ನಿಶ್ಚಿತ ಗುರಿ, ಬದ್ಧತೆ ಮತ್ತು ಬಸವ ಪ್ರಜ್ಞೆ ಇದ್ದಾಗ ಸವಾಲು, ಅವಕಾಶ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ
ಸಾಣೇಹಳ್ಳಿ
ಕೆಲವು ವರ್ಷಗಳ ಹಿಂದೆ ನಡೆದ ಮತ್ತೆ ಕಲ್ಯಾಣ’ದ ಮಾದರಿಯಲ್ಲಿಯೇ
ಬಸವ ಸಂಸ್ಕೃತಿ ಅಭಿಯಾನ’ ನಡೆಯಲಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಲಿಂಗಾಯತ ಸಮಾಜದ ಪ್ರಭಾವಶಾಲಿ ಪ್ರಮುಖರೊಬ್ಬರು ಮತ್ತೆ ಕಲ್ಯಾಣಗಳಂತಹ ಅಭಿಯಾನಗಳನ್ನು ಸಂಘಟಿಸುವಲ್ಲಿ ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಅನುಭವವಿದೆ. ಅವರ ನೇತೃತ್ವದಲ್ಲಿಯೇ ಬಸವ ಸಂಸ್ಕೃತಿ ಅಭಿಯಾನವೂ ನಡೆಯಲಿದೆ ಎಂದು ಹೇಳಿದ್ದರು.
ಈ ಹಿನ್ನಲೆಯಲ್ಲಿ ಮತ್ತೆ ಕಲ್ಯಾಣ’ ಮತ್ತು
ಬಸವ ಸಂಸ್ಕೃತಿ ಅಭಿಯಾನ’ಗಳ ಬಗ್ಗೆ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ತಮ್ಮ ಅನುಭವ ಮತ್ತು ಆಲೋಚನೆ ಬಸವ ಮೀಡಿಯಾದ ಓದುಗರ ಜೊತೆ ಹಂಚಿಕೊಂಡಿದ್ದಾರೆ.
ಪ್ರಶ್ನೆ: `ಮತ್ತೆ ಕಲ್ಯಾಣ’ ನಡೆದದ್ದು ಸುಮಾರು ಐದು ವರ್ಷಗಳ ಹಿಂದೆ. ಈಗ ಈ ಅಭಿಯಾನವನ್ನು ಹಿಂತಿರುಗಿ ನೋಡಿದರೆ ತಮ್ಮ ಮನಸ್ಸಿಗೆ ಅನಿಸುವುದೇನು?
ಪಂಡಿತಾರಾಧ್ಯ ಶ್ರೀಗಳು: ೨೦೧೯ ಅಗಷ್ಟ೧ ರಿಂದ ೩೦ರವರಗೆ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆದ `ಮತ್ತೆ ಕಲ್ಯಾಣ’ ಅಭಿಯಾನ ಅವಿಸ್ಮರಣೀಯವಾದುದು.
ಬಹುಶಃ ೧೨ನೆಯ ಶತಮಾನದ ನಂತರ ಇಂಥದೊಂದು ಬಸವ ಸಂದೇಶ ಸಾರುವ ಅಭಿಯಾನ ಜಾತ್ಯತೀತವಾಗಿ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆದದ್ದೇ ಒಂದು ಮಹತ್ವದ ಮತ್ತು ದಾಖಲಾರ್ಹ ಸಂಗತಿ. ಅದು ಸಾರ್ವಜನಿಕರ, ಸಾಹಿತಿಗಳ, ಮಠಾಧೀಶರ ಮೇಲೆ ಬೀರಿದ ಪರಿಣಾಮ ಅವರ್ಣನೀಯ.
೧೨ನೆಯ ಶತಮಾನದ ನಂತರ ಇಂಥದೊಂದು ಬಸವ ಸಂದೇಶ ಸಾರುವ ಅಭಿಯಾನ ಜಾತ್ಯತೀತವಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆದದ್ದೇ ಒಂದು ದಾಖಲಾರ್ಹ ಸಂಗತಿ.
