ಹಿಂದೂ ವಿರೋಧಿ ನಡೆ: ಶೋಭಾ ಕರಂದ್ಲಾಜೆ
ಬೆಂಗಳೂರು
ಮಠಾಧೀಶರನ್ನು ನಿಂದಿಸಿ ಲಿಂಗಾಯತರ ಆಕ್ರೋಶಕ್ಕೆ ಗುರಿಯಾಗಿರುವ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಬೆಂಬಲಕ್ಕೆ ಹಿಂದುತ್ವದ ನಾಯಕರಿಂದ ಬೆಂಬಲ ಬಂದಿದೆ.
ಕನ್ನೇರಿ ಸ್ವಾಮಿಯ ಮೇಲೆ ನಿರ್ಬಂಧ ವಿಧಿಸಿರುವುದು ಸಿದ್ದರಾಮಯ್ಯ ಸರಕಾರದ ಕ್ರೂರ ನಡೆ ಎಂದು ಆರೆಸ್ಸೆಸ್ ನಾಯಕ ಬಿ ಎಲ್ ಸಂತೋಷ್ ಖಂಡಿಸಿದ್ದಾರೆ. ಇಂದು ಬೆಳಗ್ಗೆ ನೀಡಿರುವ ಹೇಳಿಕೆಯಲ್ಲಿ “ಕೆಲವು ವಿಷಯಗಳ ಮೇಲೆ ಕರ್ನಾಟಕದ ಸರಕಾರಕ್ಕೆ ವಿರುದ್ಧವಾದ ನಿಲುವುಗಳನ್ನು ಹೊಂದಿರುವುದಕ್ಕೆ ಶ್ರೀಗಳನ್ನು ವಿಜಯಪುರ ಜಿಲ್ಲೆಗೆ ಬರದಂತೆ ನಿರ್ಬಂಧಿಸಿಲಾಗಿದೆ,” ಎಂದು ತಿಳಿಸಿದ್ದಾರೆ.
“ಪೂಜ್ಯ ಕನ್ನೇರಿ ಶ್ರೀಗಳು ಕೃಷಿ ಮುಂತಾದ ಕ್ಷೇತ್ರಗಳಿಗೆ ಮಹತ್ತರ ಕೊಡುಗೆ ನೀಡಿ ಎಲ್ಲಾ ಸಮುದಾಯಗಳ ಗೌರವಕ್ಕೆ ಪಾತ್ರರಾಗಿದ್ದಾರೆ,” ಎಂದೂ ಬಿ ಎಲ್ ಸಂತೋಷ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಿ ಎಲ್ ಸಂತೋಷ್ ಬೆಂಬಲಕ್ಕೆ ಬಸವ ಸಂಘಟನೆಗಳ ತಕ್ಷಣದ ತೀವ್ರ ಪ್ರತಿಕ್ರಿಯೆ ಬಂದಿದೆ.
“ಕನ್ನೇರಿ ಸ್ವಾಮಿಗೆ ಬೆಂಬಲ ಸೂಚಿಸುವ ಮೊದಲು ಯಾವ ಕಾರಣಕ್ಕೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಬಿ ಎಲ್ ಸಂತೋಷ್ ಸ್ವಷ್ಟವಾಗಿ ಹೇಳಬೇಕು,” ಎಂದು ರಾಷ್ಟ್ರೀಯ ಬಸವ ಸೈನ್ಯದ ಜಿಲ್ಲಾಧ್ಯಕ್ಷ ಡಾ ರವಿಕುಮಾರ ಬಿರಾದಾರ ಬಸವ ಮೀಡಿಯಾಗೆ ಹೇಳಿದರು.
“ಇಂತಹ ಗೂಂಡಾ ಸ್ವಾಮಿ ತಮ್ಮ ಕೀಳು ವರ್ತನೆಯಿಂದ ಯಾವ ಯಾವ ಸಮುದಾಯಗಳ ಗೌರವಕ್ಕೆ ಪಾತ್ರರಾಗಿದ್ದಾರೆ ಎಂತಲೂ ಸಂತೋಷ್ ತಿಳಿಸಬೇಕು. ಆರೆಸ್ಸೆಸ್ ನವರು ವಿಷಯ ಮುಚ್ಚಿಟ್ಟು ದಾರಿ ತಪ್ಪಿಸಲು ನೋಡುತ್ತಿದ್ದಾರೆ,” ಎಂದು ಬಿರಾದಾರ ಹೇಳಿದರು.
