ಶರಣ ಸಮಾಜದಲ್ಲಿ ಕೋಲಾಹಲ ಸೃಷ್ಟಿಸಿದ ಶಂಕರ ಬಿದರಿ ಅವರ ಪಾತ್ರದ ಮೇಲೆ ವೀರಶೈವ ಮಹಾಸಭಾದ ಒಳಗಿನಿಂದಲೇ ಗಂಭೀರ ಪ್ರಶ್ನೆಗಳು ಎದ್ದಿವೆ
ಬೆಂಗಳೂರು
ಬಸವ ಜಯಂತಿಯ ಜೊತೆ ರೇಣುಕಾ ಜಯಂತಿಯನ್ನು ಆಚರಿಸಲು ಆದೇಶಿಸಿ ರಾಜ್ಯಾಧ್ಯಕ್ಷ ಶಂಕರ ಬಿದರಿ ಕಳಿಸಿದ್ದ ಸುತ್ತೋಲೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹಿಂದೆ ಪಡೆದಿದೆ.
ಇಂದು ಮಧ್ಯಾಹ್ನ ಕಳಿಸಿರುವ ಹೊಸ ಸುತ್ತೋಲೆಯಲ್ಲಿ ಇಲ್ಲಿಯತನಕ ಆಚರಿಸುತ್ತಿದ್ದ ರೀತಿಯಲ್ಲೇ ಬಸವ ಜಯಂತಿ, ರೇಣುಕಾಚಾರ್ಯ ಜಯಂತಿ ಹಾಗೂ ಇತರ ಶರಣರ ಜಯಂತಿಗಳನ್ನು ಪ್ರತ್ಯೇಕವಾಗಿ ಆಚರಿಸುವಂತೆ ಮಹಾಸಭಾದ ಎಲ್ಲಾ ಜಿಲ್ಲಾ, ತಾಲೂಕು ಘಟಕಗಳಿಗೆ ಆದೇಶಿಸಲಾಗಿದೆ.
‘ಈ ಸಂಬಂಧ ಎದ್ದಿರುವ ವಿವಾದವನ್ನು ಇಲ್ಲಿಗೇ ಕೊನೆಗೊಳಿಸಿ, ಸಮಾಜದ ಏಕತ್ವವನ್ನು ಶ್ರೇಷ್ಠತೆಯಿಂದ ಪ್ರದರ್ಶಿಸಬೇಕೆಂದು,’ ಸುತ್ತೋಲೆಯಲ್ಲಿ ತಿಳಿಸಿಲಾಗಿದೆ.
ಏಪ್ರಿಲ್ 2ರ ಸುತ್ತೋಲೆಯನ್ನು ಶಂಕರ ಬಿದರಿ ಸಹಿ ಮಾಡಿದ್ದರೆ, ಇಂದಿನ (ಏಪ್ರಿಲ್ 27) ಸುತ್ತೋಲೆಯನ್ನು ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಸಹಿ ಮಾಡಿದ್ದಾರೆ.
‘ಬಿದರಿಯವರ ಸುತ್ತೋಲೆ ಹೊರ ಬಂದ ನಂತರ ಹಲವರು ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು, ಸಮಾಜದ ಒಗ್ಗಟ್ಟನ್ನು ಮತ್ತು ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕಪ್ಪನವರು ಅದನ್ನು ಕೂಡಲೇ ಹಿಂಪಡೆಯುವಂತೆ ಸೂಚಿಸಿರುತ್ತಾರೆ. ಅವರ ಸೂಚನೆಯಂತೆ ಈ ಸುತ್ತೋಲೆಯನ್ನು ಹಿಂಪಡೆಯಲಾಗಿದೆ,’ ಎಂದು
ಇಂದಿನ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಸವ ಮೀಡಿಯಾದ ಜೊತೆ ಮಾತನಾಡಿದ ಮಹಾಸಭೆಯ ಹಿರಿಯ ಮುಖಂಡರೊಬ್ಬರು ಹೊಸ ಸುತ್ತೋಲೆ ಎಲ್ಲಾ ಜಿಲ್ಲಾ, ತಾಲೂಕು ಘಟಕಗಳಿಗೆ ಆಗಲೇ ರವಾನೆಯಾಗಿದೆ. ಪ್ರತಿಯೂಬ್ಬರ ಜೊತೆ ಫೋನಿನಲ್ಲಿ ಮಾತುಕತೆ ಕೂಡ ನಡೆದಿದೆ, ಯಾವುದೇ ಗೊಂದಲವಿಲ್ಲದೆ ಹಿಂದಿನಂತೆಯೇ ಬಸವ ಜಯಂತಿ ನಡೆಯುತ್ತದೆ ಎಂದು ಹೇಳಿದರು.