ಇಂದಿಗೂ ಅದನ್ನು ಮತ್ತೆ ಮತ್ತೆ ಎಲ್ಲರೂ ನೆನಪಿಸಿಕೊಳ್ಳುವರು. ಅಪರೂಪದ ಸಂಚಲನವನ್ನುಂಟುಮಾಡಿದ ಅಪರೂಪದ ಕಾರ್ಯಕ್ರಮ. ಅದರ ದಾಖಲೆಯಾಗಿ ಆರು ಕೃತಿಗಳು ಹೊರಬಂದಿವೆ.

ಪ್ರಶ್ನೆ: ಮತ್ತೆ ಕಲ್ಯಾಣ ಹೆಸರು ಬಹಳ ಪ್ರಸಿದ್ಧವಾಯಿತು. ಈ ಹೆಸರು ಇಟ್ಟವರು ಯಾರು? ಇದರ ಹಿನ್ನೆಲೆ ಏನು?
ಪಂಡಿತಾರಾಧ್ಯ ಶ್ರೀಗಳು: `ಮತ್ತೆ ಕಲ್ಯಾಣ’ ಯಾರೋ ಒಬ್ಬರು ಇಟ್ಟ ಹೆಸರಲ್ಲ. ಹಲವು ಚಿಂತಕರ ಚಿಂತನೆಯ ಸತ್ಫಲ. ಇದರ ಹಿಂದೆ ಹೆಚ್ಚಿನ ಪ್ರೇರಣೆ, ಪ್ರೋತ್ಸಾಹ ಸಿದ್ದಪ್ಪ ಮೂಲಗೆ ಅವರದು.
ಕಲ್ಯಾಣ ಎನ್ನುವ ಪದವೇ ರೋಮಾಂಚನಕಾರಿಯಾಗಿದೆ.
ಕಲ್ಯಾಣ ಎನ್ನುವ ಪದವೇ ರೋಮಾಂಚನಕಾರಿಯಾಗಿದೆ. ೧೨ನೆಯ ಶತಮಾನದಲ್ಲಿ ಕಲ್ಯಾಣಕ್ಕೆ ಯಾರು ಹೋಗಬೇಕು, ಯಾರು ಹೋಗಬಾರದು ಎನ್ನುವ ವಿವರಣೆ ವಚನ ಸಾಹಿತ್ಯದಲ್ಲೇ ಬರುತ್ತದೆ. ಅದು ಒಳಗೂ ಕಲ್ಯಾಣ, ಹೊರಗೂ ಕಲ್ಯಾಣ. ಅಂತರಂಗ ಮತ್ತು ಬಹಿರಂಗದ ಕಲ್ಯಾಣ ಅಂದು ಬಸವಣ್ಣನವರ ಮುಂದಾಳತ್ವದಲ್ಲಿ ನಡೆಯಿತು. ಅಂಥ ಕಲ್ಯಾಣದ ಸೇವಾಕಾರ್ಯಗಳ ಸ್ಮರಣೆ ಮತ್ತು ಅವುಗಳ ಮುಂದುವರಿಕೆ ಆಗಬೇಕೆಂಬುದೇ ಇದರ ಹಿನ್ನೆಲೆ.

ಪ್ರಶ್ನೆ: `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಕಲ್ಪನೆ ಹೇಗೆ, ಯಾವಾಗ ಬಂದದ್ದು? ಅದರ ಉದ್ದೇಶವೇನಿತ್ತು? ಅದು ಈಡೇರಿತೇ?