ಬಿ ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದಾಗ ಬಿಜೆಪಿಯ ಮಾಜಿ ಎಂಎಲ್‌ಸಿಯವರೊಬ್ಬರು ಇದು ಸುಮ್ಮಸುಮ್ಮನೆ ಬಂದಿರುವ ಹೇಳಿಕೆಯಲ್ಲ, ಎಂದರು.
“ಲಿಂಗಾಯತರ ಆಕ್ರೋಶಕ್ಕೆ ಕನ್ನೇರಿ ಸ್ವಾಮಿ ಕಂಗಾಲಾಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಸಂತೋಷ್ ಮಾಡುತ್ತಿದ್ದಾರೆ. ಆರೆಸ್ಸೆಸ್ಸಿನ ಎಲ್ಲಾ ಪ್ರಭಾವ, ಸಂಪನ್ಮೂಲಗಳು ಕನ್ನೇರಿ ಸ್ವಾಮಿಯ ಬೆಂಬಲಕ್ಕಿವೆ ಎಂದು ಸೂಚಿಸುತ್ತಿದ್ದಾರೆ. ಈ ವಿವಾದವೇಳುತ್ತಿದ್ದಂತೆಯೇ ಸಂಘ ಪರಿವಾರದ TV ಚಾನಲ್ಗಳು ಕನ್ನೇರಿ ಸ್ವಾಮಿಯನ್ನು ದೀರ್ಘವಾಗಿ ಸಂದರ್ಶಿಸಿದನ್ನೂ ಇಲ್ಲಿ ಗಮನಿಸಬೇಕು,” ಎಂದರು.
ಲಿಂಗಾಯತರ ಭಾವನೆಗಳ ವಿರುದ್ಧವಾಗಿ ಈಗ ಸಂತೋಷ್ ಬೆಂಬಲ ಸೂಚಿಸುವ ಅಗತ್ಯವೇನಿತ್ತು ಎಂದು ಕೇಳಿದಾಗ, “ಕನ್ನೇರಿ ಸ್ವಾಮಿ ಹೆದರಲು ಬಿಟ್ಟರೆ ಆರೆಸ್ಸೆಸ್ ನಲ್ಲಿರುವ ಇತರ ಲಿಂಗಾಯತರು ಇನ್ನು ಮೇಲೆ ಬಾಯಿ ತೆರೆಯಲು ಹಿಂಜರಿಯುತ್ತಾರೆ. ಅದನ್ನು ತಪ್ಪಿಸಲು ಈ ರೀತಿಯ ಬಹಿರಂಗ ಬೆಂಬಲ ಬಂದಿದೆ. ಜಯ ಮೃತ್ಯುಂಜಯ ಸ್ವಾಮಿಗೆ ಬಂದ ಗತಿ ಕನ್ನೇರಿ ಸ್ವಾಮಿಗೆ ಬಂದರೆ ಅವರಿಗೆ ಕಷ್ಟವಾಗುತ್ತದೆ” ಎಂದು ಹೇಳಿದರು.
ಕನ್ನೇರಿ ಸ್ವಾಮಿಗೆ ಶೋಭಾ ಕರಂದ್ಲಾಜೆ ಬೆಂಬಲ
ಕನ್ನೇರಿ ಸ್ವಾಮಿಗೆ ನಿರ್ಬಂಧ ಹೇರಿರುವುದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.
“ಕನ್ನೇರಿ ಶ್ರೀಗಳು ಬಸವನ ಬಾಗೇವಾಡಿಯಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ವಿಜಯಪುರ ಜಿಲ್ಲೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದು ಕಾನೂನುಬಾಹಿರ ಹಾಗೂ ಸ್ವಾಮೀಜಿಗಳನ್ನು ಬೆದರಿಸುವ ದುಷ್ಕೃತ್ಯವಾಗಿದೆ.
ನಮ್ಮದೇ ದೇಶದ ನಮ್ಮದೇ ಧರ್ಮದ ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ. ಇದು ಸಿದ್ದರಾಮಯ್ಯನವರ ಸರ್ಕಾರದ ಕಾನೂನು. ರಾಜ್ಯ ಸರ್ಕಾರ ಸ್ವಾಮೀಜಿಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು,” ಎಂದು ಆಗ್ರಹಿಸುತ್ತೇನೆ,” ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.

