ಅಕ್ಕಲಕೋಟೆ
ಸೊಲ್ಲಾಪುರ ಜಿಲ್ಲೆ, ಅಕ್ಕಲಕೋಟೆ ತಾಲ್ಲೂಕು, ನಾಗಣಸೂರ ಜಗದ್ಗುರು ಬಸವಲಿಂಗೇಶ್ವರ ವಿರಕ್ತಮಠ (ತುಪ್ಪಿನಮಠ)ದಲ್ಲಿ 2025, ಫೆಬ್ರುವರಿ 23 ಹಾಗೂ 24 ರಂದು ಎರಡು ದಿನಗಳ ಲಿಂಗಾಯತ ಧರ್ಮದ ಸಂಸ್ಕಾರ, ಸಿದ್ಧಾಂತಗಳ ನಿಜಾಚರಣೆ ಕಮ್ಮಟ ನಡೆಯಲಿದೆ.
23ರ ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣದೊಂದಿಗೆ ಕಮ್ಮಟಕ್ಕೆ ಚಾಲನೆ ದೊರಕಲಿದೆ. ಪೂಜ್ಯ ಡಾ. ಅಭಿನವ ಬಸವಲಿಂಗ ಸ್ವಾಮಿಗಳು, ಬಸವಲಿಂಗೇಶ್ವರ ವಿರಕ್ತಮಠ ನಾಗಣಸೂರ ಇವರು ಕಮ್ಮಟದ ಸಾನಿಧ್ಯ ವಹಿಸಲಿದ್ದಾರೆ.
ಅನುಭಾವಿಗಳಾದ ಪಿ. ರುದ್ರಪ್ಪ, ಶಿವಾನಂದ ಅರಭಾವಿ, ಎಂ.ಸಂಗೊಳ್ಳಿ ಅವರುಗಳು ತತ್ವ, ಅವುಗಳ ಮಹತ್ವ, ಶಿವಯೋಗ ವಿಧಾನಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.
ಕಮ್ಮಟದಲ್ಲಿ ಶಿವಯೋಗ ಪ್ರಾತ್ಯಕ್ಷಿಕೆ, ಬಸವಧರ್ಮದ ತಳಹದಿ ಅಷ್ಟಾವರಣ ಪಂಚಾಚಾರ ಷಟಷ್ಥಲಗಳ ವಿವೇಚನೆ, ಕಾಣುವ ಸೃಷ್ಟಿ ಮಿಥ್ಯವೋ ಸತ್ಯವೋ ಒಂದು ವಿವೇಚನೆ ಮತ್ತು ಸಂವಾದ, ಇಷ್ಟಲಿಂಗದ ಮೂಲಕ ಮಾಡುವ ಆರಾಧನಾ ಮಾರ್ಗ ಇತರ ಪೂರ್ವದಲ್ಲಿನ ಆರಾಧನಾ ಮಾರ್ಗಗಳಿಗಿಂತ ಭಿನ್ನ ಎಂಬ ವಿಷಯಗಳ ಕುರಿತು ಉಪನ್ಯಾಸ, ಚರ್ಚೆ ನಡೆಯಲಿವೆ.
ಶ್ರೀಮಠದ ಈ ಬಸವ ಕೈಂಕರ್ಯದಲ್ಲಿ ನಾಗಣಸೂರ ಮತ್ತು ಸುತ್ತಮುತ್ತಲಿನ ಸರ್ವ ಶರಣ ಬಂಧುಗಳು ಪಾಲ್ಗೊಂಡು ಕಮ್ಮಟ ಯಶಸ್ವಿಗೊಳಿಸಲು ವಿನಂತಿಸಲಾಗಿದೆ.