ಪಂಡಿತಾರಾಧ್ಯ ಶ್ರೀಗಳು: ನಾವು ಮೊದಲು ತಿಂಗಳುಗಟ್ಟಲೆ `ಶ್ರಾವಣಸಂಜೆ’ ಕಾರ್ಯಕ್ರಮ ಮಾಡುತ್ತಿದ್ದೆವು. ಇದನ್ನು ಗಮನಿಸುತ್ತಿದ್ದ ಸಿದ್ದಪ್ಪ ಮೂಲಗೆ ಅವರು ಬುದ್ಧಿ ತಮ್ಮ ಶ್ರಾವಣ ಸಂಜೆ ಸೀಮಿತ ಕ್ಷೇತ್ರದಲ್ಲಿ ನಡೆಯುತ್ತಿದೆ. ಅದೇ ಕಾರ್ಯಕ್ರಮ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ನಡೆಯಬೇಕು ಎನ್ನುವ ಒತ್ತಾಸೆ ತಂದರು.
ಅಲ್ಲದೆ ನಮ್ಮದು ಶರಣ ಪರಂಪರೆ, ವಚನ ಪರಂಪರೆ. ಹಾಗಾಗಿ ಶ್ರಾವಣ ಸಂಜೆ ಎನ್ನುವ ಹಸರಿನಲ್ಲಿ ತಮ್ಮ ಅಭಿಯಾನ ಇರಬಾರದು ಎನ್ನುವ ಅಭಿಪ್ರಾಯದ ಹಿನ್ನೆಲೆಯಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಕಲ್ಪನೆ ಬಂತು.
ಇದರ ಉದ್ದೇಶ ಬಸವಾದಿ ಶರಣರ ತತ್ವಾದರ್ಶಗಳನ್ನು
ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಚನ ಸಂಗೀತ, ನಾಟಕ, ಸಂವಾದದ ಮೂಲಕ ಮುಟ್ಟಿಸುವುದಾಗಿತ್ತು.
ಇದು ಬಂದದ್ದು ೨೦೧೮ರ ಡಿಶಂಬರ್ ತಿಂಗಳಿನಲ್ಲಿ. ಇದರ ಉದ್ದೇಶ ಬಸವಾದಿ ಶರಣರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಚನ ಸಂಗೀತ, ನಾಟಕ, ಸಂವಾದದ ಮೂಲಕ ಮುಟ್ಟಿಸುವುದಾಗಿತ್ತು. ಉದ್ದೇಶ ಈಡೇರಿದೆ. ಫಲಶೃತಿಗೆ ಕಾಯಬೇಕು.

ಪ್ರಶ್ನೆ: `ಮತ್ತೆ ಕಲ್ಯಾಣ’ ನಡೆದು ಕೆಲವು ವರ್ಷಗಳಾಗಿದ್ದರೂ ಇನ್ನೂ ಎಲ್ಲರ ನೆನಪಿನಲ್ಲಿದೆ. ಇಷ್ಟೊಂದು ಸಫಲವಾಗಿದ್ದು ಹೇಗೆ?
ಪಂಡಿತಾರಾಧ್ಯ ಶ್ರೀಗಳು: ಸದುದ್ದೇಶ, ದೂರದೃಷ್ಟಿ, ಅಹಂಭಾವ ಇಲ್ಲದಿದ್ದರೆ ಅದು ಸದಾ ಜನರ ಸ್ಮರಣೆಯಲ್ಲಿ ಉಳಿಯುತ್ತದೆ ಎನ್ನುವುದಕ್ಕೆ `ಮತ್ತೆ ಕಲ್ಯಾಣ’ ಅಭಿಯಾನವೇ ಸಾಕ್ಷಿ.
ಅದರ ಸಫಲತೆ ಇದ್ದುದು ಶಿವಸಂಚಾರ ಕಲಾವಿದರ ವಚನಗಳ ಹಾಡುಗಾರಿಕೆ, ನಮ್ಮ ಕಲಾವಿದರ `ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನ, ವಿದ್ಯಾರ್ಥಿಗಳ ಜೊತೆ ಸಂವಾದ, ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾರಂಭ ಮತ್ತು ಕಾಲಪ್ರಜ್ಞೆಯಿಂದ.
