ಮೈಸೂರು ಅಭಿಯಾನ ಸಿದ್ದತೆಗೆ ಸುತ್ತೂರು ಮಠದಲ್ಲಿ ಯಶಸ್ವಿ ಸಭೆ
ಮೈಸೂರು
ಸುತ್ತೂರು ಮಠದಲ್ಲಿ ಬಸವ ಸಂಘಟನೆಗಳು ಯಶಸ್ವಿಯಾಗಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯನ್ನು ಶುಕ್ರವಾರ ನಡೆಸಿದವು. ವಿವಿಧ ಸಂಘಟನೆಗಳ 150ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹೇಳಿದ ಮಹದೇವಪ್ಪ.ಎಸ್ ಬಸವ ತತ್ವದ ಮೇಲೆ ನಡೆಯುತ್ತಿರುವ ವೈದಿಕರ ದಾಳಿಗೆ ಲಿಂಗಾಯತ ಸಮಾಜ ನೀಡುತ್ತಿರುವ ಉತ್ತರ ಅಭಿಯಾನ. ಜಿಲ್ಲೆಯಲ್ಲಿ ಲಿಂಗಾಯತ ಧರ್ಮವನ್ನು ಪುನರುತ್ಥಾನಗೊಳಿಸಲು ಅಭಿಯಾನ ಒಳ್ಳೆಯ ಅವಕಾಶ ಎಂದು ಹೇಳಿದರು.

“ಅಭಿಯಾನದ ರೂಪುರೇಷೆಯನ್ನು ಶ್ರೀಗಳ ಜೊತೆ ಚರ್ಚಿಸಲಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಶ್ರೀಗಳು ಹೇಳಿದ್ದಾರೆ. ಮೈಸೂರಿನ ಸುತ್ತೂರು ಮಠದ ಸಭಾಂಗಣದಲ್ಲಿಯೇ ಅಭಿಯಾನದ ಕಾರ್ಯಕ್ರಮಗಳು ನಡೆಯಲಿದೆ,” ಎಂದು ಮಹದೇವಪ್ಪ ಹೇಳಿದರು.
“ಮೈಸೂರಿನಲ್ಲಿ ಅಭಿಯಾನ ಸೆಪ್ಟೆಂಬರ್ 23 ನಡೆಯುತ್ತಿದೆ. ದಸರಾ ಚಟುವಟಿಕೆಗಳು ಕೂಡ ಅದೇ ಸಮಯದಲ್ಲಿ ಶುರುವಾಗುವುದರಿಂದ ಆ ಸಮಯದಲ್ಲಿ ಯಾವ ಸಭಾಂಗಣವೂ ಸಿಗುವುದಿಲ್ಲ. ಆದರೆ ಈಗ ಸುತ್ತೂರು ಮಠದ ಬೆಂಬಲದಿಂದ ಎಲ್ಲವೂ ಸರಾಗವಾಗಿ ನಡೆಯುವುದೆಂದು,” ಎಂದು ಮಹದೇವಪ್ಪ ಹೇಳಿದರು.

ಸಭೆಯಲ್ಲಿ ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಮಠಾಧಿಪತಿಗಳ ಗೋಷ್ಠಿ, ಶರಣ ಸಾಹಿತ್ಯ ಪರಿಷತ್, ಬಸವ ಭಕ್ತರ ಒಕ್ಕೂಟ, ಕದಳಿ ಮಹಿಳಾ ವೇದಿಕೆ, ನೊಣಬ ಲಿಂಗಾಯತ ಮಹಾಸಭಾ,
ಸಜ್ಜನ ಸಂಘ, ಹೇಮರೆಡ್ಡಿ ಮಲ್ಲಮ್ಮ ಸಂಘ ಮುಂತಾದ ಸಂಘಟನೆಗಳು ಭಾಗವಹಿಸಿದ್ದವು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಮಹಿಳಾ ಸಂಘಟನೆಗಳ ಜೊತೆ ಮತ್ತು ಉರಿಲಿಂಗಪೆದ್ದಿ ಮಠದಂತಹ ಇತರ ಮಠಗಳೊಂದಿಗೂ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಮಹದೇವಪ್ಪ ಹೇಳಿದರು.
“ಮೈಸೂರಿನಲ್ಲಿ ಎಲ್ಲಾ ಬಸವ ಸಂಘಟನೆಗಳು ಒಂದಾಗಿ ದೊಡ್ಡ ಕಾರ್ಯಕ್ರಮ ನಡೆಸುತ್ತಿರುವುದು ಇದೇ ಮೊದಲು. ಇದು ಐತಿಹಾಸಿಕ ಬೆಳವಣಿಗೆ,” ಎಂದು ಮಹದೇವಪ್ಪ ಹೇಳಿದರು.
ತುಂಬಾ ಉತ್ತಮವಾದ ಕೆಲಸ ಧನ್ಯವಾದಗಳು
ಸಿದ್ದಗಂಗೆ ಸುತ್ತೂರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಇನ್ನಿಲ್ಲದ ಕಳೆ ಬರುವುದು ಅಕ್ಟೋಬರ್ 5ರ ಸಮಾವೇಶಕ್ಕೆ….