ಬೆಂಗಳೂರು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಲಿಂಗಾಯತ ಧರ್ಮಿಯರ ಪ್ರಾತಿನಿಧಿಕ ಸಂಸ್ಥೆ ಅಲ್ಲ. ಹಾಗಾಗಿ ಶಂಕರ ಬಿದರಿ ಸಾಹೇಬರೇ ನಿಮ್ಮ ಮಹಾಸಭಾದ ಸುತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ.
ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮ ಮಹಾಸಭಾ, ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರ ಮತ್ತು ಬಸವ ಪರ ಸಂಘಟನೆಗಳು ಲಿಂಗಾಯತ ಧರ್ಮಿಯರ ಪ್ರಾತಿನಿಧಿಕ ಸಂಸ್ಥೆಗಳ ಆದೇಶದ ಕರೆಯ ಮೇರೆಗೆ ಬಸವ ಜಯಂತಿಯಂದು ಬಸವಣ್ಣನವರ ಮತ್ತು 770 ಬಸವಾದಿ ಶರಣರ ಭಾವಚಿತ್ರ ದೊಂದಿಗೆ ಬಸವ ತತ್ವದ ಪ್ರಕಾರ ಜಯಂತಿ ಮಾಡುತ್ತೇವೆ.
ಅಸ್ತಿತ್ವ ಇಲ್ಲದ ನಿಮಗೆ ಲಿಂಗಾಯತ ಪದಕ್ಕೆ ವೀರಶೈವ ಪದ ಜೋಡಿಸಿ, ಬಸವಣ್ಣನವರ ಜೊತೆಗೆ ರೇಣುಕಾಚಾರ್ಯರನ್ನು ಸಮೀಕರಿಸಿ ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಇದನ್ನು ಯಾರು ಸಹಿಸುವುದಿಲ್ಲ.
ಅಂಗದ ಮೇಲೆ ಇಷ್ಟಲಿಂಗ ಧರಿಸಿ, ವಿಶ್ವಗುರು ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕ, ಧರ್ಮಗುರು ಎಂದು, ಬಸವಾದಿ ಶರಣರ ವಚನಗಳೇ ನಮ್ಮ ಧರ್ಮ ಸಂಹಿತೆ ಎಂದು ಒಪ್ಪಿ ನಡೆಯುವರೆಲ್ಲರು ಲಿಂಗಾಯತರು.
ಪಂಚ ಪೀಠಾಧೀಶರೇ ನಿಮ್ಮ ನಿಮ್ಮ ಹತ್ತನೇ ತರಗತಿಯ ವರ್ಗಾವಣೆ ಪತ್ರಿಕೆಯಲ್ಲಿ ಲಿಂಗಾಯತ ಎಂದು ಬರೆದು ಕೊಂಡು ಈಗ ಆಂಧ್ರಪ್ರದೇಶ ಮೂಲದ ಆರಾಧ್ಯರು ತಂದ ಈ ವೀರಶೈವ ಪದವನ್ನು ಮತ್ತು ಅದರ ಸಿದ್ದಾಂತವನ್ನು ಲಿಂಗಾಯತಕ್ಕೆ ತಳುಕು ಹಾಕುವುದು ಬಿಟ್ಟು,
ಸ್ವತಂತ್ರವಾಗಿ ವೀರಶೈವ ಧರ್ಮಗುರು ರೇಣುಕಾಚಾರ್ಯ ಎಂದು , ಸಿದ್ದಾಂತ ಶಿಖಾಮಣಿ ಧರ್ಮಗ್ರಂಥ ಎಂದು ಪ್ರಸಾರ ಮಾಡಿ. ಅದು ಬಿಟ್ಟು ಪರಾವಲಂಬಿಗಳಾಗಿ ಲಿಂಗಾಯತ ಪದ ಜೋಡಿಸಿಕೊಂಡು ಅಸ್ತಿತ್ವ ಹುಡುಕಲು ಹೊರಟ್ಟಿದ್ದಿರಿ ಇದು ನಿಮಗೆ ಶೋಭೆ ತರುವುದೇ?
ಲಿಂಗಾಯತ, ವೀರಶೈವ ಬೇರೆ ಬೇರೆಯಾಗಿವೆ. ಲಿಂಗಾಯತಕ್ಕೂ ವೀರಶೈವಕ್ಕೂ ಯಾವ ಸಂಬಂಧವೂ ಇಲ್ಲ. ಬಸವಾದಿ ಶರಣರ ವಚನಗಳ ತಳಹದಿ ಮೇಲೆ ಕಟ್ಟಲ್ಪಟ್ಟ ಪರ್ಯಾಯ ಸ್ವತಂತ್ರ ಲಿಂಗಾಯತ ಧರ್ಮವು ನಿಮ್ಮೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ.
ಲಿಂಗಾಯತ ಸಮಾಜದ ಮುಖಂಡರಿಂದ ಇಂಥ ಪತ್ರಿಕೆ ಹೇಳಿಕೆಗಳು ಇನ್ನಷ್ಟು ಬರಬೇಕು