ಜೊತೆಗೆ ಎಲ್ಲ ಜಿಲ್ಲೆಗಳಲ್ಲಿ ಸಹಮತ’ ವೇದಿಕೆಯವರ ಸಹಕಾರ, ಮಠಾಧೀಶರ ಪ್ರೋತ್ಸಾಹ, ವಿವಿಧ ಸಂಘಟನೆಗಳ ನೆವು ಸಹ ಸಫಲತೆಗೆ ಕಾರಣ. ಜೊತೆಗೆ ನಮ್ಮದೇ ಆದ
ಅನನ್ಯ ಟಿವಿ’ ಅವತ್ತಿನ ಎಲ್ಲ ಕಾರ್ಯಚಟುವಟಿಕೆಗಳನ್ನು ಆಯಾ ಕಾಲದಲ್ಲೇ ಪ್ರಸಾರ ಮಾಡುತ್ತಿದ್ದುದು ಹಾಗೂ ಪತ್ರಿಕಾ ಮಾಧ್ಯಮದವರ ವರದಿ ಕೂಡ ಸಫಲತೆಗೆ ಹೆಗ್ಗುರುತಾಗಿತ್ತು.

ಪ್ರಶ್ನೆ: `ಮತ್ತೆ ಕಲ್ಯಾಣ’ ಯಾವ ಪ್ರಮಾಣದಲ್ಲಿ ನಡೆಯಿತು? ಎಷ್ಟು ಜಿಲ್ಲೆ? ಎಷ್ಟು ಕಾರ್ಯಕರ್ತರು? ಎಷ್ಟು ಜನ ಭಾಗವಹಿಸಿದ್ದರು? ಅಂಕಿ ಅಂಶಗಳಿವೆಯೇ?
ಪಂಡಿತಾರಾಧ್ಯ ಶ್ರೀಗಳು: ನೀವು ಕೇಳಿರುವ ಎಲ್ಲ ಮಾಹಿತಿಗಳಿಗೆ `ಮತ್ತೆ ಕಲ್ಯಾಣ ಸಂಪುಟ’ ಎನ್ನುವ ೧೫೦೦ ಪುಟಗಳ ಆರು ಕೃತಿಗಳನ್ನು ನೋಡಬಹುದು.
೩೦ ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲೇ ನಡೆಯಿತು. ಸಾವಿರಾರು ಜನ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು.
೩೦ ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲೇ ನಡೆಯಿತು. ಸಾವಿರಾರು ಜನ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು. ಪ್ರತಿದಿನ ಬೆಳಗ್ಗೆ ೧೧ ಗಂಟೆಗೆ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ, ಸಂಜೆ ಪಾದಯಾತ್ರೆ ನಂತರ ಸಾರ್ವಜನಿಕ ಸಮಾರಂಭ ಹಾಗೂ ನಾಟಕ ಪ್ರದರ್ಶನ ಇರುತ್ತಿದ್ದವು.

ಪ್ರಶ್ನೆ: `ಮತ್ತೆ ಕಲ್ಯಾಣ’ವನ್ನು ಸಂಘಟಿಸಿದ್ದು ಹೇಗೆ? ಯಾವ ಪೂರ್ವಸಿದ್ಧತೆ ಮಾಡಿಕೊಂಡಿದ್ದಿರಿ?
ಪಂಡಿತಾರಾಧ್ಯ ಶ್ರೀಗಳು: ಇದರ ಸಂಘಟನೆಗಾಗಿ ಪ್ರತಿ ಜಿಲ್ಲೆಯಲ್ಲಿ ಸಹಮತ ವೇದಿಕೆ ನಿರ್ಮಾಣವಾಗಿತ್ತು. ಎಲ್ಲಾ ಜಿಲ್ಲೆಯ ಪ್ರತಿನಿಧಿಗಳನ್ನು ಸಾಣೇಹಳ್ಳಿಗೆ ಕರೆಸಿ ಅವರಿಗೆ ಕಾರ್ಯಕ್ರಮದ ಸ್ವರೂಪ, ಹೇಗೆ ಮಾಡಬೇಕ, ನಿಮ್ಮ ಜವಾಬ್ದಾರಿ ಏನು ಎಂದು ವಿವರವಾಗಿ ಚರ್ಚಿಸಿ ಅವರಿಗೆ ಮಾರ್ಗದರ್ಶನ ಮಾಡಲಾಗಿತ್ತು.