ಕನ್ಹೇರಿ ಠಾಮಿ ಬೊಗಳಿದಾಗ ಸುಮ್ಮನಿದ್ದ ಸಂತ್ಯಾ ಈಗ ಯಾಕ ಮಾತಾಡ್ತಿ
ಬೆಂಬಲಕ್ಕೆ ನಿಲ್ಲಿ ಕರಾಂದಾಳೆ ಅವರೇ!, ಹಿಂತ ಹೀನ ಸ್ವಾಮಿಗಳ ಬೆಂಬಲಕ್ಕೆ ನಿಂತ , ನೀವು ಮುಂದಿನ ಚುನಾವಣೆ ಹೇಗೆ ಎದುರಿಸುತ್ತೀರಿ ನಾವು (ಲಿಂಗಾಯತರು) ನೋಡುತ್ತೆವೆ ನಿಮ್ಮನ್ನ!
ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರನ್ನು ವೈಯಕ್ತಿಕವಾಗಿ ನಿಂದಿಸುವುದು ಸರಿ ಇಲ್ಲ. ನಮ್ಮ ದೂರು ಮತ್ತು ಮನವಿ ಹಾಗು ನಿರ್ಮಿತ ಪ್ರಕ್ಷುಬ್ಧ ವಾತಾವರಣ ಗಮನಿಸಿ ಜಿಲ್ಲಾದಿಕಾರಿಗಳು ತೆಗೆದು ಕೊಂಡಿರುವ ಕ್ರಮ. ಅದು ಅವರ ಜವಾಬ್ದಾರಿ.
ಬಿ.ಜೆ.ಪಿ ಮುಖಂಡರು ಸದರಿಕ್ರಮವನ್ನು ವಿರೋದಿಸ ಬಾಕಾದರೆ ಸ್ವಾಮಿಗಳ ತಪ್ಪಿನಲ್ಲಿ ಅವರು ಸಹ ಪಾಲುದಾರರೆಂಬ ಸಂಶಯ ಮತ್ತು ಇದು ಉದ್ದೇಶ ಪೂರಕ ಕೃತ್ಯ ಎಂದು ಭಾಸವಾಗುತ್ತದೆ. ಲಿಂಗಾಯತ ಧರ್ಮ ನಾಶ ಮಾಡಲು ಲಿಂಗಾಯತರಿಗೆ ಬಿ.ಜೆ.ಪಿ ಟಾಸ್ಕ್ ನೀಡಿದ್ದಾರೆ ಎನ್ನುವುದು ಪ್ರತಿ ಹಂತದಲ್ಲೂ ಕಾಣುತ್ತಿದೆ. ಒಟ್ಟಿನಲ್ಲಿ ಬಿ ಜೆ ಪಿ ಕುತಂತ್ರ ನಡೆಗಳು ಲಿಂಗಾಯತರನ್ನು ಗಟ್ಟಿಗೊಳಿಸುತ್ತಿದೆ.
ಹೀಗೆ ಮಾಡ್ತಾ ಇದೆ ದೇಶದಲ್ಲಿರೋ ಹಿಂದುಗಳೆಲ್ಲ ನಿಮ್ಮ ಹದಿನ ಹಿಡಿಯುತ್ತಾರೆ ನೀವೇನ್ ಮಾಡ್ತಾ ಇದ್ದಿರೋ ಅದನ್ನೇ ಹಿಂದುಗಳು ಮಾಡುತ್ತಾರೆ, ನಿಮ್ಮ ಬೆಂಬಲದವ್ರು ಯಾವಾಗ ನಿಮ್ಜೊತೆನೆ ಇರ್ತಾರೆ ಅನ್ನೋದು ಸುಳ್ಳು ಎಚ್ಚರಿಕೆಯಿಂದ ಇರಿ
ಕನೇರಿ ಡಂಬಕ ಕಾವಿಧಾರಿ ಹಿಂಂದಿರುವ ಬಂಟರು ಕೊನೆಗು ಬಯಲಿಗೆ ಬಂದರಲಾ
ಬಸವಣ್ಣನವರ ತತ್ವಕ್ಕೆ ವಿರೋಧಿಸಿ ಎಲ್ಲ ಬಿಜೆಪಿಗರು ಹಾಗೂ ವೀರಶೈವರು ಬುದ್ದಿ ಕಲಿತೆ ಕಲಿಯುತ್ತಾರೆ