Sounds of Basava: ಬಸವ ವಚನಗಳು ಈಗ ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಲಭ್ಯ

ಬಸವ ಮೀಡಿಯಾ
ಬಸವ ಮೀಡಿಯಾ

Sounds of Basava ವೆಬ್ಸೈಟ್ ಅನಾವರಣ

ಕಲಬುರ್ಗಿ

ಬಸವಣ್ಣನವರ ವಚನಗಳ ವೆಬ್ಸೈಟ್ ‘ಸೌಂಡ್ಸ್ ಆಫ್ ಬಸವ’ವನ್ನು ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ ಅವರು ಲೋಕಾರ್ಪಣೆ ಮಾಡಿದರು.

ಕಲಬುರಗಿ ಬಸವ ಸಮಿತಿ ಹಾಗೂ ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಅನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವೆಬ್ಸೈಟ್ ನ ಪರಿಚಯ ಮಾಡಿಕೊಡಲಾಯಿತು.

Sounds of Basava (www.soundsofbasava.in) ವೆಬ್ಸೈಟ್ ನಲ್ಲಿ ಬಸವಣ್ಣನವರ 432 ವಚನಗಳನ್ನು ಜಗತ್ತಿನ ವಿವಿಧ ಭಾಷೆಗಳಲ್ಲಿ ಓದಬಹುದು. ವಚನಗಳ ಜೊತೆಗೆ ಅವುಗಳ ನಿರ್ವಚನವನ್ನೂ ನೀಡಲಾಗಿದೆ. ಕನ್ನಡದಲ್ಲಿ ವಚನಗಳನ್ನು ಕೇಳುವ ಅವಕಾಶವೂ ಇದೆ.

ಇದರ ಪರಿಕಲ್ಪನೆ ಮತ್ತು ನಿರ್ಮಾಣ ಮಾಡಿದ ಉದ್ಯಮಿ ರಾಜೇಂದ್ರ ಖೂಬಾ ಅವರು ಮಾತನಾಡಿ ವಚನಗಳನ್ನು ಜಗತ್ತಿಗೆ ಯಾವುದೇ ಯಾವುದೇ ಭಾಷೆಯಲ್ಲಿ ಓದಬಹುದು ಅದರ ಅರ್ಥ ಅವರವರ ಭಾಷೆಯಲ್ಲಿ ತಿಳಿದುಕೊಳ್ಳಬಹುದು ಎಂದರು.

‘ಸೌಂಡ್ಸ್ ಆಫ್ ಬಸವ’ ವೆಬ್‌ಸೈಟ್‌ ರೂಪಿಸಿದ ರಾಜೇಂದ್ರ ಖೂಬಾ ಮಾತನಾಡಿ, ‘ಬಸವಣ್ಣ ಹೇಳಿದ್ದ ವಚನಗಳು ಪುಸ್ತಕದಲ್ಲಿ ಅಲಂಕರಿಸಲು ಅಲ್ಲ. ಬಸವಾದಿ ಶರಣರ ವಚನಗಳು ಶಾಯಿ ಹಾಗೂ ಕಾಗದದಿಂದ ಹುಟ್ಟಿದ್ದಲ್ಲ; ಅವು ಅನುಭವ ಜನ್ಯ. ವಚನಗಳು ಬದುಕಿನ ಪರಿವರ್ತನೆಯ ಮಂತ್ರಗಳು.

ಅಂಥ ವಚನಗಳನ್ನು ಬಹುಭಾಷೆಯ ಓದುಗರಿಗೆ ತಲುಪಿಸಲು ತಂತ್ರಜ್ಞಾನದ ನೆರವು ಪಡೆದು ವೆಬ್‌ಸೈಟ್‌ ರೂಪಿಸಲಾಗಿದೆ. ಜಗತ್ತಿಗೆ ಯಾವುದೇ ಭಾಷೆಯಲ್ಲಿ ವಚನಗಳನ್ನು ಓದಬಹುದು, ಅರ್ಥ ತಿಳಿದುಕೊಳ್ಳಬಹುದು, ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ಮಾತನಾಡಿದ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಂತ್ರಜ್ಞಾನದ ಫಲವಾಗಿ ಬಸವಣ್ಣ ಜಗತ್ತಿಗೆ ತಲುಪುವ ಕಾಲ ಸನ್ನಿಹಿತವಾಗಿದೆ’ ಎಂದು ಹೇಳಿದರು.

“ರಾಜೇಂದ್ರ ಖೂಬಾ ಹಾಗೂ ಮತ್ತವರ ತಂಡವು ಎಐ ಸೇರಿದಂತೆ ತಂತ್ರಜ್ಞಾನ ಸದ್ಬಳಕೆ ಮಾಡಿ ವಚನಗಳನ್ನು ಅಲೌಕಿಕ ಭಾವನೆಯಲ್ಲಿ ವಿಕಾಸಗೊಳಿಸಿ ಏಕಕಾಲಕ್ಕೆ ಬಹುಭಾಷೆಯಲ್ಲಿ ನೀಡುವ ಕೆಲಸ ಮಾಡಿದೆ. ಪ್ರತಿ ಸಾಲಿನ ವಿಶ್ಲೇಷಣೆಯಷ್ಟೇ ಅಲ್ಲದೇ ವಚನಗಳ ಕಾವ್ಯಮಯ ಸ್ವರೂಪವನ್ನೂ ಕೊಡಲು ಪ್ರಯತ್ನಿಸಿದ್ದಾರೆ. ಇದು ಅನುಭಾವಿಕ ಲೋಕ ತಲುಪಿದರೆ, ಜಗತ್ತಿನೆಲ್ಲೆಡೆ ಬಸವಣ್ಣ ವ್ಯಾಪಿಸುತ್ತಾರೆ,” ಎಂದರು.

ಫಕೀರೇಶ ಕಣವಿ ಅವರಿಗೆ 2026 ಸಾಲಿನ ವಚನ ಸಂಗೀತ ವಿಭೂಷಣ ಡಾ. ಬಿ ಡಿ ಜತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವೆಬ್ಸೈಟ್ ವಿನ್ಯಾಸಗೊಳಿಸಿದ ಮಲ್ಲಿಕಾರ್ಜುನ್ ಎಚ್ ರಾವ್ ಮತ್ತು ವಚನ ವಾಚನ ಮಾಡಿದ ಮಮತಾ ಎಸ್ ಎನ್ ಅವರನ್ನು ಗೌರವಿಸಲಾಯಿತು. ಕುಮಾರ ಕಣಿವಿ ,ಪಂಚಾಕ್ಷರಿ ಕಣವಿ ವಚನ ಗಾಯನ ಮಾಡಿದರು.

ಕಲ್ಬುರ್ಗಿ ಜಿಲ್ಲೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ , ಕಾರ್ಯದರ್ಶಿ ಭೀಮಶಂಕರ್ ಫಿರೋಜಬಾದ್ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು .

ಪ್ರಧಾನ ಕಾರ್ಯದರ್ಶಿ ಡಾ.ಕೆ. ಎಸ್. ವಾಲಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಕೂಬಾ ,ಉಪಾಧ್ಯಕ್ಷರಾದ ಡಾ.ಜಯಶ್ರೀ ದಂಡೆ, ಕಾರ್ಯದರ್ಶಿ ಡಾ.ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ್ ಪಾಳ, ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *