ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ವಿಚಾರಿಸಿಲ್ಲ
ಸಾಂಗ್ಲಿ (ಮಹಾರಾಷ್ಟ್ರ)
ಸಾಂಗ್ಲಿ ಜಿಲ್ಲೆಯ, ಜತ್ತ ತಾಲೂಕ ಕೇಂದ್ರದ ಗುರುಬಸವೇಶ್ವರ ವೃತ್ತದಲ್ಲಿ ಮಾಡ್ಗ್ಯಾಳದ ಸಾಗರ ಕೋರೆ ಅವರ ನೇತೃತ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯ ಬೇಡಿಕೆಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಗೊಂಡು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಜತ್ತ ನಗರವನ್ನು ಸಂಪೂರ್ಣ ಬಂದ್ ಮಾಡಿ ಲಿಂಗಾಯತ ಸಮುದಾಯ ಪ್ರತಿಭಟಿಸುತ್ತಿದೆ. ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ , ಪ್ರತಿಭಟನಾ ಮೆರವಣಿಗೆ ನಡೆದಿದೆ. ಮಾನ್ಯತೆ ಸೇರಿದಂತೆ ಲಿಂಗಾಯತ ಸಮುದಾಯದ ಅಭಿವೃದ್ಧಿಯ ಬೇಡಿಕೆಗಳಿಗಾಗಿ ಪ್ರತಿಭಟಿಸಲಾಗುತ್ತಿದೆ.
ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ವಿಚಾರಿಸಿಲ್ಲ ಎಂದು ಹೋರಾಟ ನಿರತ ಲಿಂಗಾಯತ ಧರ್ಮಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷ ಸಂಖ್ಯೆಯಲ್ಲಿ ಲಿಂಗಾಯತರಿದ್ದರೂ ಸರಕಾರ ಅಲಕ್ಷ್ಯ ತೋರಿಸುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಲಿಂಗಾಯತ ಧರ್ಮಿಯರು, ಡಾ. ಅರಳಿ ನಾಗರಾಜ, ಶಿವಾನುಭವ ಮಂಟಪ ಸಂಸ್ಥೆ, ಜತ್ತ ಅರ್ಬನ್ ಬ್ಯಾಂಕ್, ಗಣೇಶ ಪತ್ತಿನ ಸಹಕಾರ ಸಂಘ, ಸರ್ವೋದಯ ಪತ್ತಿನ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳು ಬೆಂಬಲಕ್ಕೆ ನಿಂತಿವೆ.

ರಾಷ್ಟ್ರೀಯ ಬಸವದಳ, ಅಕ್ಕನ ಬಳಗ, ಖೋಜನವಾಡಿ, ಸಂಖ, ಶೇಗಾವ ಊರುಗಳ ನೂರಾರು ಶರಣ-ಶರಣೆಯರು ಬೆಂಬಲಿಸಿ ಹೋರಾಟದಲ್ಲಿ ಭಾಗವಹಿದ್ದಾರೆ.
ಜತ್ತ ತಾಲೂಕಿನ ಬಸವ ದಾನೇಶ್ವರಿ ಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿ ಅವರು ಸಹ ಪ್ರತಿಭಟನೆಗೆ ಬೆಂಬಲಿಸಿದ್ದಾರೆ. ಆದಷ್ಟು ಬೇಗನೇ ಮಹಾರಾಷ್ಟ ಸರಕಾರವು ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

ಸಾಂಗ್ಲಿ ಚಲೋ
ಲಿಂಗಾಯತ ಧರ್ಮ ಹೋರಾಟ ಮತ್ತೆ ಶುರುವಾಗುತ್ತಿದೆ. ಎಲ್ಲರೂ ಜಾಗೃತರಾಗೋಣ
ಲಿಂಗಾಯತರೇ ..
ಶರಣ ಸಮುದಾಯದ ; ಬಸವ ತತ್ವದ ,ವಚನ ಕೀರ್ತಿಯ, ಈ ಸಮುದಾಯವನ್ನು ಕಡೆಗಣಿಸಿದವರಿಗೆ ಸರಿಯಾದ ಬಿಸಿ ಮುಟ್ಟಲೇಬೇಕು…
ಜತ್ ಬಂಧುಗಳಿಗೆ ನಾವೆಲ್ಲ ಬೆಂಬಲಿಸೋಣ.
ಲಿಂಗಾಯತ ಧರ್ಮದ ಪರವಾಗಿ ನಮ್ಮ ಬೆಂಬಲ 👍🏻👍🏻ಜಯ್ ಬಸವ ಜೈ ಲಿಂಗಾಯತ 👏🏻👏🏻ಶರಣು ಶರಣು 💐
ಲಿಂಗಾಯತರು ಎಚ್ಚರಗೊಳ್ಳಬೇಕು. ನಮ್ಮ ಹೋರಾಟವನ್ನು ಬಲಪಡಿಸಿ ಆಳುವವರಿಗೆ ಎಚ್ಚರಿಕೆಯ ಗಂಟೆಯಾಗಬೇಕು.
ಲಿಂಗಾಯತರೇ ..
ಶರಣ ಸಮುದಾಯದ ; ಬಸವ ತತ್ವದ ,ವಚನ ಕೀರ್ತಿಯ, ಈ ಸಮುದಾಯವನ್ನು ಕಡೆಗಣಿಸಿದವರಿಗೆ ಸರಿಯಾದ ಬಿಸಿ ಮುಟ್ಟಲೇಬೇಕು…