರಿವಾರದವರು ಇಷ್ಟೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಬಸವಣ್ಣನವರ ಪ್ರಭಾವ ಕಡಿಮೆ ಮಾಡುವ ಉದ್ಧೇಶ ಇದರ ಹಿಂದಿದೆ.

3) ಕಳೆದ ಕೆಲವು ವರ್ಷಗಳ ಯಾವುದಾದರೂ ಬೆಳವಣಿಗೆಗಳಿಗೆ ಇವರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಅನಿಸುತ್ತದೆಯೇ?

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ, ಬಸವ ತತ್ವ ಪ್ರಚಾರಕ್ಕೆ ರಾಜ್ಯವ್ಯಾಪ್ತಿ ನೂರಾರು ಸಂಘಟನೆಗಳು ಸಾವಿರಾರು ಕಾರ್ಯಕರ್ತರು ದುಡಿಯುತ್ತಿದ್ದಾರೆ. ಸಮಾಜದಲ್ಲಿ ಪ್ರಗತಿಪರ ಲಿಂಗಾಯತ ಧರ್ಮಕ್ಕೆ ಬೆಂಬಲ ಬೆಳೆಯುತ್ತಿದೆ.

ಸಾಂಸ್ಕೃತಿಕ ನಾಯಕರೆಂದು ಘೋಷಣೆಯಾದ ಮೇಲೆ ಇಡೀ ಸಮಾಜದಲ್ಲಿ ಬಸವಣ್ಣನವರ ಚಿಂತನೆ ಹರಡುತ್ತಿದೆ. ನಗರಗಳಲ್ಲಿ, ಸಣ್ಣ ಸಣ್ಣ ಊರುಗಳಲ್ಲಿ ವಚನಗಳ ಪಠಣ, ನಿರ್ವಚನ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಅಡ್ಡ ಪಲ್ಲಕ್ಕಿ ಹೊರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಸಮಾಜದಲ್ಲಿ ಬಸವಣ್ಣನವರ ಚಿಂತನೆ ಹರಡುತ್ತಿದೆ. ಅಡ್ಡ ಪಲ್ಲಕ್ಕಿ ಹೊರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ಪ್ರತಿಕ್ರಿಯೆಯಾಗಿ ರೇಣುಕಾಚಾರ್ಯ ಜಯಂತಿ ಬೆಳೆಸುತ್ತಿದ್ದಾರೆ. ಬಸವಣ್ಣನವರಿಗೆ ರೇಣುಕಾಚಾರ್ಯರನ್ನು ಪ್ರತಿಸ್ಪರ್ಧಿಯಾಗಿ ಬೆಳೆಸುವ ಹತಾಶೆಯ ಪ್ರಯತ್ನವಿದು.

4) ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?

ಕಾಲ್ಪನಿಕ ರೇಣುಕಾಚಾರ್ಯರು ಐತಿಹಾಸಿಕ ಬಸವಣ್ಣನವರಿಗಿಂತ ಶ್ರೇಷ್ಠ. ಸಿದ್ದಾಂತ ಶಿಖಾಮಣಿ ವಚನಗಳಿಗಿಂತ ಶ್ರೇಷ್ಠ. ಲಿಂಗಾಯತರು, ವೀರಶೈವರು ಒಂದೇ, ನಾವೆಲ್ಲಾ ಹಿಂದೂಗಳು. ಇವು ಈ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಮುಖ್ಯ ಸಂದೇಶಗಳು.

5) ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?

ಈ ಜಯಂತಿ ಆಚರಣೆಯ ಪಂಚ ಪೀಠಗಳು ಮತ್ತವರ ಜಂಗಮ ಜಾತಿಯ ಭಕ್ತರು ಮುಖ್ಯವಾಗಿ ಇದ್ದಾರೆ. ಇನ್ನೂ ಪಲ್ಲಕ್ಕಿ ಹೊರುವ ಮನಸ್ಥಿತಿಯಿರುವ ಮುಗ್ದ ಜನರೂ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.

ಕಾರ್ಯಕ್ರಮದ ಹಿಂದೆ ಸಂಘಪರಿವಾರದ ಕೈವಾಡವಿದೆ ಎನ್ನುವುದು ಈ ವರ್ಷ ಬಹಿರಂಗಕ್ಕೆ ಬಂದಿದೆ. ಅನೇಕ ಕಡೆ ಸಂಘ ಪರಿವಾರದ ಕಾರ್ಯಕರ್ತರ, ಮುಖಂಡರ ಬೆಂಬಲದಿಂದ ಇದು ನಡೆದಿರುವುದು ಗಮನಿಸಬೇಕು.