ಬಿದರಿಯವರ ಸುತ್ತೋಲೆ ಸಮಾಜದ ವಿವಿಧ ಪಂಗಡಗಳ ಮಧ್ಯ ದೊಡ್ಡ ಘರ್ಷಣೆ ಹುಟ್ಟುಹಾಕಿತ್ತು. ಅದನ್ನು ಮರೆತು ಮುಂದೆ ಒಗ್ಗಟಾಗಿ ನಡೆಯಬೇಕು, ಎಂದು ಹೇಳಿದರು.
ನೆನ್ನೆಯಿಂದ ನಡೆದದ್ದು
ನೆನ್ನೆ ಶಂಕರ ಬಿದರಿ ಸುತ್ತೋಲೆ ವಿರುದ್ಧ ಪ್ರತಿಭಟನೆ ನಡೆಸಿ ಲಿಂಗಾಯತ ಮಠಾಧೀಶರ ಮತ್ತು ಬಸವ ಸಂಘಟನೆಗಳ ಪ್ರಮುಖರ ನಿಯೋಗ ಈಶ್ವರ ಖಂಡ್ರೆಯನ್ನು ಭೇಟಿ ಮಾಡಿತ್ತು. ಅಲ್ಲಿ ಬಿದರಿಯ ಸುತ್ತೋಲೆಯನ್ನು ಹಿಂದೆ ಪಡೆಯದಿದ್ದರೆ ಏಪ್ರಿಲ್ 29 ಬೆಂಗಳೂರಿನ ಮಹಾಸಭಾ ಕಚೇರಿಯಲ್ಲಿಯೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ನಂತರ ಖಂಡ್ರೆಯವರು ವಿವರವಾಗಿ ಶಾಮನೂರು ಅವರ ಜೊತೆ ಚರ್ಚೆ ನಡೆಸಿದ್ದರು. ಇಂದು ಬೆಳಗ್ಗೆ ಶಾಮನೂರು ಅವರು ರೇಣುಕಾ ಪ್ರಸನ್ನ ಅವರಿಗೆ ಕರೆ ಮಾಡಿ ತಕ್ಷಣ ಸುತ್ತೋಲೆಯನ್ನು ಹಿಂಪಡೆಯಲು ನಿರ್ದೇಶಿಸಿದರು.
ನೆನ್ನೆಯವರೆಗೆ ಬಿದರಿಯವರು ಸುತ್ತೋಲೆಯನ್ನು ಹಿಂಪಡೆಯಲು ನಿರಾಕರಿಸಿದ್ದರು. ಸುತ್ತೋಲೆ ಯಾರಿಗೂ ಕಡ್ಡಾಯವಲ್ಲ ಎಂದು ಅವರು ಸ್ಪಷ್ಟನೆ ನೀಡುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿತ್ತು. ಆದರೆ ಬಸವ ಭಕ್ತರ ಆಕ್ರೋಶಕ್ಕೆ, ಒತ್ತಡಕ್ಕೆ ಮಣಿದು ಬಿದರಿ ಸುತ್ತೋಲೆಯನ್ನು ಸಂಪೂರ್ಣವಾಗಿ ಮಹಾಸಭೆ ಹಿಂದೆ ಪಡೆದಿದೆ.
ಒತ್ತಡಕ್ಕೆ ಸಿಲುಕಿದ ಶಾಮನೂರು
ಬಿದರಿ ಸುತ್ತೋಲೆ ಬಂದ ನಂತರ ಗೊಂದಲದಲ್ಲಿದ್ದ ಹಲವಾರು ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕಗಳು ಶಾಮನೂರು ಶಿವಶಂಕರಪ್ಪ ಅವರನ್ನು ಒಂದು ವಾರದಿಂದ ಸಂಪರ್ಕಿಸಿದ್ದವು. ಬಿದರಿ ಸುತ್ತೋಲೆಯನ್ನು ಅನುಮೋದಿಸದೆ ಮೊದಲಿನಂತೆಯೇ ಬಸವ ಜಯಂತಿ ಮಾಡಿ ಎಂದು ಶಾಮನೂರು ಸೂಚಿಸಿದ್ದರೂ ಅವರು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ.
