ಬೀದರ್
ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಬಸವ ಅನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದು ದೊಡ್ಡ ಬಿರುಗಾಳಿ ಎಬ್ಬಿಸಿದ್ದಾರೆ.
ಭಾರತದಲ್ಲಿ ವೈದಿಕ, ಅವೈದಿಕ ಧರ್ಮಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎಲ್ಲಾ ವೈದಿಕ ಧರ್ಮಗಳೇ. ಆದ್ದರಿಂದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರು ‘ಬಸವ ತಾಲಿಬಾನಿ’ಗಳು ಅಂದರೆ ಉಗ್ರ ಮೂಲಬೂತವಾದಿಗಳು ಎನ್ನುವುದು ಅವರ ವಾದ.
ಇದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಾಪಕವಾಗಿ ಬಂದಿದೆ. ಲಿಂಗಾಯತ ಮಠಾಧೀಶರ ಒಕ್ಕೊಟ ಇದನ್ನ ‘ಅಜ್ಞಾನದ ಪರಮಾವಧಿ’ ಎಂದು ಖಂಡಿಸಿದೆ.
ಕನ್ನೇರಿ ಶ್ರೀಗಳ ಮಾತಿನಲ್ಲಿರುವ ಅಜ್ಞಾನವನ್ನು ಬೀದರಿನ ಬಸವ ಮಂಟಪದ ಪೂಜ್ಯ ಸತ್ಯದೇವಿ ಮಾತಾಜಿ ಒಂದು ವಿಡಿಯೋ ಹೇಳಿಕೆಯ ಮೂಲಕ ಬಿಡಿಸಿ ಬಿಡಿಸಿ ತೋರಿಸಿದ್ದಾರೆ.
ವೈದಿಕ ಧರ್ಮದಲ್ಲಿ ವೇದ ಬ್ರಾಹ್ಮಣ್ಯ, ಬಹು ದೇವತಾ ಆರಾಧನೆ, ಯಜ್ಞ ಯಾಗಾದಿಗಳು, ಜಾತಿ, ವೃತ್ತಿ, ಲಿಂಗ, ಆಶ್ರಮ ತಾರತಮ್ಯಗಳಿವೆ.
ಇವುಗಳನ್ನೆಲ್ಲ ಗುರು ಬಸವಣ್ಣನವರು ಕಟ್ಟಿದ ಅವೈದಿಕ ಲಿಂಗಾಯತ ಧರ್ಮ ಸರಸಗಟಾಗಿ ತಿರಸ್ಕರಿಸಿದೆ ಎಂದು ಮಾತಾಜಿ ವಿವರಿಸಿದ್ದಾರೆ.
ಖಾವಿದಾರಿಗಳಲ್ಲಿ ಇಂತಹ ಅಜ್ಞಾನ ಇರಬಾರದು. ಅವರ ಬಾಯಿಯಲ್ಲಿ ‘ತಾಲಿಬಾನ್’, ‘ಹುಚ್ಚ ನಾಯಿ’ ಅನ್ನೋ ಮಾತುಗಳೂ ಬರಬಾರದು. ಆದರೂ ಅವರ ಈ ರೀತಿಯ ದಾಳಿಗಳಿಂದ ಲಿಂಗಾಯತ ಧರ್ಮದ ಪ್ರಚಾರ ಹೆಚ್ಚಾಗುತ್ತಿದೆ, ಜಗತ್ತಿನಲ್ಲಿ ಗುರು ಬಸವಣ್ಣನವರ ವ್ಯಕ್ತಿತ್ವ ದೊಡ್ಡದಾಗಿ ಬೆಳೆಯುತ್ತಿದೆ ಎಂದು ಮಾತಾಜಿ ಹೇಳಿದ್ದಾರೆ.
ಮಾತಾ ಸತ್ಯದೇವಿಯೇವರ್ ವಿವರಣೆ ತುಂಬಾ ಸೂಕ್ತವಾಗಿದೆ. ಅವರಿಗೆ ಧನ್ಯವಾದಗಳು.
Today Lingayats have accepted that Basava philosophy is AVAIDIK Non- Vaidik philosophy. There is no second opinion about it. Lingayat women have started fighting against Hinduthva agenda. Today’s Lingayats are not Pre-2017 Lingayats. We are Basava warriors. We set the agenda to RSS.-BJP