ಹೈದರಾಬಾದ್
ನಗರದ ರಾಮಮಂದಿರ ಮೈದಾನ, ರಾಯಬಾಗ್, ಅತ್ತಾಪುರದಲ್ಲಿ ಮಹಾಶಿವರಾತ್ರಿ ನಿಮಿತ್ಯ ಸಾಮೂಹಿಕ ಇಷ್ಟಲಿಂಗ ಪೂಜಾ, ಶಿವಯೋಗ ಕುರಿತು ಅನುಭಾವ ಜರುಗಿದವು.

ಸಂಜೆ 6.30ಕ್ಕೆ ಪ್ರಾರಂಭಗೊಂಡು ರಾತ್ರಿ 11.30ರವರೆಗೆ ನಡೆದ ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ರಾಜ್ಯ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಐದಾರು ನೂರು ಜನ ಶರಣ-ಶರಣೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
ಬೀದರ, ಬಸವಕಲ್ಯಾಣ ಗುಣತೀರ್ಥವಾಡಿ, ಮಹಾಮನೆಯ ಬಸವಪ್ರಭು ಸ್ವಾಮೀಜಿ ಇಷ್ಟಲಿಂಗ ಪೂಜೆ ಹೇಳಿಕೊಟ್ಟು, ಶಿವಯೋಗ ಕುರಿತು ಅನುಭಾವದಲ್ಲಿ, ನಮ್ಮೆಲ್ಲರ ಅಂಗಕ್ಕೆ ಲಿಂಗ ಕೊಟ್ಟು, ಶ್ರೇಷ್ಠತೆಯ ಲಿಂಗಶರೀರವನ್ನಾಗಿ ಮಾಡಿದ ಧರ್ಮಗುರು ಬಸವಣ್ಣನವರನ್ನು ನಾವು ಸದಾ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕೆಂದರು.

ಲಿಂಗಾಯತ ಧರ್ಮ ಮಹಾಸಭಾ ರಾಜ್ಯ ಕಾರ್ಯದರ್ಶಿ ಭೀಮರಾವ ಬಿರಾದಾರ, ಅಧ್ಯಕ್ಷ ಶಂಕ್ರಪ್ಪ ಪಾಟೀಲ, ವಿಜಯಕುಮಾರ ಪಟ್ನೆ, ಅನಿಲಕುಮಾರ ಪಾಟೀಲ, ಮಧು ಇಟಗಿಹಾಳ, ನಾಗರಾಜ ಕಳಸೆ, ಶ್ರೀದೇವಿ ಪಾಟೀಲ, ದೀಪಾ ಬಿರಾದಾರ, ಶ್ರೀದೇವಿ ಪಾಟೀಲ, ಸುಜಾತ ಪಾಟೀಲ, ಸಂಜಯ ಪಾಟೀಲ, ಪ್ರದೀಪ ಬಿರಾದಾರ, ಪ್ರಭಯ್ಯ ಸ್ವಾಮಿ, ಹನುಮಂತರಾವ, ಶ್ಯಾಮರಾವ ಮತ್ತಿತರರು ನೇತೃತ್ವ ವಹಿಸಿದ್ದರು.
