ಆರ್ಯರು, ವೈದಿಕತೆ ಮತ್ತು ಲಿಂಗಾಯತ ಧರ್ಮ
(ಕಲಬುರ್ಗಿ ಕಲಿಸಿದ್ದು ಅಂಕಣಗಳ ಸಂಗ್ರಹ)
1) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
2) ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
3) ವೈದಿಕರು ನಮ್ಮ ಇತಿಹಾಸ ಅಳಿಸಿದರು
4) ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
5) ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ
6) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
ವಲಸೆ ಬಂದ ಜೈನ, ವೈದಿಕ ಧರ್ಮಗಳ ಭಾಷೆ, ಸಾಹಿತ್ಯ ಕಾಡ್ಗಿಚ್ಚಿನಂತೆ ಹಬ್ಬಿದವು. ತಮಿಳು ಕವಿಗಳು ಸಿಲಪ್ಪದಿಕಾರಂನಂತಹ ಸ್ಥಳೀಯ ಚರಿತ್ರೆ ಬರೆದರೆ, ಕನ್ನಡ ಕವಿಗಳು ಉತ್ತರದ ಕಥೆಗಳನ್ನೇ ಮತ್ತೆ ಮತ್ತೆ ಬರೆದರು.
ಜೈನ, ವೈದಿಕ ಕವಿಗಳು ರಾಮಾಯಣ, ಮಹಾಭಾರತ, ತೀರ್ಥಂಕರ ಪುರಾಣಗಳನ್ನು ಮಾತ್ರ ಬರೆದರು. ಪಂಚತಂತ್ರ, ಬಾಣ ಕಾದಂಬರಿಗಳಂತಹ ಲೌಕಿಕ ಸಾಹಿತ್ಯವೂ ಉತ್ತರದ ಅನುವಾದವಾಗಿತ್ತು.
ವಿರೋಧವನ್ನು ಲೆಕ್ಕಿಸದೆ ಒಳಬಂದ ವೈದಿಕರ ಭಾಷೆ ಸಂಸ್ಕೃತ ತನ್ನ ವ್ಯಾಕರಣ, ಛಂದಸ್ಸು, ನಿಘಂಟುಗಳನ್ನು ಕನ್ನಡದ ಮೇಲೆ ಹೇರಿತು. ತಾನೇ ಕನ್ನಡದ ತಾಯಿಯೆಂದು ಬಿಂಬಿಸಿತು.
ಮೂಲತಃ ಆರ್ಯರಾಗಿದ್ದ ವೈದಿಕರಿಗೆ ಕನ್ನಡ ಮಾತೃಭಾಷೆಯೆನಿಸಲಿಲ್ಲ. ಅವರಿಗೆ ಸಂಸ್ಕೃತ ತಮ್ಮ ಪವಿತ್ರ ಗ್ರಂಥಗಳನ್ನು ಬರೆಯುವ ದೇವ ಭಾಷೆಯಾದರೆ, ಕನ್ನಡ ಕೇವಲ ಆಡು ಭಾಷೆಯಾಯಿತು.
ಪ್ರಾಚೀನ ಜೈನ, ಲಿಂಗಾಯತ ಕವಿಗಳು ಕನ್ನಡದಲ್ಲಿ ಅಮೋಘವಾದ ಸಾಹಿತ್ಯ ಬರೆದರು. ಆದರೆ ವೈದಿಕರಲ್ಲಿ ಕುಮಾರ ವ್ಯಾಸ, ಲಕ್ಷ್ಮೀಶರಂತಹ ಮಹಾ ಕವಿಗಳು ಬಂದಿದ್ದು 15ನೇ ಶತಮಾನದಷ್ಟು ತಡವಾಗಿ.
ಶ್ರೀವೈಷ್ಣವರು 11ನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದರೂ 17ನೇ ಶತಮಾನದತನಕ ಅವರು ಕನ್ನಡದಿಂದ ದೂರವುಳಿದರು. ಇದರಿಂದ ಕನ್ನಡ ತನ್ನ ನೆಲದಲ್ಲೇ ಮಲಮಗನಂತೆ ಬದುಕಬೇಕಾಯಿತು.
(‘ಕನ್ನಡಿಗರ ಮಾತೃ ಭಾಷಾ ಪ್ರಜ್ಞೆಯ ಇತಿಹಾಸ‘ ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧.)