ಸುರಪುರ: ಬಸವ ಮಾಲಾಧಾರಿಗಳಿಂದ ಸ್ವಚ್ಛತಾ ಕಾರ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಸುರಪುರ

ತಾಲ್ಲೂಕಿನ ಗೋಣಿಮಟ್ಟಿ ಬಸವೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯವನ್ನು ಬಸವ ಮಾಲಾಧಾರಿಗಳು ಶುಕ್ರವಾರ ನಡೆಸಿದರು.

ಕೆ.ತಳ್ಳಳ್ಳಿ ಗ್ರಾಮದ ಹೊರವಲಯದಲ್ಲಿರುವ ಈ ದೇವಸ್ಥಾನದಲ್ಲಿ ಸುಮಾರು 20 ವರ್ಷಗಳಿಂದ ಯಾವುದೇ ಕಾರ್ಯಚಟುವಟಿಕೆಗಳು ನಡೆದಿಲ್ಲ. ದೇವಸ್ಥಾನದ ಸುತ್ತಮುತ್ತಲು ಬೆಳೆದಿದ್ದ ಕಲ್ಲು-ಮುಳ್ಳು, ಗಿಡ-ಗಂಟಿಗಳನ್ನು ಬಸವ ಮಾಲಾಧಾರಿಗಳು ಜೆಸಿಬಿ ಯಂತ್ರದಿಂದ ಸ್ವಚ್ಛ ಗೊಳಿಸಿದರು.

ಬಸವ ಮಾಲಾಧಾರಿಗಳಾದ ಶರಣಗೌಡ ವಡಿಗೇರಿ, ಚನ್ನಗೌಡ ಚನ್ನೂರ, ಅಶೋಕ ಕಾಕರಗಲ್ಲ, ರಾಘವೇಂದ್ರ ಮಾಸ್ತರ, ನಾಗರಾಜ ಪತ್ತಾರ, ಕುಮಾರ ದೊರೆ, ಕರಿಬಸಪ್ಪಗೌಡ ಚನ್ನೂರ, ದೇವಣ್ಣ ಅಲಗೂರ, ಶ್ರೀಕಾಂತ ಕಮತಗಿ, ವಿಶ್ವರಾಧ್ಯ ಮಾಲಿ ಪಾಟೀಲ್, ಆನಂದ ಅಲಗೂರ, ಶಿವರಾಜ ಕಮತಗಿ, ಶರಣಗೌಡ ಕಾಕರಗಲ್ಲ ಸೇರಿ ಇತರರಿದ್ದರು.

ಮಾಲಾಧಾರಿಗಳ ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *