ಕಲಬುರ್ಗಿ
ಸೇಡಂನಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಮಹತ್ವಾಕಾಂಕ್ಷೆಯ ಭಾರತೀಯ ಸಂಸ್ಕೃತಿ ಉತ್ಸವ ಜನರನ್ನು ಸೆಳೆಯಲು ವಿಫಲವಾಗಿ ಮುಗ್ಗರಿಸಿದೆ.
ಪ್ರಗತಿಪರ, ಬಸವಪರ ಮತ್ತು ದಲಿತ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದ 9 ದಿನಗಳ ಉತ್ಸವದಲ್ಲಿ 25 ಲಕ್ಷ ಜನರನ್ನು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದರು.
ಉತ್ಸವಕ್ಕೆ ಪ್ರತಿದಿನ ಹೋಗುತ್ತಿರುವ ಪತ್ರಕರ್ತರೊಬ್ಬರು ಮೊದಲ 6 ದಿನಗಳನ್ನೂ ಸೇರಿಸಿದರೂ ಅಲ್ಲಿಗೆ ಹೋಗಿರುವ ಸಂಖ್ಯೆ ಒಂದೆರಡು ಲಕ್ಷ ದಾಟುವುದಿಲ್ಲ ಎಂದರು. ಸಂಘ ಪರಿವಾರದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಮತ್ತು ಕಾರ್ಯಕರ್ತರನ್ನು ಬಿಟ್ಟರೆ ಸಾರ್ವಜನಿಕರು ಬೆರಳಣಿಕೆಯಷ್ಟು ಮಾತ್ರ ಬರುತ್ತಿದ್ದಾರೆ, ಎಂದು ಹೇಳಿದರು.