ಕೆಲವು ಕಡೆ ಅಖಿಲ ಭಾರತ ವೀರಶೈವ ಮಹಾಸಭಾದವರೂ ಇದಕ್ಕೆ ಕೈ ಜೋಡಿಸಿದ್ದಾರೆ.

ಇದು ವಚನ ದರ್ಶನ ಬಳಗದ ಮುಂದುವರೆದ ಪ್ರಯತ್ನ. ವಚನ ದರ್ಶನದಲ್ಲಿ ವಚನಗಳನ್ನು ತಿರುಚುವ ಪ್ರಯತ್ನ ಮಾಡಿದರು. ಈಗ ಬಸವಣ್ಣನವರ ಕೀರ್ತಿಯನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

6) ಈ ಬೆಳವಣಿಗೆಗೆ ಲಿಂಗಾಯತರ ಪ್ರತಿಕ್ರಿಯೆ ಹೇಗಿರಬೇಕು?

ಇನ್ನೂ ಉತ್ಸಾಹದಿಂದ ಬಸವ ತತ್ವಕ್ಕಾಗಿ ದುಡಿಯುವುದೇ ನಾವಿದಕ್ಕೆ ನೀಡಬೇಕಾಗಿರುವ ಪ್ರತಿಕ್ರಿಯೆ. ಪ್ರತ್ಯೇಕ ಲಿಂಗಾಯತ ಧರ್ಮ ಸಿಗುವವರೆಗೂ ನಿರಂತರವಾಗಿ ಹೋರಾಡತ್ತೇವೆ ಅನ್ನುವ ಸ್ಪಷ್ಟ ಸಂದೇಶ ನೀಡಬೇಕು.

ಇನ್ನೂ ಉತ್ಸಾಹದಿಂದ ಬಸವ ತತ್ವಕ್ಕಾಗಿ ದುಡಿಯುವುದೇ ನಾವಿದಕ್ಕೆ ನೀಡಬೇಕಾಗಿರುವ ಪ್ರತಿಕ್ರಿಯೆ.

ದೇಶದಲ್ಲಿ ಹಲವಾರು ಕಾಲ್ಪನಿಕ ವ್ಯಕ್ತಿಗಳ ಜಯಂತಿಯನ್ನು ಆಚರಿಸುತ್ತಾ ಬರಲಾಗುತ್ತಿದೆ, ಇದನ್ನೂ ಕೂಡ ಹಾಗೆ ಒಬ್ಬ ಕಾಲ್ಪನಿಕ ವ್ಯಕ್ತಿಯ ಜಯಂತಿ ಎಂದು ನೋಡಬೇಕು.

ರೇಣುಕಾಚಾರ್ಯರ ಒಬ್ಬರದೇ ಫೋಟೋ ಇಟ್ಟರೆ ಜನ ಅವರನ್ನು ಗುರುತು ಹಿಡಿಯುವುದಿಲ್ಲ ಅದಕ್ಕಾಗಿ ಪಕ್ಕದಲ್ಲಿ ಬಸವಣ್ಣನವರ ಫೋಟೋ ಇಟ್ಟು ಜಯಂತಿಯನ್ನು ಆಚರಣೆ ಮಾಡಿದ್ದಾರೆ, ಬಸವಣ್ಣನವರಂತೆ ರೇಣುಕಾಚಾರ್ಯರು ಸಹಿತ ಕ್ರಾಂತಿಕಾರಿಗಳೆಂದು ತೋರಿಸಲು ಈ ಪ್ರಯತ್ನ ಮಾಡುತ್ತಿದ್ದಾರೆ.

ಐತಿಹಾಸಿಕ ಪುರುಷ, ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರೊಂದಿಗೆ ರೇಣುಕಾಚಾರರನ್ನು ಹೋಲಿಸಲು ಸಾಧ್ಯವೆ ?

