ಭಾಲ್ಕಿ:
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಡಿಸೆಂಬರ್ ೦೪, ೨೦೨೫ ಸಂಜೆ ೫ ಗಂಟೆಗೆ ಶರಣ ಮಾದಾರ ಚೆನ್ನಯ್ಯ ಜಯಂತಿ ಹಾಗೂ ೪೯೩ ನೆಯ ಮಾಸಿಕ ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಅಧ್ಯಕ್ಷತೆ ರಾಜಕುಮಾರ ಡಾವರಗಾಂವೆ ವಹಿಸಿಕೊಳ್ಳಲಿದ್ದಾರೆ. ಬಸವಗುರು ಪೂಜೆ ಸುಧಾಕರ ಕಾಕನಾಳ ಅವರಿಂದ ನಡೆಯುವುದು. ಶಿವಾನಂದ ಕಡ್ಯಾಳೆ ಅನುಭಾವದ ನುಡಿಗಳನ್ನಾಡಲಿದ್ದಾರೆ.
ವಚನ ಪಠಣ ರಮೇಶ ಕಟ್ಟಿತುಗಾಂವ ಅವರಿಂದ ನಡೆಯುವುದು. ಶಿವರಾಜ ಮೂಲಗೆ, ಸಂಜುಕುಮಾರ ಲಂಜವಾಡೆ, ಗುಂಡಪ್ಪ ಕೋಟೆ, ರವಿ ಗೌಂಡೆ, ದತ್ತಾತ್ರಿ ಜ್ಯೋತೆ, ಅನೀಲ ಹಲೆಪುರ್ಗೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ರಾಜಕುಮಾರ ಭಟಾರೆ, ರಾಹುಲ ಮೇತ್ರೆ, ಮಧುಕರ ಟೇಲರ್, ರೋಹನ ಸಿಂಧೆ, ಸಚೀನ್ ಅಂಬೆಸಾಂಗವಿ, ಪ್ರಮೋದ ಸಿಂಧೆ ಉಪಸ್ಥಿತರಿರಲಿದ್ದಾರೆ.
ರಾಜು ಜುಬರೆ ವಚನ ಗಾಯನ ಮಾಡಲಿದ್ದಾರೆ. ದೀಪಕ ಠಮಕೆ ನಿರೂಪಣೆ ಮಾಡಲಿದ್ದಾರೆ. ಶಕುಂತಲಾ ಲಿಂ. ವೈಜಿನಾಥಪ್ಪ ಅಣದೂರೆ ಭಾಲ್ಕಿ ಅವರಿಂದ ಭಕ್ತಿದಾಸೋಹ ನಡೆಯುವುದು.
ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ ಜಯಂತಿ ನಿಮಿತ್ಯ ಕಮಲನಗರದಿಂದ ಭಾಲ್ಕಿಯವರೆಗೆ ಡಿಸೆಂಬರ್ ೧೨, ೨೦೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಬಸವಜ್ಯೋತಿ ಪಾದಯಾತ್ರೆ ಪ್ರಾರಂಭವಾಗುವುದು. ಎಲ್ಲ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