ಹಲವರು ನಮ್ಮ ಬೆಂಗಾವಲಿಗರಾಗಿ ನಮ್ಮ ಕೆಲಸ ಕಾರ್ಯಗಳನ್ನು ಫಲಾಪೇಕ್ಷೆ ಇಲ್ಲದೆ ಮಾಡಿದ್ದರು.
ಮಠಾಧೀಶರ ಸಭೆಯಲ್ಲೂ ಚರ್ಚಿಸಲಾಗಿತ್ತು. ಬೆಂಗಳೂರಲ್ಲಿ ಎಲ್ಲ ಚಿಂತಕರು, ಸಾಹಿತಿಗಳು, ಬಂಡಾಯಗಾರರು, ವಿವಿಧ ಸಂಘಟನೆಯವರ ಸಭೆಯನ್ನು ಕರೆದು ಇದರ ರೂಪುರೇಶೆಗಳ ಬಗ್ಗೆ ಸಾಕಷ್ಟು ಚಿಂತನ ಮಂಥನ ನಡೆಸಿ ಒಂದು ನಿರ್ಣಯಕ್ಕೆ ಬರಲಾಗಿತ್ತು. ಇದರಲ್ಲಿ ಹಲವರು ನಮ್ಮ ಬೆಂಗಾವಲಿಗರಾಗಿ ನಮ್ಮ ಕೆಲಸ ಕಾರ್ಯಗಳನ್ನು ಫಲಾಪೇಕ್ಷೆ ಇಲ್ಲದೆ ಮಾಡಿದ್ದರು.

ಪ್ರಶ್ನೆ: ಮಠಾಧಿಪತಿಗಳ ಒಕ್ಕೂಟ’ ದಿಂದ
ಬಸವ ಸಂಸ್ಕೃತಿ ಅಭಿಯಾನ’ `ಮತ್ತೆ ಕಲ್ಯಾಣ’ದ ಮಾದರಿಯಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಪಂಡಿತಾರಾಧ್ಯ ಶ್ರೀಗಳು: ಮಠಾಧಿಪತಿಗಳ ಒಕ್ಕೂಟ’ ದಿಂದ
ಬಸವ ಸಂಸ್ಕೃತಿ ಅಭಿಯಾನ’ ಎನ್ನುವ ಹೆಸರಿನಲ್ಲಿ `ಮತ್ತೆ ಕಲ್ಯಾಣ’ದ ಮಾದರಿಯಲ್ಲೇ ರಾಜ್ಯದಾದ್ಯಂತ ಕಾರ್ಯಕ್ರಮ ನಡೆಸಬೇಕು ಎನ್ನುವ ನಿರ್ಣಯವಾಗಿದೆ. ಅದು ಸೆಪ್ಟೆಂಬರ್ ೧ ರಿಂದ ಅಕ್ಟೋಬರ್ ೩ ರವರೆಗೆ ನಿರಂತರವಾಗಿ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವುದು. ಪ್ರಾರಂಭ ಬಸವಣ್ಣನವ ಜನ್ಮಸ್ಥಳವಾದ ಬಾಗೇವಾಡಿಯಿಂದ. ಸಮಾರೋಪ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ.
ಬಸವ ಸಂಸ್ಕೃತಿ ಅಭಿಯಾನ’ ಎನ್ನುವ ಹೆಸರಿನಲ್ಲಿ `ಮತ್ತೆ ಕಲ್ಯಾಣ’ದ ಮಾದರಿಯಲ್ಲೇ ರಾಜ್ಯದಾದ್ಯಂತ ಕಾರ್ಯಕ್ರಮ ನಡೆಸಬೇಕು ಎನ್ನುವ ನಿರ್ಣಯವಾಗಿದೆ.

