ಶರಣರ ಶಕ್ತಿ: ನಿರ್ಮಾಪಕರಿಗೆ ಸಮಸ್ಯೆಗಳ ಪಟ್ಟಿ ಕಳುಹಿಸಲು ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಲಿಂಗಾಯತ ಧಾರ್ಮಿಕ ಗುರುಗಳಿಗೆ ಮತ್ತು ಗಣ್ಯರಿಗೆ ಶರಣರ ಶಕ್ತಿ ಚಿತ್ರ ಸೋಮವಾರ ಪ್ರದರ್ಶಿಸಲಾಯಿತು.

ಚಿತ್ರ ವೀಕ್ಷಿಸಿದವರು ನಂತರ ಬಸವ ಸಮಿತಿಗೆ ಹೋಗಿ ಚಿತ್ರದ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಇದ್ದವರಿಂದ ಅಭಿಪ್ರಾಯ ಸಂಗ್ರಹಿಸಿ ಸಮಸ್ಯೆಯಿರುವ ಅಂಶಗಳನ್ನು ಗುರುತಿಸಲಾಯಿತು. ಅದನ್ನು ಪತ್ರದ ಮೂಲಕ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಕಳುಹಿಸುವುದೆಂದು ನಿರ್ಧರಿಸಲಾಗಿದೆ.

ಚಿತ್ರದ ತಂಡದ ಪ್ರತಿಕ್ರಿಯೆ ನೋಡಿ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುವುದೆಂದು ಸಭೆಯಲ್ಲಿ ಭಾಗವಹಿಸಿದವರೊಬ್ಬರು ಹೇಳಿದರು.

ಚಿತ್ರ ವೀಕ್ಷಿಸಿದ ಇನ್ನೊಬ್ಬರು ಕೋಲಾಹಲ ಸೃಷ್ಟಿಸಿದ್ದ ಟ್ರೇಲರ್ನಲ್ಲಿದ್ದ ಹಲವಾರು ದೃಶ್ಯಗಳನ್ನು ಚಿತ್ರದಿಂದ ತೆಗೆಯಲಾಗಿದೆ ಎಂದು ಹೇಳಿದರು.

“ಆದರೆ ಈಗಲೂ ಕೆಲವು ಸಮಸ್ಯೆಗಳಿವೆ. ಅನೇಕ ದೃಶ್ಯಗಳಲ್ಲಿ ಬಳಸಿರುವ ಭಾಷೆ ಸರಿಯಿಲ್ಲ, ಕೆಲವು ಕಡೆ ಪುರಾಣ ತುರುಕಲಾಗಿದೆ ಎಂದು ಹೇಳಿದರು. ಬಲಗೈಯಲ್ಲಿ ಲಿಂಗ ಹಿಡಿಯುವ ಅಸಂಬದ್ಧ ದೃಶ್ಯಗಳೂ ಇವೆ,” ಎಂದರು.

ಭಾಲ್ಕಿ ಸ್ವಾಮೀಜಿ, ಗದಗ ಸಿದ್ದರಾಮ ಸ್ವಾಮೀಜಿ, ಇಲಕಲ್ಲ ಗುರುಮಹಾಂತ ಸ್ವಾಮೀಜಿ, ಬೇಲಿಮಠದ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬಸವಧರ್ಮಪೀಠದ ಬಸವ ಯೋಗಿ ಸ್ವಾಮೀಜಿ ಚಿತ್ರವನ್ನು ವೀಕ್ಷಿಸಿ ನಂತರ ಸಭೆಯಲ್ಲಿ ಭಾಗವಹಿಸಿದರು.

ಶಿವಾನಂದ ಜಾಮದಾರ, ಟಿ.‌ಆರ್. ಚಂದ್ರಶೇಖರ, ಅಶೋಕ ಬರಗುಂಡಿ, ಅರವಿಂದ ಜತ್ತಿ, ಜೆ.ಎಸ್. ಪಾಟೀಲ, ವೀರಣ್ಣ ರಾಜೂರ, ಜಿ. ಬಿ. ಪಾಟೀಲ, ಶಶಿಧರ ಕರವೀರಶೆಟ್ಟರ, ಕುರುಕುಂದಿ ವೀರಭದ್ರಪ್ಪ, ಬಸವರಾಜ ಧನ್ನೂರ, ಬಸಂತಕುಮಾರ ಪಾಟೀಲ, ಕೆ.ಆರ್. ಮಂಗಳಾ,ಶಂಕರ ಗುಡಾಸ ಮುಂತಾದ ಗಣ್ಯರು ಹಾಜರಿದ್ದರು.

Share This Article
2 Comments
  • ಕನಸಿನಲ್ಲಿಯೂ ತಪ್ಪು ಮಾಡಲು ಆಲೋಚಿಸಿದ ಶರಣರ ಚರಿತ್ರೆಗೆ ಮಸಿ ಬಳಿಯುವ ಯಾವುದೇ ಧೃಷ್ಯ ಹಾಗೂ ಸಂಬಾಷಣೆ ಇದ್ದರೂ ತೆಗೆಸಬೇಕು…
    ಲಿಂಗಾಯತ ಧರ್ಮದ ಮರ್ಮಾಘಾತ ಮಾಡುವ ವೈದಿಕರ ಚಾಕ ಚಕ್ಯತೆ ಯಾಗಿರುತ್ತದೆ.

Leave a Reply

Your email address will not be published. Required fields are marked *