ಸತ್ಯಕ್ಕನ ವಚನ ಅರ್ಥವಾದರೆ ಭ್ರಷ್ಟಾಚಾರ ಕಡಿಮೆಯಾಗಬಹುದು: ಡಾ. ಶಶಿಕಲಾ

ಪ್ರಸನ್ನ. ಎಸ್. ಎಂ
ಪ್ರಸನ್ನ. ಎಸ್. ಎಂ

ಮೈಸೂರಿನ ಅಗ್ರಹಾರದಲ್ಲಿರುವ ರೇಣುಕಾ ಮಂದಿರದಲ್ಲಿ ಶಿವಯೋಗ ಮಹತ್ವ ಮತ್ತು 12ನೇ ಶತಮಾನದ ವಚನಕಾರ್ತೀಯರ ಚಿಂತನೆ ಕಾರ್ಯಕ್ರಮಗಳು ಮಂಗಳವಾರ ಯಶಸ್ವಿಯಾಗಿ ನಡೆದವು.

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಶಿಕಲಾ ಅವರು 12ನೇ ಶತಮಾನದ ವಚನಕಾರ್ತೀಯರಾದ ಕದಿರೆವ್ವೆ,ಗೊಗ್ಗವ್ವೆ, ಲಿಂಗಮ್ಮ, ಅಕ್ಕಮ್ಮ, ಸತ್ಯಕ್ಕ, ಅಕ್ಕಮಹಾದೇವಿ ಮುಂತಾದ ಶರಣೆಯರ ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವಿಷಯ ಮಂಡನೆ ಮಾಡಿದರು.

ಸತ್ಯಕ್ಕನ ವಚನವನ್ನು ರಾಜಕಾರಣಿಗಳು ಹಾಗು ಅಧಿಕಾರಿಗಳು ಅರ್ಥ ಮಾಡಿಕೊಂಡರೆ ಭ್ರಷ್ಟಾಚಾರ ಕಡಿಮೆಯಾಗಬಹುದೆಂದು ಹೇಳಿದರು.

ಹೆಣ್ಣು ಮಕ್ಕಳು ಸಹ ಯಾವುದಾದರೊಂದು ಕಾಯಕವ ಮಾಡಿ ಗಳಿಸಿ ಸ್ವಾವಲಂಬಿಯಾಗಬೇಕು, ಇದು ಸಬಲೀಕರಣಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿ, ಇಂತಹ ಕಾರ್ಯಕ್ರಮಗಳು ‘ನನ್ನ ಅರಿವಿನ ವಿಸ್ತಾರವನ್ನು’ ಜಾಸ್ತಿ ಮಾಡಿಕೊಳ್ಳಲು ಸಹಾಯವಾಗುತ್ತದೆಂದು ಹೇಳಿದರು.

ಶಿವಯೋಗದ ಮಹತ್ವದ ಬಗ್ಗೆ ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು ಮಾತನಾಡಿದರು. ಇಷ್ಟಲಿಂಗ ಮಹತ್ವವನ್ನು ತಿಳಿಸಿ, ಶಿವಯೋಗ ಭವರೋಗಕ್ಕೆ ಮದ್ದೆಂದು ಬಸವಣ್ಣನವರು ಹೇಳಿದ್ದಾರೆ, ಆದುದರಿಂದ ಪ್ರತಿಯೊಬ್ಬರು ಸುಪ್ರಭಾತ ಸಮಯದಲ್ಲಿ ಲಿಂಗ ನಿರೀಕ್ಷಣೆ ಮಾಡಬೇಕೆಂದು ಹೇಳಿದರು.

ಶರಣೆ ಅಕ್ಕನಾಗಮ್ಮನವರು ಬಸವಣ್ಣನವರು ಇಷ್ಟಲಿಂಗ ಜನಕರಾಗಲು ಒಂದು ರೀತಿ ಕಾರಣರಾದರು, ಅವರಿಗೆ ಪ್ರೇರಕ ಶಕ್ತಿಯಾಗಿದ್ದರು ಮತ್ತು ವಚನಸಾಹಿತ್ಯವನ್ನು ಉಳಿಸಿದ ಅವರ ತ್ಯಾಗ ಬಲಿದಾನಗಳನ್ನು ಎಂದು ಮರೆಯಬಾರದೆಂದು ಹೇಳಿದರು. ಇನ್ನೂ ಆನೇಕ ಶರಣೆಯರು ವಚನಗಳ ಬಗ್ಗೆ ಮಾತನಾಡಿದರು. ಅಣ್ಣ ಬಸವಣ್ಣ ಮತ್ತು ಅವರ ವೈಚಾರಿಕ ಪತ್ನಿ ನೀಲಾಂಬಿಕೆಯವರದು ಬದುಕು ಆದರ್ಶಮಯವಾಗಿತ್ತೆಂದು ತಿಳಿಸಿದರು.