ಇದರ ಬಗ್ಗೆ ಮಾತನಾಡಿದ ಶಾಮನೂರು ಅವರ ಆಪ್ತರೊಬ್ಬರು ಬಿದರಿ ಸುತ್ತೋಲೆ ಲಿಂಗಾಯತ ವೀರಶೈವರ ನಡುವೆ ಮಾತ್ರ ಕಂದಕ ಸೃಷ್ಟಿಸಲಿಲ್ಲ, ಮಹಾಸಭೆಯ ಘಟಕಗಳ ಒಳಗೂ ಒಡಕು ಸೃಷ್ಟಿಸಿತು. ಕೆಲವರು ರಾಜ್ಯಾಧ್ಯಕ್ಷರ ಆದೇಶ ಪಾಲಿಸುತ್ತೇವೆ ಎಂದು ಹೇಳಿದರೆ ಬಹಳಷ್ಟು ಘಟಕಗಳು ಅದನ್ನು ತೀವ್ರವಾಗಿ ವಿರೋಧಿಸಿದವು. ಈ ವಿಷಯದ ಮೇಲೆ ಮಹಾಸಭೆಯೇ ಅನೇಕ ಜಿಲ್ಲೆಗಳಲ್ಲಿ ಇಬ್ಬಾಗವಾಗುವ ಸಾಧ್ಯತೆಯಿತ್ತು ಎಂದರು.
ಶಾಮನೂರು ಅವರು ಸರಿಯಾದ ನಿರ್ಧಾರ ತೆಗೆದುಕೊಂಡು ಸಮಾಜಕ್ಕೆ ಬಂದ ಆಪತ್ತನ್ನು ನಿವಾರಿಸಿದ್ದಾರೆ ಎಂದರು.
ಬಿದರಿಯ ಪಾತ್ರದ ಮೇಲೆ ಪ್ರಶ್ನೆಗಳು
ಬಿದರಿಯ ಪಾತ್ರದ ಮೇಲೆ ಬಹಳಷ್ಟು ಪ್ರಶ್ನೆಗಳಿವೆ. ಅವರು ಕಳಿಸಿದ ಏಪ್ರಿಲ್ 2 ಸುತ್ತೋಲೆ ಮಹಾಸಭೆಯ ಅಧಿಕೃತ ಲೆಟರ್ ಹೆಡ್ಡಿನಲ್ಲಿಯೇ ಇಲ್ಲ ಎಂಬ ಆರೋಪವಿದೆ, ಎಂದು ಶಾಮನೂರು ಅವರ ಆಪ್ತರು ಹೇಳಿದರು.
ಬಸವ ಜಯಂತಿಯನ್ನು ರೇಣುಕಾ ಜಯಂತಿಯ ಜೊತೆ ಜೋಡಿಸಿದರೆ ಬಹಳ ವಿರೋಧ ಬರಬಹುದೆಂಬ ಎಲ್ಲಾ ಸೂಚನೆಗಳಿದ್ದವು.
ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯಕ್ರಮದಲ್ಲಿ ಬಿದರಿ ಈ ಬಗ್ಗೆ ಮಾತನಾಡಿದಾಗ ಬಹಿರಂಗವಾಗಿಯೇ ಅವರಿಗೆ ವಿರೋಧ ಬಂದಿತ್ತು. ಆದರೂ ಅವರು ಈ ಸುತ್ತೋಲೆ ಕಳಿಸಿದ ಕಾರಣವೇನು? ಅವರ ಉದ್ದೇಶವೇನಿತ್ತು? ಅವರ ಮೇಲೆ ಯಾರಾದರೂ ಒತ್ತಡ ಹೇರಿದ್ದರೇ? ಇವುಗಳ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಬೇಕು ಎಂದು ಹೇಳಿದರು.