ಪ್ರಶ್ನೆ: ಮೊದಲು ಒಂದೇ ಸಂಘಟನೆಯ ಕಾರ್ಯಕ್ರಮವಾಗಿತ್ತು. ಈಗ ಹಲವರು ಸೇರಿ ಮಾಡುತ್ತಿದ್ದೀರಿ. ಸವಾಲುಗಳೇನು? ಅವಕಾಶಗಳೇನು?
ಪಂಡಿತಾರಾಧ್ಯ ಶ್ರೀಗಳು: `ಮತ್ತೆ ಕಲ್ಯಾಣ’ ಅಭಿಯಾನ ನಡೆದಾಗಲೂ ಹಲವು ಸಂಘಟನೆಗಳಿದ್ದವು. ಕೆಲವರು ಎಲೆ ಮರೆಯ ಕಾಯಂತೆ ಇದ್ದು ನಮಗೆ ಸಹಕಾರ ನಿಡಿದ್ದರು. ಎಷ್ಟೇ ಜನರು ಸೇರಿದರೂ ನಿಶ್ಚಿತ ಗುರಿ, ಬದ್ಧತೆ ಮತ್ತು ಬಸವ ಪ್ರಜ್ಞೆ ಇದ್ದಾಗ ಸವಾಲು, ಅವಕಾಶ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ನಿಶ್ಚಿತ ಗುರಿ, ಬದ್ಧತೆ ಮತ್ತು ಬಸವ ಪ್ರಜ್ಞೆ ಇದ್ದಾಗ ಸವಾಲು, ಅವಕಾಶ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ
ಕಾರ್ಯ ಮುಂದುವರಿಸಿದಾಗ ಸರಿಯಾದ ಅವಕಾಶಗಳು ಬಂದಾಗ ಬಳಸಿಕೊಳ್ಳಬಹುದು. ಸವಾಲುಗಳು ಬಂದಾಗ ಅದೊಂದು ಎಚ್ಚರಿಕೆಯ ಗಂಟೆ ಎಂದು ತಿದ್ದಿಕೊಂಡು ಮುನ್ನಡಿ ಇಡಬಹುದು.

ನಾನು ಆಗ ಮಂಗಳೂರಿನಲ್ಲಿದ್ದೆ. ನಾವು ಕೆಲವು ಗೆಳೆಯರು ಈಗ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿರುವ ಉಮ್ಮರ್ ಜೊತೆಯಲ್ಲಿ ಮಂಗಳೂರಿನ ಸಹಮತದ ಜವಾಬ್ದಾರಿ ತೆಗೆದುಕೊಂಡು ” ಮತ್ತೆ ಕಲ್ಯಾಣ” ಕಾರ್ಯಕ್ರಮ ಆಯೋಜಿಸಿದ್ದೆವು. ಅದೊಂದು ಅದ್ಭುತ ಕಾರ್ಯಕ್ರಮವಾಗಿತ್ತು ಹಾಗೂ ನಿಜಕ್ಕೂ ಅದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂದಿತ್ತು. ಆಯಾ ನೆನಪುಗಳು ನಮ್ಮೆಲ್ಲರಲ್ಲೂ ಇನ್ನೂ ಹಸಿಯಾಗಿವೆ. ಆಗ ರಚಿಸಿದ್ದ ವಾಟ್ಸಾಪ್ ಗುಂಪು ಇನ್ನೂ ಜೀವಂತ ಇರುವುದೇ ಆಯಾ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿ.
ನಾವು ಕೋಲಾರ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಸ್ಥಳೀಯ ಪ್ರಗತಿಪರ ಸಂಘಟನೆಗಳ ಜೊತೆಯಲ್ಲಿ ಮಾಡಿದ್ದು ತುಂಬಾ ಅವಿಸ್ಮರಣೀಯ ಘಟನೆ. ಆ ಕಾರ್ಯಕ್ರಮ ಎಲ್ಲರ ಮನಸ್ಸನ್ನು ಸೂರೆಗೊಂಡಿತ್ತು.