ಸೋಲಾಪುರ:
ಬಸವ ಸಂಸ್ಕಾರದ ಇಷ್ಟಲಿಂಗ ದೀಕ್ಷೆ ಮತ್ತು ಶಿವಯೋಗದ ಉಪನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು.
ವಿಶ್ವಕಲ್ಯಾಣ ಮಹಾಮನೆ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರು, ವಚನ ಕ್ರಿಯಾಮೂರ್ತಿಗಳಾದ ಶ್ರೀಶೈಲ ಜಿ. ಮಸೂತೆ ಅವರು ಸೋಲಾಪುರದ ಶಿವಯೋಗಿ ಸಿದ್ದರಾಮೇಶ್ವರ ವಚನಗಳ ಮೂಲಕ ದೀಕ್ಷಾ ಸಂಸ್ಕಾರ ನಡೆಸಿಕೊಟ್ಟು ಉಪನ್ಯಾಸ ನೀಡಿದರು.
ದೇವರು ಮತ್ತು ಧರ್ಮದ ಕುರಿತು ಬಸವಾದಿ ಶರಣರು ನಮ್ಮೊಳಗಿನ ಶಿವನನ್ನು ಅರಿಯಲು ಸರಳ, ಸುಲಭ ಮಾರ್ಗವಾದ ಶಿವಯೋಗವನ್ನು ನೀಡಿದರು.
ಬಸವ ಕೇಂದ್ರದ ಮುಖ್ಯಸ್ಥರಾದ ಶರಣೆ ಸಿಂಧುತಾಯಿ ಕಾಡಾದಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ನಿವ್ರೃತ್ತ ಪ್ರಾಧ್ಯಪಕರಾದ ಡಾ. ಬಿ.ಬಿ. ಪೂಜಾರ, ಸಂಗಮೇಶ್ವರ ಕಾಲೇಜಿನ ಉಪನ್ಯಾಸಕರಾದ ರಾಜಶ್ರೀ ಲೋಕಾಪುರೆ, ಡಾ. ಶ್ರೀದೇವಿ ಪಾಟೀಲ, ಅಕ್ಕಮಹಾದೇವಿ ನಾಟಕ ನಿರ್ಮಾಪಕರಾದ ರಾಜಶ್ರೀ ಥಳಂಗೆ, ಸೋಲಾಪುರ ಅಕ್ಕನ ಬಳಗದ ಸದಸ್ಯರು ಭಾಗವಹಿಸಿದ್ದರು.
ನಗರದ ಬಸವ ಕೇಂದ್ರದ ಶಿವಾನುಭವ ಮಂಟಪದಲ್ಲಿ ವಿಶ್ವಕಲ್ಯಾಣ ಮಹಾಮನೆ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆಂಗಳೂರಿನ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ನಾಲ್ಕು ವಿದ್ಯಾರ್ಥಿಗಳಿಗೆ ಉಚಿತವಾಗಿ ಪದವಿ ಶಿಕ್ಷಣವನ್ನು ಟ್ರಸ್ಟ್ ನೀಡುತ್ತಿದೆ.