ಲಿಂಗಾಯತ ಸಮಾಜದ ಹೋರಾಟಕ್ಕೆ ಸಂದ ಜಯ
ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಪರ ಸಂಘಟನೆಗಳ ಸತತ ಹೋರಾಟಕ್ಕೆ ಸಂದ ಜಯ ಬಸವೇಶ
ಇದು ನಿಮಗೆ ಸಿಕ್ಕ ಜಯವಲ್ಲ, ನಿಮ್ಮನ್ನು ನೀವು ನೇನು ಹಾಕಿಕೊಂಡ ಹಾಗೆ , ನೀವೂ ಲಿಂಗಾಯತ ಅಂಥ ಸಮಾಜವನ್ನೂ ಹಾಳುಬಿಮಾಡುತ್ತಿದಿರೀ ಹೊರತು ನಿಮಿಂದ ಯಾವುದೇ ಸಮಾಜ ಒಪ್ಪುವಂತಹ ಕೆಲಸಗಳು ಆಗಿಲ್ಲ, ಮೊಂದೇನು ಆಗೋಲ್ಲ , ನಿಮಗೆ ತಾಕತ್ತಿದ್ದರೆ ಲಿಂಗಾಯತರು ಬೇರೆ ಅನ್ನುವ ನೀವು ನಮ್ಮ ಸನಾತನ ವೀರಶೈವ ಆಚರಣೆ ಎನ್ನು ಬಿಡಿಸಿ ನೋಡೋಣ
ವೀರಶೈವರೇ ಬೇರೆ ಲಿಂಗಾಯಿತರೇ ಬೇರೆ. ವೀರಶೈವರು ಜಡಸ್ಥಾವರವನ್ನು ಪೂಜಿಸುತ್ತಾ ಜಡವಾಗಿರುವವರು.
ಲಿಂಗಾಯತರಿಗೆ ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ.
ಜಗದ್ಬಗುರು ಬಸವಣ್ಣ ಮತ್ತು ಬಸವ ತತ್ವ ನಿನಗೂ ಮತ್ತು ನಿನ್ನಂತ ಜಾತಿ ಜಂಗಮರಿಗೂ, ಪಂಚಾಚಾರ್ಯರಿಗೂ ಏಳೇಳು ಜನ್ಮ ಎತ್ತಿದರೂ ಅರ್ಥವಾಗುವುದಿಲ್ಲ.
ಅಧ್ಯಕ್ಷರ ಕ್ರಮ ಲಿಂಗಾಯತ ಸಮುದಾಯ ನಿರಾಳವಾಗಿ ಬಸವಜಯಂತಿ ಆಚರಣೆಗೆ ಅನುವು ಮಾಡಿಕೊಟ್ಟಿರುವುದೇ ಅಲ್ಲದೆ ಆಗಬಹುದಾದ ಸಂಘರ್ಷ ತಪ್ಪಿಸಿದೆ. ಪಂ ಪೀಗಳ ಕುತಂತ್ರ ಟುಸ್ ಆಗಿದೆ.
ಬನ್ನಿ ಗೆಳೆಯರೆ… ವೀರಶೈವರೆ
“ಬಸವ ಮಾರ್ಗ”ದಿ ನಡೆಯುವಾ….!
ಇವನು ಲಿಂಗಾಯತ ಅವನು ವೀರಶೈವ
ಎಲ್ಲರೊಂದೇ ಎನ್ನುವಾ …!!
ಒಗ್ಗಟ್ಟು ಅನ್ನೋದೇ ನಮ್ಮ ಜನರ ವೀಕ್ನೆಸ್ಸ್ ಇನ್ನು ಮುಂದಾದರೂ ಒಗ್ಗಟ್ಟಾಗಿ ನಮ್ಮ ಧರ್ಮದ ಜನರ ಅರೋಗ್ಯ ವಿದ್ಯೆ ಹಾಗೂ ಸತ್ತ ಜನರ ಈ ಮೇಲಿನ ಕಾರ್ಯಕ್ರಮ ಉಚಿತವಾಗಿ ಎಲ್ಲರಿಗೂ ಸಿಗೋ ಕೆಲಸದ ಬಗ್ಗೆ ಸಭೆ ಸೇರಿ ಸರ್ಕಾರದ ಭರವಸೆ ಬಿಟ್ಟು ಸಂಘದಿಂದ ಸಮಾಜಕ್ಕೆ ಮೇಲಿನ ಕೊಡುಗೆ ಅತ್ಯಗತ್ಯ ಇದರ ಬಗ್ಗೆ ಯೋಚಿಸಿ