ಬೆಳಗಾವಿ:
ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ, 8 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 15 ರಿಂದ 24 ರವರೆಗೆ 10 ದಿನಗಳ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
ಎಳೆಯ ವಯಸಿನಲ್ಲಿಯೆ ವಿದ್ಯಾರ್ಥಿಗಳಿಗೆ ಶರಣ ಸಂಸ್ಕೃತಿ ಪರಿಚಯಿಸುವ ದೃಷ್ಟಿಯಿಂದ ಹಮ್ಮಿಕೊಂಡ ಈ ಶಿಬಿರದಲ್ಲಿ ವಚನ ಸಾಹಿತ್ಯ, ಕಾಯಕ, ದಾಸೋಹ, ಪ್ರಸಾದ, ಶಿಸ್ತು, ಸಂಸ್ಕಾರ ಹಾಗೂ ದೇಶಭಕ್ತಿಯ ಭಾವವನ್ನು ಮೂಡಿಸಲಾಗುವುದು.
ಬಸವಾದಿ ಶಿವ ಶರಣರು ತಿಳಿಸಿಕೊಟ್ಟ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಲು, ತಜ್ಞರಿಂದ ಉಪನ್ಯಾಸ, ಶರಣರ ಕ್ಷೇತ್ರ ಅಧ್ಯಯನ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರ ನಾಗನೂರು ರುದ್ರಾಕ್ಷಿ ಮಠ, ಶಿವಬಸವ ನಗರ, ಬೆಳಗಾವಿ ಇಲ್ಲಿ ನಡೆಯುತ್ತದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಶಿಸ್ತು, ಸಂಸ್ಕಾರ, ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಿದೆ.
ಶರಣರ ಜೀವನ ಚರಿತ್ರೆ, ಕಾಯಕ-ದಾಸೋಹ ಮತ್ತು ಪ್ರಸಾದ, ವಚನಗಳಲ್ಲಿ ವಿಜ್ಞಾನ, ಮಾನವೀಯ ಮೌಲ್ಯಗಳು, ಪರಿಸರ ಸಂರಕ್ಷಣೆ, ದೇಶಭಕ್ತಿ, ತಂದೆ-ತಾಯಿ ಮತ್ತು ಗುರು-ಹಿರಿಯರಿಗೆ ಗೌರವ ಇತ್ಯಾದಿ ವಿಷಯ ಒಳಗೊಂಡಿದೆ.
ನೋಂದಣಿಗೆ ಕೊನೆಯ ದಿನ ಏಪ್ರಿಲ್ 10, 2026. ಪ್ರವೇಶ ಶುಲ್ಕ ₹1,000 ಇರುತ್ತದೆ. ಸಂಪರ್ಕಿಸಲು 9008442557, 99642 01977.