ಬಸವಪ್ರತಿಷ್ಟಾನದ ಅಧ್ಯಕ್ಷರಾದ ಶಿವರುದ್ರಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಸದಸ್ಯರಾದ ಚಂದ್ರಕಲಾ ರವರು ವಚನ ಪ್ರಾರ್ಥನೆ ಮಾಡಿದರು.

ವೇದಿಕೆಯ ಮೇಲಿದ್ದ ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಅಧ್ಯಕ್ಷರಾದ ಪೂರ್ಣಿಮಾ ನಾಗೇಂದ್ರರವರು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಕ್ಕಾಗಿ ಬಸವಪ್ರತಿಷ್ಟಾನಕ್ಕೆ ವಂದನೆ ಸಲ್ಲಿಸಿದರು.

ಪ್ರತಿಷ್ಠಾನದ ಉಪಾಧ್ಯಕ್ಷರಾದ ದಿವ್ಯ ಚೇತನರವರು ನಾವು ಪ್ರತಿದಿನ ವಿಭೂತಿ ಧರಿಸಿಯೇ ಮುಂದಿನ ಕಾಯಕವನ್ನು ಮಾಡುವುದು ಎಂದು ಹೇಳಿದರು .

ಪ್ರತಿಷ್ಠಾನದ ಕಾರ್ಯದರ್ಶಿಗಳಾದ ನೀಲಾಂಬಿಕೆ ದೇವಿ ನಾಗರಾಜ್ರವರು ಮಾತನಾಡಿ ದಿನದಲ್ಲಿ ಎರಡು ಬಾರಿ ಶಿವಯೋಗ ಮಾಡುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಂಜನಗೂಡಿನ ಕಾ.ಸು. ನಂಜಪ್ಪನವರು ಮಾತನಾಡಿ ಬಸವ ಧರ್ಮ ಆಚರಣೆಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಹೇಳಿದರು. ಕಾರ್ಯಕ್ರಮವನ್ನು ಪ್ರಸನ್ನರವರು ನಿರೂಪಿಸಿದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಗಂಗಾಧರಪ್ಪನವರು ಮತ್ತು ಉಪ ಕಾರ್ಯದರ್ಶಿಗಳಾದ ಚಿಂತಕಾರಾದ ಸಿ.ಜಿ. ಸಿದ್ದಲಿಂಗಸ್ವಾಮಿಯವರು ಉಪಸ್ಥಿತರಿದ್ದರು.

ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳನ್ನು ಮತ್ತು ಉಪನ್ಯಾಸ ನೀಡಿದ ಡಾ . ಶಶಿಕಲಾ, ಪ್ರಾಧ್ಯಾಪಕರು ,ಮೈಸೂರು ವಿಶ್ವವಿದ್ಯಾಲಯ ಅವರನ್ನು ಮಹಾಲಕ್ಷ್ಮಿ ಮಹಿಳಾ ಮಂಡಲಿಯ ವತಿಯಿಂದ ಸನ್ಮಾನಿಸಲಾಯಿತು.

ಬಸವಪ್ರತಿಷ್ಟಾನದ ವತಿಯಿಂದ ಪೂರ್ಣಿಮಾ ನಾಗೇಂದ್ರ, ದಿವ್ಯ ಚೇತನ, ನೀಲಾಂಬಿಕೆ ದೇವಿ ಮತ್ತು ಕಾ .ಸು . ನಂಜಪ್ಪನವರನ್ನು ಸನ್ಮಾನಿಸಲಾಯಿತು .

ಬಸವಭಾರತ ಪ್ರತಿಷ್ಠಾನ ಮತ್ತು ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Share This Article
Leave a comment

Leave a Reply

Your email address will not be published. Required fields are marked *