ಇಂದು ಕನ್ನೇರಿ ಸ್ವಾಮಿ ವಿರುದ್ಧ ಸಿಂಧನೂರು, ಮುದ್ದೇಬಿಹಾಳದಲ್ಲಿ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಸಿಂಧನೂರು

ಇಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಸವಪರ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆಯಲ್ಲಿ ರಾಯಚೂರು ಜಿಲ್ಲೆಯ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವ ಸಮಿತಿ, ಅಕ್ಕನ ಬಳಗದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳುದರು.

ಪ್ರತಿಭಟನೆ ಸಿಂಧನೂರು ನಗರದ ಬಸವ ವೃತ್ತದಿಂದ ಮೆರವಣಿಗೆ ಆರಂಭಗೊಂಡು ತಹಸೀಲ್ದಾರ್ ಕಚೇರಿಗೆ ತೆರಳಿ ಅಲ್ಲಿ ಕಾಡಸಿದ್ದೇಶ್ವರ ಸ್ವಾಮಿಗಳ ಮೇಲೆ ಕಾನೂನಿನ ಅನ್ವಯ ಕ್ರಮ ಜರುಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು.

ನಂತರ ಸಿಂಧನೂರು ಪೋಲಿಸ ಠಾಣೆಗೆ ಹೋಗಿ ಫಿರ್ಯಾದು ನೀಡಲು ನಿರ್ಧರಿಸಲಾಗಿದೆ ಎಂದು ಜೆ.ಎಲ್. ಎಂ. ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ತಿಳಿಸಿದ್ದಾರೆ.

ಮುದ್ದೇಬಿಹಾಳ

ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಪೀಠಾಧಿಪತಿಗಳ ಮೇಲೆ ಅವಮಾನಕರ ರೀತಿಯ ಕೀಳು ಭಾಷೆಯನ್ನು ಬಳಸಿದ ಕನ್ನೇರಿ ಸ್ವಾಮಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಲಿದೆ.

ಬೆಳಿಗ್ಗೆ 10.30 ಗಂಟೆಗೆ, ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ಹೋಗಿ, ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು.

ಬಸವ ಮಹಾಮನೆ ಸಮಿತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಹಾಗೂ ಬಸವಪರ ಸಂಘಟನೆಗಳು ಮತ್ತು ಬಸವ ಅಭಿಮಾನಿಗಳು ಜಂಟಿಯಾಗಿ ಈ ಹೋರಾಟ ಹಮ್ಮಿಕೊಂಡಿವೆ ಎಂದು ಬಸವ ಮಹಾಮನೆ ಸಮಿತಿ ಅಧ್ಯಕ್ಷ ಬಿ.ವಿ. ಕೋರಿ ಅವರು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
1 Comment
  • ಪ್ರತಿಭಟನೆ ಸರಿ,

    ಸನ್ಮಾನ್ಯ ಮುಖ್ಯಮಂತ್ರಿಗಳು
    ಕರ್ನಾಟಕ ಸರಕಾರ
    ವಿಧಾನ ಸೌಧ
    ಬೆಂಗಳೂರು.
    ಮುಖಾಂತರ : ಜಿಲ್ಲಾಧಿಕಾರಿಗಳು ಬಳ್ಳಾರಿ
    ಹೀಗೆ ಪ್ರತಿ ಜಿಲ್ಲೆಯಲ್ಲೂ ದೂರು ಕೊಟ್ಟರೆ ಅದು ಸರಕಾರಿ ದಾಖಲೆಯಾಗುತ್ತದೆ

Leave a Reply

Your email address will not be published. Required fields are marked *