ಪತ್ರಕರ್ತರ ಪ್ರಶ್ನೆಯಿಂದ ತಾಳ್ಮೆ ಕಳೆದುಕೊಂಡು ಸಿಟ್ಟಾದ ಸಚಿವೆ
ಸೇಡಂ
ಸಂಘ ಪರಿವಾರದ ಮಹತ್ವಾಕಾಂಕ್ಷೆಯ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ಬಂದಿರುವುದು ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಸೇಡಂಗೆ ಸೋಮವಾರ ಭೇಟಿ ನೀಡಿ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಂಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜನರ ಪ್ರತಿಕ್ರಿಯೆ ನೋಡಿ ದುಃಖವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದರು.
ಭಾರತೀಯ ಸಂಸ್ಕೃತಿ ಉತ್ಸವ ಜನರನ್ನು ಸೆಳೆಯಲು ಸೋತಿದ್ದಕ್ಕೆ ಕರಂದ್ಲಾಜೆ ಎರಡು ಕಾರಣಗಳನ್ನು ಕೊಟ್ಟರು. ಒಂದು, ರಾಜ್ಯ ಸರಕಾರ ಶಾಲಾ ಮಕ್ಕಳು ಮತ್ತು ಅಧಿಕಾರಿಗಳು ಉತ್ಸವಕ್ಕೆ ಹೋಗದಿರಲು ಮೌಖಿಕ ಆದೇಶ ನೀಡಿದೆ ಎಂದು ಆಪಾದಿಸಿದರು.
ಎರಡನೆಯದಾಗಿ, ಕಲಬುರ್ಗಿಯಲ್ಲಿ ಸಂಸ್ಕೃತಿ ಉತ್ಸವದ ವಿರುದ್ಧ ನಡೆದ ಪ್ರತಿಭಟನೆಯೂ ಅದರ ಸೋಲಿಗೆ ಕಾರಣವಾಯಿತು ಎಂದು ಸೂಚಿಸಿದರು. “ಯಾವ ಕಾರಣಕ್ಕೆ ವಿರೋಧ ಮಾಡಿದಿರಿ, ಯಾವ ‘ಮಾನಸಿಕತೆ’ಯಿಂದ ವಿರೋಧ ಮಾಡಿದಿರಿ, ನಮ್ಮ ಸಂಸ್ಕೃತಿ, ಕೃಷಿ ಪದ್ಧತಿ, ಅರೋಗ್ಯ ಪದ್ದತಿಯನ್ನು ಜನಕ್ಕೆ ಹೇಳಿಕೊಡುವುದೇ ತಪ್ಪಾ,” ಎಂದು ಪ್ರಶ್ನಿಸಿದರು.
“ಯಾವ ಕಾರಣಕ್ಕೆ ವಿರೋಧ ಮಾಡಿದಿರಿ, ಯಾವ ‘ಮಾನಸಿಕತೆ’ಯಿಂದ ವಿರೋಧ ಮಾಡಿದಿರಿ, ನಮ್ಮ ಸಂಸ್ಕೃತಿ, ಕೃಷಿ ಪದ್ಧತಿ, ಅರೋಗ್ಯ ಪದ್ದತಿಯನ್ನು ಜನಕ್ಕೆ ಹೇಳಿಕೊಡುವುದೇ ತಪ್ಪಾ,”
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಬಾರದಿರುವ ಬಗ್ಗೆ ಅವರು ನೀಡಿದ ಹೇಳಿಕೆಯನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದ ಮೇಲೆ ತಟ್ಟನೆ ಸಿಟ್ಟಿಗೆದ್ದು “ನಾನು ಆ ಚರ್ಚೆಗೆ ಹೋಗುವದಿಲ್ಲ,” ಎಂದು ಹೇಳಿದರು.
ನಂತರ ಮಾತು ಕೇಂದ್ರ ಬಜೆಟಿನ ಬಗ್ಗೆ ತಿರುಗಿದರೂ ಸಿಟ್ಟಿನಲ್ಲಿಯೇ ಇದ್ದ ಕರಂದ್ಲಾಜೆ ಅಲ್ಲಿ ಬಂದ ಪ್ರಶ್ನೆಗಳಿಂದಲೂ ರೊಚ್ಚಿಗೆದ್ದು ಸಂವಾದವನ್ನು ಅರ್ಧಕ್ಕೆ ಬಿಟ್ಟು ತೆರಳಿದರು.
