ನಂಜನಗೂಡು
ಈಚೆಗೆ ಗುಂಡ್ಲುಪೇಟೆಯ ಜ್ಞಾನಭವನದಲ್ಲಿ ವಿಶ್ವಮಾನವ ಭಾರತೀಯ ಶರಣ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಹಾಗೂ ಪದವಿ ಪೂರ್ವ ಕಾಲೇಜುಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಾಲೇಜು ಮಕ್ಕಳಿಗೆ ವಚನ ಸಂಸ್ಕೃತಿ ಕಲಿಕಾ ಅಭಿಯಾನ ಕುರಿತು ವಚನ ಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಎನ್.ವಿ. ಶಿವಲಿಂಗಪ್ಪನವರು ಮಾತನಾಡುತ್ತ, “ಪ್ರಸ್ತುತದಲ್ಲಿ ಬಸವಣ್ಣನವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದ ಸುಸ್ಥಿರತೆಯನ್ನು ಕಾಪಾಡಬಹುದು. ಇಂದಿನ ದಿನ ಕಲುಷಿತ ಮನಸ್ಸಿಗೆ ಬಸವಾದಿ ಶರಣರ ಆದರ್ಶವೇ ದಿವ್ಯ ಔಷಧಿ” ಎಂದರು.

ಸಭೆಯಲ್ಲಿ ಹಾಜರಿದ್ದ ಬಸವಾದಿ ಶರಣರ ತತ್ವ ಕುರಿತು ಬಸಪ್ಪ ದೇವರು ಮಾತನಾಡಿ, “ಭಾರತದ ಶ್ರೀಮಂತ ಸಂಸ್ಕೃತಿಯೇ ಬಸವತತ್ವ. ಅದನ್ನು ನಮ್ಮ ಮಕ್ಕಳು ಪಾಲಿಸುವಂತಾಗಬೇಕು, ಅದಕ್ಕಾಗಿ ಈ ಕಾರ್ಯಕ್ರಮ” ಎಂದರು.
ಮುಖಂಡರಾದ ಮಲ್ಲಿಕಾರ್ಜುನಪ್ಪ ಮಾತನಾಡಿ, “ಶಿಕ್ಷಕರು ಪಾಠದ ಜೊತೆಗೆ ಪ್ರತಿದಿನ ವಚನ ಪ್ರವಚನ ನೀಡಬೇಕು. ಇಂದಿನ ಮಕ್ಕಳು ವಿವೇಕ ಸಂಸ್ಕೃತಿ ಇಲ್ಲದೆ ಹಾಳಾಗುತ್ತಿವೆ, ಅದಕ್ಕೆ ದಿನವೂ ವಚನಾಭ್ಯಾಸ ನಡೆಯಲಿ” ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎಸ್ ಕಾಳಿಂಗಸ್ವಾಮಿ ಸಿದ್ದಾರ್ಥ ಮಾತನಾಡಿ, “ಮಕ್ಕಳ ಕಲಿಕೆಯ ಮೂಲಕ ಪ್ರತಿ ಮನೆ ಮನೆಯಲ್ಲೂ ಶರಣರ ಆದರ್ಶ ತಲುಪಿಸುವ ಕೆಲಸವಾಗಬೇಕು. ಇಂದು ಮೊಬೈಲ್ ಟಿವಿ ಅಂತರ್ಜಾಲ ಎಲ್ಲರ ಮನಸ್ಸನ್ನು ಕೆಡಿಸಿಬಿಟ್ಟಿದೆ, ಅದಕ್ಕೆ ನಮ್ಮ ಮುಂದಿನ ತಲೆಮಾರಿಗೆ ಬಸವಾದಿ ಶರಣರ ತತ್ವಗಳನ್ನು ಕಲಿಸುವ ಕೆಲಸವಾಗಬೇಕಿದೆ” ಎಂದರು.
ಹಿರಿಯ ಚಿತ್ರ ಸಾಹಿತಿಗಳಾದ ನಾಗಭೂಷಣ ಬಸವಾಪುರ ಅವರು ಬಸವಣ್ಣನವರ ಭಾವಚಿತ್ರವನ್ನು ಅಕ್ಷರಗಳಿಂದ ರಚಿಸಿ ಮಕ್ಕಳಿಗೆ ಮತ್ತು ಬಿಇಒ ಕಚೇರಿಗೆ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಎಲ್. ಬಸವಣ್ಣ ಬೊಮ್ಮಲಾಪುರ ಅವರು ಸಂಸ್ಕೃತಿ ಸಂಸ್ಕಾರ ಕುರಿತು ಉಪನ್ಯಾಸ ನೀಡಿದರು. ಬಸವರಾಜು ಅವರು ವಚನ ಗಾಯನ ಉಪನ್ಯಾಸ ನೀಡಿದರು. ಜಿ. ಸಿ. ನಾರಾಯಣಸ್ವಾಮಿ ಶರಣರ ತತ್ವ ಕುರಿತು ತಿಳಿಸಿದರು.

ತಾಲೂಕು ಪಂಚಾಯಿತಿ ಎಓ ಹಿತೇಶಕುಮಾರ್, ಬಿಕೆಸಿ ಸತೀಶ್ ಕೆಇಬಿ ಪ್ರಸಾದ್, ಬಸವಯೋಗೇಶ ನಂಜನಗೂಡುರವರು ನಿರೂಪಣೆ ವಿಶೇಷ ಹಾಗೂ ಪ್ರಶಸ್ತಿ ಪ್ರಧಾನ ಸ್ವೀಕಾರ ಶ್ರೀಮತಿ ರಜನಿ ತಿವಾರಿ, ಸೋಮಶೇಖರ್ ಮೂರ್ತಿ ಬಂಗಾರನಾಯ್ಕ ಅಚ್ಯುತ್ ಮಲ್ಲಿಕ್ ಶಿವು ಕುಣಗಳ್ಳಿ ಕೊಡಿಯಾಲ ಶಿವನಂಜಪ್ಪ ಮತ್ತು ಬಾಲು ರಾಮಣ್ಣ ಸರೋಜಾ ವೇಣು ಕಾಲೇಜು ಮಕ್ಕಳು ಹಾಜರಿದ್ದರು.
ಹೊಸ ತಲೆಮಾರಿನ ಯುವಜನರಿಗೆ ಬಸವಾದಿಶರಣರ ವಚನದ ಅತ್ಯಗತ್ಯವಾಗಿ ಬೇಕಿದೆ