ಅಮುಗೆ ರಾಯಮ್ಮನ ಈ ವಚನವನ್ನು ಸಾಂದರ್ಭಿಕವಾಗಿ ಹೋಲಿಸಬಹುದು:

ಕಾಗೆಯಮರಿ ಕೋಗಿಲೆಯಾಗಬಲ್ಲುದೆ?
ಆಡಿನಮರಿ ಆನೆಯಾಗಬಲ್ಲುದೆ?
ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ?
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
6 Comments
  • ಅತ್ಯಂತ ಕುಟಿಲ ನಡೆಗಳನ್ನ ಸಂಘೀ ಮನಸ್ಥಿತಿಯ ವೀರಶೈವರು ಮುಂದುವರೆಸಿದ್ದಾರೆ. ಈಗ ಇವರ ಹೇಸಿಗೆ ನಡೆಗಳನ್ನ ಭಯಭಕ್ತಿಯಿಂದ ಪ್ರೋತ್ಸಾಹಿಸುವ ಜನಪ್ರಿಯ ಗುಂಪು ವಿರಳವಾಗಿದೆ.
    ಇವರ ಹತಾಶೆಯ ನಡೆಗಳು ನಗೆಪಾಟಲಿಗೆ ಈಡಾಗುತ್ತಲಿವೆ.
    ಲಿಂಗಾಯತರು ಯಾವತ್ತಿಗೂ ಬ್ರಾಹ್ಮಣರ ಗುಲಾಮರಲ್ಲ. ಅಂದರೆ ಹಿಂದೂಗಳಲ್ಲ.
    ವೀರಶೈವರು ಆ ಬ್ರಾಹ್ಮಣರ ಕಟ್ಟುಪಾಡುಗಳನ್ನ ಭಯಭಕ್ತಿಯಿಂದ ಪಾಲಿಸುವುದಾದರೆ ಪಾಲಿಸಲಿ.
    ಆದರೆ ನಮ್ಮ ತಂಟೆಗೆ ಬಾರದಿರಲಿ.
    ಶರಣು ಶರಣಾರ್ಥಿ

    • I have a reason to be wary even more now. I have not been involved in any movements of Basavanna. I will be glad if I can support in any way in this cause. I also would like to know more about this movement. I am based in Bangalore.

  • ಈ ರೀತಿಯ ರೇಣುಕ ಜಯಂತಿ ಗಳು ಬಸವಾನುಯಾಯಿ ಗಳಿಗೆ ವರವಾಗಿ ಮುಂಬರುವ ಬಸವ ಜಯಂತಿ ಅರ್ಥಪೂರ್ಣವಾಗಿ ವಿಜ್ರಂಬಣೆಯಿಂದ ವೈಭವಿಸಲು ಪ್ರೇರಣೆಯಾಗುತ್ತಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ……ಯಾವುದು ಅಸಲಿ…..ಯಾವುದು ನಕಲಿ……ಜನರೇ ಕಾಣಲಿ.

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ says:

    ಈ ರೇಣುಕಾಚಾರ್ಯ ಎನ್ನುವ ಕಾಲ್ಪನಿಕ ಅಮಾನುಷವಾಗಿ ಜನಿಸಿದ ಇವನ ಕಾಲಘಟ್ಟಯಾವುದು. ಯವ ಶತಮಾನದಲಿ ಜನಿಸಿದರು. ಇದಕ್ಕೆ ಯಾವುದೇ ಉತ್ತರವಿಲ್ಲ ಏಕೆ ಈ ಸಮುದಾಯದಲ್ಲಿ ಇಂಥಹ ಅವಹೇಳನಕಾರಕ ನಡೆಗಳು ನಡಎಯುತ್ತಿವೆ. ಜವಾಬುದಾರಿ ಉಳ್ಳವರು ಕಠೋರವಾಗಿ ಸಂಘ ಪರಿವಾರಿಗಳಿಗೆ ಎಚ್ಚರಿಕೆ ನೀಡಬೇಕು.

  • ಪುರಾಣ ಕಲ್ಪಿತ ಕಥೆಗಳನ್ನು ಹೆಣೆದು ಲಿಂಗಾಯತರು ದಾರಿ ತಪ್ಪಿಸುವ ಕೆಲಸ ನೆಡೆಯುತ್ತಿದೆ.
    ಲಿಂಗಾಯತರಿಗೆ ತತ್ವಗಳನ್ನು ಅರಿಯುವ ಮತ್ತು ಆಚರಿಸುವ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಸುವ ಮೂಲಕ ಲಿಂಗಾಯತರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಜಾಗ್ರತೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು.
    ವೈಧಿಕ ಪಂ ಪೀ ಗಳು ಕುತಂತ್ರ ಸರ್ವರಿಗೂ ಮನವರಿಕೆ ಮಾಡಬೇಕು.

Leave a Reply

Your email address will not be published. Required fields are marked *