ಕುಮಾರಿ ಮಂತ್ರಿಗಳೇ ನಿಮ್ಮ ಪಕ್ಷದ ಸಂಸ್ಕೃತಿ ಭಾರತೀಯ ಸಂಸ್ಕೃತಿಯೇ,, ಜನರು ಸ್ವಪ್ರೇರಣೆಯಿಂದ ಬರಬೇಕು,ಕಳೆದ ಹತ್ತು ವರ್ಷಗಳ ದುರಾಡಳಿತದಲ್ಲಿ ಬಡಹಿಂದೂಗಳ ಬದುಕು ಮೂರಾಬಟ್ಟೆ ಆಗುತ್ತಿದೆ,, ಇನ್ಯಾವ ಸಂಸ್ಕೃತಿ ಉತ್ಸವ ಯಾರಿಗಾಗಿ, ನಿಮ್ಮ ಚುನಾವಣೆ ಲಾಭಕ್ಕಾಗಿ ಬಡಹಿಂದೂಗಳ ಮೇಲೆ ದಬ್ಬಾಳಿಕೆಯನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾ ಸೂಕ್ಷ್ಮತೆ ಇದ್ದರೆ ಅರ್ಥ ಮಾಡಿಕೋ ಬೇಕು ಅತಿಯಾದರೆ ಜನರು ಕೈಯಾಗ ತಗೊಂಡು ರಸ್ತೆಗೆ ಬರ್ತಾರೆ, ದೇಶವನ್ನು ಗುತ್ತಿಗೆ ತಗೊಂಡೀರಾ
ಕೆಲವು ಲಿಂಗಾಯತ ಮಾತಾಧೀಷರುಗಳೂ ಭಾಗವಹಿಸದಿದ್ದರೆ ಈಗ ಸಿಕ್ಕಷ್ಟೂ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ. ಭಾರತೀಯ ಸಂಸ್ಕೃತಿ ಅಂದರೆ ಏನು ಅಂತ ಕು. ಕರಂದ್ಲಾಜೆ ಅವರಿಗೆ ಗೊತ್ತಿದೆಯೋ ಅನ್ನುವ ಪ್ರಶ್ನೆಗೆ ಉತ್ತರಿಸಲಿ.
RSS ನ ನಿಜವಾದ ಉದ್ದೇಶ ಬಸವನಾಡಿನ ಜನತೆಗೆ ಅಥ೯ವಾಗಿದೆ.
ಏಕತ್ವ ಸಂಸ್ಕೃತಿ ಉತ್ಸವದ ವಿಫಲತೆ ಕಂಡು ನಿರಾಶರಾಗಿದ್ದಾರೆ. ಅದಕ್ಕೆ ಎಲ್ಲರ ಮೇಲೆ ಕೋಪಿಸಿಕೊಳ್ಳುತ್ತಿದ್ದಾರೆ.
ಕೊಳಕು ಮನಸ್ಸಿನ ಶೋಬಕ್ಕ ನಿನ್ನ ಮತ್ತು ನಿಮ್ಮ ಪಕ್ಷದ ಕುತಂತ್ರದ ಕೆಲಸ ಕಲ್ಯಾಣ ನಾಡಿನಲ್ಲಿ ವಿಶ್ವ ಗುರು ಬಸವಣ್ಣನ ವಿಚಾರಗಳನ್ನು ದಮನ ಮಾಡುವ ಹುನ್ನಾರವನ್ನು ಅಥ೯ಮಾಡಿಕೋಳ್ಳುವಷ್ಟು ದಡ್ಡರ ಬುದ್ದ ಬಸವ ಅಂಬೇಡ್ಕರ ಚಿಂತಕರು
ಭಾರತಿ ಸಂಸ್ಕೃತಿಯೇ ಬೇರೆ ಕರ್ನಾಟಕದ ಸಂಸ್ಕೃತಿಯೇ ಬೇರೆ ನಮ್ಮದು ಶರಣ ಸಂಸ್ಕೃತಿ. ನಮ್ಮದು ಬಡವ ಬಲ್ಲಿದ ಮೇಲು ಕೀಳು ಕರಿ ಬಿಳಿ ಎಲ್ಲವೂ ಒಂದೇ ಆದರೆ RSS ಸಂಸ್ಕೃತಿ ಬಡ ಹಿಂದೂಗಳ ಮೇಲೆ ದಬ್ಬಾಳಿಕೆ ಈಗ ಜನರಿಗೆ ತಿಳಿದಿದೆ