ಆರ್ಯರು, ವೈದಿಕತೆ ಮತ್ತು ಲಿಂಗಾಯತ ಧರ್ಮ
(ಕಲಬುರ್ಗಿ ಕಲಿಸಿದ್ದು ಅಂಕಣಗಳ ಸಂಗ್ರಹ)
1) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
2) ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
3) ವೈದಿಕರು ನಮ್ಮ ಇತಿಹಾಸ ಅಳಿಸಿದರು
4) ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
5) ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ
6) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
ವೈದಿಕರು ನಮ್ಮ ಇತಿಹಾಸ ಅಳಿಸಿದರು
ವೈದಿಕರು ತಮ್ಮ ಧರ್ಮ, ಪುರಾಣಗಳನ್ನು ಪ್ರಚಾರ ಮಾಡಲು ಕೇವಲ ಭಾಷೆ, ಸಾಹಿತ್ಯ ಮತ್ತು ಸಿದ್ದಾಂತಗಳನ್ನು ಬಳಸಲಿಲ್ಲ. ನಮ್ಮ ನೆಲ, ನದಿ, ಬೆಟ್ಟ, ಕಾಡುಗಳನ್ನೂ ಬಳಸಿಕೊಂಡರು.
ಪ್ರಾಚೀನ ಕಾಲದಿಂದ ಬೆಳೆದು ಬಂದಿದ್ದ ಸ್ಥಳಗಳ ಇತಿಹಾಸ, ಹೆಸರು ಅಳಿಸಿ ಹಾಕಿದರು. ಅವುಗಳ ಬದಲು ತಮ್ಮ ಪುರಾಣಗಳೊಂದಿಗೆ ಸಂಬಂಧ ಕಲ್ಪಿಸುವ ಹೊಸ ಕಥೆ, ಹೆಸರು ಸೃಷ್ಟಿಸಿದರು.
17ನೇ ಶತಮಾನದವರೆಗೆ ಸವದತ್ತಿ ಎಲ್ಲಮ್ಮ ಒಬ್ಬ ಗ್ರಾಮ ದೇವತೆ. ನಂತರ ರೇಣುಕಾ-ಜಮದಗ್ನಿ ಪುರಾಣವನ್ನು ಅವಳ ಮೇಲೆ ಹೇರಲಾಯಿತು. ಮಂಡ್ಯ ಮಾಂಡವ್ಯ ಋಷಿಯ ನೆಲೆಯಾಯಿತು.
ಹಿರಿ ಹೊಳೆ ‘ಕೃಷ್ಣಾ ನದಿ’ಯಾಯಿತು, ಕರಿ ಹೊಳೆ ‘ಮಲಪ್ರಭೆ’ಯಾಯಿತು . ಸಿಕ್ಕಸಿಕ್ಕಲ್ಲಿ ಕಪಿಲಾ, ಕಣ್ವ ಆಶ್ರಮಗಳೆದ್ದವು ಅಥವಾ ರಾಮ, ಸೀತೆಯಂತಹ ಉತ್ತರ ಭಾರತದ ಪುರಾಣ ಪಾತ್ರಗಳು ಓಡಾಡಿದವು.
ಈ ಕಥೆಗಳು ಆರ್ಯ ಸಂಸ್ಕೃತಿಯಿಂದ ಬಂದ ವೈದಿಕರ ಪ್ರಾಬಲ್ಯ ಹೆಚ್ಚಿಸಿದವು. ಆದರೆ ಅವುಗಳನ್ನು ನಂಬಿ ತಮ್ಮ ನಿಜ ಇತಿಹಾಸ ಮರೆತ ಕನ್ನಡಿಗರು ತಮ್ಮ ಅಸ್ಮಿತೆಯನ್ನೂ ಕಳೆದುಕೊಂಡರು.
(‘ಕಳಲೆ ವೀರಶೈವ ಅರಸು ಮನೆತನ ವಿಚಾರ ಸಂಕಿರಣ ಅಧ್ಯಕ್ಷ ಭಾಷಣದಿಂದ’ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)