ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ಮರು ಸೆನ್ಸಾರ್ ಪಡಿಸಲು ಆಗ್ರಹಿಸಿ ಹಲವಾರು ಬಸವಪರ ಸಂಘಟನೆಗಳು ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗರದಲ್ಲಿ ಮನವಿ ಸಲ್ಲಿಸಿದರು.

ಬಸವಣ್ಣನವರು ಹುಟ್ಟಿದ ಊರು ಇಂಗಳೇಶ್ವರದಲ್ಲಿರುವ ವಚನ ಶಿಲಾಮಂಟಪದ 95-ವರ್ಷದ ಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ವೀಲ್ ಚೇರ್ ನಲ್ಲಿ ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಎಲ್ಲರ ಅಂತಃಕರಣ ಕಲಕಿತು.

ಎಂದಿಗೂ ಪ್ರಚಾರ ಬಯಸದ ಅಧ್ಯಾತ್ಮ, ಪ್ರವಚನಗಳಲ್ಲಿ ಮಾತ್ರ ತೊಡಗಿಕೊಂಡಿರುವ ಬಸವನಿಷ್ಠ ಶ್ರೀಗಳು ತಮ್ಮ ಇಳಿವಯಸ್ಸಿನಲ್ಲಿಯೂ ಶರಣರ ಅವಹೇಳನವನ್ನು ತಡೆಯಲು ವಿಜಯಪುರಕ್ಕೆ ಬಂದಿದ್ದರು. ಮನವಿ ಪತ್ರ ಸಲ್ಲಿಸಿ ಬಸವ ಧರ್ಮದ ಮೇಲೆ ಶತಮಾನಗಳಿಂದ ದಾಳಿ ನಡೆಯುತ್ತಿದ್ದು, ಕೂಡಲೇ ಸರ್ಕಾರ ಈ ಚಲನಚಿತ್ರವನ್ನು ನಿಷೇಧಿಸಬೇಕು, ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ವಿವಿಧ ಬಸವಪರ ಸಂಘಟನೆಗಳ ಸುಮಾರು 80 ಜನ ಮುಖಂಡರು ಮತ್ತು ಕಾರ್ಯಕರ್ತರು ಚಲನಚಿತ್ರ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಈ ಮುಂಚೆ ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ವಿಜಯಪುರ ವತಿಯಿಂದ ಎಲ್ಲಾ ಬಸವಪರ ಸಂಘಟನೆಗಳ ಪಧಾಧಿಕಾರಿಗಳು ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಸಭೆ ಸೇರಿದ್ದರು.

ನಿರ್ದೇಶಕ ದಿಲೀಪ್ ಶರ್ಮಾ, ನಿರ್ಮಾಪಕಿ ಆರಾಧನಾ ಕುಲಕರ್ಣಿಯವರು ನಿರ್ಮಿಸಿರುವ ಚಲನಚಿತ್ರ ಶರಣರ ಶಕ್ತಿ ಸಂಪೂರ್ಣ ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾದುದು ಅದನ್ನು ಕೂಡಲೇ ಸರಕಾರ, ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್ ಮಂಡಳಿಗಳು ಮಧ್ಯಪ್ರವೇಶಿಸಿ ಮರು ಸೆನ್ಸಾರ್ ಮಾಡಬೇಕು. ಅಲ್ಲಿಯವರೆಗೆ ಆ ಚಿತ್ರವನ್ನು ಚಿತ್ರಮಂದಿರ, ಯೂಟ್ಯೂಬ್, ಸಾಮಾಜಿಕ ಜಾಲತಾಣ, OTT ಯಾವ ಮಾಧ್ಯಮದಲ್ಲೂ ಬಿಡುಗಡೆ ಮಾಡಲು ಅವಕಾಶ ಕೊಡಬಾರದೆಂದು ಚರ್ಚೆಯಾಯಿತು.

ಅಕ್ಕ ನಾಗಮ್ಮನವರಿಗೆ ಅವಹೇಳನ ಮಾಡಿದ್ದಕ್ಕಾಗಿ ಚಿತ್ರ ತಂಡದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿ ಬಂದಿತು.

ರಾಷ್ಟ್ರೀಯ ಬಸವಸೇನಾ ಜಿಲ್ಲಾಧ್ಯಕ್ಷ ಡಾ ರವಿಕುಮಾರ ಬಿರಾದಾರ ಮಾತನಾಡಿ ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ನಿರ್ಭಂಧಿಸಿ ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಈ ರೀತಿ ಬಸವಾದಿ ಶರಣರ ತತ್ವದ ಮೇಲಿನ ದಾಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ವೈದಿಕ ಸಂಘಟನೆಗಳ ಕೈವಾಡ ಎದ್ದು ಕಾಣುತ್ತಿದೆ ಎಂದರು. ನ್ಯಾಯ ಸಿಗುವವರೆಗೂ ಲಿಂಗಾಯತ ಸಮುದಾಯ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಸವನ ಬಾಗೇವಾಡಿ ಮಾತನಾಡಿ ನಿರಂತರವಾಗಿ ಶರಣರ ತತ್ವಗಳ ಮೇಲೆ ಈ ರೀತಿ ದಾಳಿ ಆಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಪೂಜ್ಯ ವಿರತೀಶಾನಂದಸ್ವಾಮಿಗಳು, ಶರಬಯ್ಯಾಸ್ವಾಮಿಗಳು ವಿರಕ್ತ ಮಠ ಮನಗೂಳಿ, ಮಾತೋಶ್ರೀ ಚಂದ್ರಕಲಾ ಸಾ. ಗುಣದಾಳ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ವಿ.ಸಿ. ನಾಗಠಾಣ ಮಾತನಾಡಿದರು.

