ಪುಣೆ:
12ನೇ ಶತಮಾನದ ಶರಣ ಚಳುವಳಿ ಕಾಯಕ, ದಾಸೋಹ, ವೈಚಾರಿಕತೆ, ಸಮಾನತೆಗಳಂತಹ ಬಸವಣ್ಣನವರ ತತ್ವಗಳನ್ನು ಜಾರಿಗೆ ತರುವ ಪ್ರಯತ್ನವಾಗಿತ್ತು.
ಬಸವತತ್ವ ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟವರನ್ನು ಗುರುತಿಸುವ ಬಸವ ಭೂಷಣ ಪ್ರಶಸ್ತಿಯನ್ನು ಈ ವರ್ಷ ದ ಡಾ. ಸಿದ್ದರಾಮ ಶರಣರು ಬೆಲ್ದಾಳ ಮತ್ತು ಡಾ. ಭೀಮರಾವ ಪಾಟೀಲ ಅವರಿಗೆ ನೀಡಲಾಗಿದೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಸಮಸ್ತ ಲಿಂಗಾಯತ ವೆಲ್ ಫೇರ್ ಟ್ರಸ್ಟ್ ವತಿಯಿಂದ ಇದೇ 18 ರಂದು ಪುಣೆಯ ಅಕ್ರುಡಿಯ ಗಡಿ ಮಾದ್ಗುಲ್ಕರ ಸಭಾಭವನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಬಸವ ಜಯಂತಿಯ ಅಂಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ವಧು ವರರ ಸಮಾವೇಶ, ಪ್ರತಿಭಾವಂತ ಮಕ್ಕಳ, ಸಮಾಜ ಕಾರ್ಯಕರ್ತರ ಸಾಧಕರ ಸತ್ಕಾರವೂ ನಡೆಯಲಿದೆ.
ಈ ಕಾರ್ಯಕ್ರಮವನ್ನು ಪುಣೆಯ ಖ್ಯಾತ ಉದ್ಯಮಿ ಬಸವರಾಜ ಕುಲ್ಲೊಳ್ಳಿ ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಚಂದ್ರಶೇಖರ ಗಾಣಿಗೇರ ವಹಿಸಿಕೊಳ್ಳುವರು. ಕೆನಡಾದ ಆರಿಯಸ್ ವೈದ್ಯಕೀಯ ವಿಶ್ವವಿದ್ಯಾಲಯದ ಸ್ಕೂಲ್ ಆಫ ಮೆಡಿಸಿನಿನ ಮುಖ್ಯ ಕಾರ್ಯನಿರ್ವಾಹಕರು ಮತ್ತು ಡೀನ್ ಡಾ. ಅಜಿತ ರಾಮಪುರೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ.
ಶ್ರೀಕಾಂತ ಸ್ವಾಮಿ ಮತ್ತು ರಾಜಶ್ರೀ ಸ್ವಾಮಿ, ಶಿವಾನಂದ ನಂದೆಪ್ಪಗೌಡರ ಅವರು ಅತಿಥಿಗಳಾಗಿ ಭಾಗವಹಿಸುತ್ತಾರೆ.
ಪುಣೆ, ಮುಂಬೈ, ಸಾತಾರಾ, ಬೀದರ, ಬಸವಕಲ್ಯಾಣ, ಬೆಳಗಾವಿ, ನಾಂದೇಡ, ಲಾತೂರ ಮುಂತಾದ ಪ್ರದೇಶಗಳಿಂದ ಬಸವಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕಾರ್ಯಕ್ರಮದ ನಂತರ ಮಹಾಪ್ರಸಾದವನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 3 ರವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಮಸ್ತ ಲಿಂಗಾಯತ ಸಂಸ್ಥೆಯ ಡಾ. ಜಯಶ್ರೀ ಪಟ್ಟಣ ಮತ್ತು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ವಿನಂತಿಸಿಕೊಂಡಿದ್ದಾರೆ.

ಅದ್ಬುತ ಕಾರ್ಯಕ್ರಮ ಹಮ್ಮಿಕೊಂಡಿರುವಿರಿ ಸರ್.
Excellent 👌👌🌹🌹🙏🙏
Super sir ಶರಣು ಶರಣಾರ್ಥಿ
Selection of Sharan Beldal Sharanaru and Shri. Bhimarao Patil is really ideal selection. Pujyaradu jeevanave Basavamaya.I Congratulate the organisers and particularly Shri. Basavaraj. Kullolli, and Shri. Chandrasekhar. Ganiger., and Shri. Ajit. Ramapure. I wish the function every success.