ವಿವಿಧ ಬಸವಪರ ಸಂಘಟನೆಗಳ ಪಧಾಧಿಕಾರಿಗಳು ಮತ್ತು ಚಿಂತಕರಾದ ಬಸವರಾಜ ಸೂಳಿಬಾವಿ, ಡಾ.ಜೆ.ಎಸ್. ಪಾಟೀಲ, ಪ್ರಕಾಶ ಕಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಮಹಾಂತೇಶ ಮಡಿಕೇಶ್ವರ, ಎಸ್.ಬಿ.ಕಲ್ಬುರ್ಗಿ, ಬಸವರಾಜ ಕೊಂಡಗುಳಿ, ಅಕ್ಕಮಹಾದೇವಿ ಬುರ್ಲಿ,ಜಿ.ಬಿ. ಸಾಲಕ್ಕಿ, ಸಿ.ಎ. ಗಂಟೆಪ್ಪಗೋಳ, ಎ.ಎಸ್. ಪಾಟೀಲ, ಶರಣಬಸವ ಅವಜಿ, ಡಾ. ಮೀನಾಕ್ಷಿ ಪಾಟೀಲ, ಕೆ.ಆರ್. ಕಡೇಚೂರು, ಎಸ್.ಎಸ್. ಬಣಜಗೇರ, ಹಣಮಂತ ಚಿಂಚಲಿ, ಪ್ರಭುಗೌಡ ಪಾಟೀಲ, ಸಂಗಪ್ಪ ತಡವಲಗಾ, ಓ.ಆರ್. ಬಿರಾದಾರ, ರಾಜೇಶ್ವರಿ ಯರನಾಳ, ಬಸವರಾಜ ಬಾಗೇವಾಡಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಬಸವರಾಜ ನಾಯ್ಕೋಡಿ, ಎನ್.ಕೆ. ಕುಂಬಾರ, ವಿವೇಕಾನಂದ ಕಲ್ಯಾಣಶೆಟ್ಟಿ, ಮಹಾಂತೇಶ ಆಡಿಗೊಂಡ, ಚನ್ನು ಕಟ್ಟಿಮನಿ, ರಾಜಶೇಖರ ಯರನಾಳ, ಮಲ್ಲಿಕಾರ್ಜುನ ಹಳ್ಳಿ, ಹನಮಂತ ಶಿವಡಿಹತ್ತಿ, ನೀಲಕಂಠ ಹಳ್ಳಿ, ಎಂ.ಓ. ಶಿರೂರ, ರೇವಣಸಿದ್ದಪ್ಪ ಅಳ್ಳಗಿ, ವೀರಣ್ಣ ಮರ್ತುರ, ಶಾಂತಪ್ಪ ಬೋರಗಿ, ಬಿ.ಎಸ್. ಕೋನರೆಡ್ಡಿ, ಎಸ್.ಡಿ. ಸೌದಿ, ಪ್ರಕಾಶ ಕುಂಬಾರ, ಶ್ರೀಶೈಲ ಬಿರಾದಾರ, ಶಿವಲಿಂಗ ಕಲಬುರ್ಗಿ, ನಿಂಗಪ್ಪ ಸಂಗಾಪುರ, ಮಹಾದೇವಿ ಗೋಕಾಕ, ಸಾಹಿತಿ ಅನಿಲ ಹೊಸಮನಿ, ನಾಗರಾಜ ಲಂಬು ಮತ್ತು ಇತರರು ಭಾಗವಹಿಸಿದ್ದರು.

Share This Article
4 Comments
  • ಕರ್ನಾಟಕದ ಎಲ್ಲಾ ಬಸವ ಪರ ಸಂಘಟನೆಗಳು ಈ ಹೊರಾಟಕ್ಕೆ ಬೆಂಬಲಿಸಿ..ಮುಂದಿನ ದಿನಮಾನಗಳಲ್ಲಿ ಯಾರೂ ಸಹ ಶರಣರ ಬಗ್ಗೆ ಅವಹೇಳನ ವಾಗಲಿ…ಹಾಗೂ ಶರಣರ ಜೀವನ ಮೌಲ್ಯಗಳಿಗೆ ಚ್ಯೂತಿ ತರುವಂತೆ ಕೃತಿಗಳಾಗಲಿ ಅಥವಾ ಚಲನ ಚಿತ್ರ ಸಾಕ್ಷ ಚಿತ್ರಗಳನ್ನು ನಿರ್ಮಿಸ ಬಾರದು ಆ ರೀತಿ ಕಾನೂನಿನ ಹೊರಾಟ ಮಾಡಬೇಕಾಗಿದೆ …

Leave a Reply

Your email address will not be published. Required fields are marked *