ಸುವರ್ಣ ಟಿವಿಯಲ್ಲಿ ಕನ್ನೇರಿ ಶ್ರೀ ಹೇಳಿದ್ದು: ಬಸವ ತಾಲಿಬಾನಿಗಳು…ಹುಚ್ಚ ನಾಯಿಗಳು… 

ಬಸವ ಮೀಡಿಯಾ
ಬಸವ ಮೀಡಿಯಾ

ಸಾಮಾನ್ಯ ನಾಯಿಯಾಗಿದ್ದರೆ ಯಾರಿಗೆ ಬೊಗಳಬೇಕು ಅಂತ ಗೊತ್ತಿರುತ್ತೆ. ಆದರೆ ಹುಚ್ಚ ನಾಯಿಯಾಗಿದ್ದರೆ ಕಂಡಕಂಡವರಿಗೆಲ್ಲ ಬೊಗಳುತ್ತದೆ…

ಬೆಂಗಳೂರು 

ಸುವರ್ಣ ಟಿವಿಯಲ್ಲಿ ಮಾತನಾಡುತ್ತ ಕಾಡಸಿದ್ದೇಶ್ವರ ಮಠದ ಶ್ರೀಗಳು ನಾಲಿಗೆಯ ಮೇಲೆ ಹತೋಟಿ ಕಳೆದುಕೊಂಡು ಬಸವ ಅನುಯಾಯಿಗಳನ್ನು ‘ಬಸವ ತಾಲಿಬಾನ್’ ಎಂದು ಕರೆದದ್ದು ಎಲ್ಲರ ಗಮನಕ್ಕೂ ಬಂದಿದೆ. 

‘ಇದೊಂದು ಹೊಸ ಪದ. ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಬಸವ ತಾಲಿಬಾನಿಗಳು ಹೋರಾಡುತ್ತಿದ್ದಾರೆ. ಇವರ ಜೊತೆ ಕಮ್ಯುನಿಸ್ಟರು ಸೇರಿಕೊಂಡಿದ್ದಾರೆ,” ಎಂದು ಹೇಳಿದರು. 

ಮಾತಿನ ಭರದಲ್ಲಿ ಮುಂದುವರೆದು ‘ಹುಚ್ಚ ನಾಯಿ ಹಾಗೆ ಬೊಗಳ್ತಾ ಹೋದರೆ ಹೇಗೆ? ಸಾಮಾನ್ಯ ನಾಯಿಯಾಗಿದ್ದರೆ ಯಾರಿಗೆ ಬೊಗಳಬೇಕು ಅಂತ ಗೊತ್ತಿರುತ್ತೆ. ಆದರೆ ಹುಚ್ಚ ನಾಯಿಯಾಗಿದ್ದರೆ ಕಂಡಕಂಡವಿರಿಗೆಲ್ಲ ಬೊಗಳುತ್ತದೆ,’ ಎಂದು ಹೇಳಿದರು.

ಲಿಂಗಾಯತ ಸ್ವಾಮಿ ಎಂದು ಕರೆದುಕೊಂಡರೂ ವಿಭೂತಿ ಬದಲು ಫೆಮಿನಿಸ್ಟ್ ಮಹಿಳೆಯರಿಗಿಂತ ಲಕ್ಷಣವಾಗಿ ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುತ್ತಾರೆ ಎಂದು ಅವರ ಮೇಲೆ ಪದೇ ಪದೇ ಕೇಳಿಸುವ ಟೀಕೆ. 

‘ಕುಂಕುಮ ಹಾಕಬಾರದೆಂದು ಯಾವ ಶರಣರೂ ವಚನ ಬರೆದಿಲ್ಲ. ಆದರೂ ಹುಚ್ಚ ನಾಯಿ ಹಾಗೆ ಬೊಗಳ್ತಾ ಹೋದರೆ ಹೇಗೆ?’ ಎಂದು ಈ ಟೀಕೆಗೆ ಸಿಟ್ಟಿನ ಪ್ರತಿಕ್ರಿಯೆ ನೀಡಿದರು. 

ಅವರ ಜೊತೆ ವಾದಕ್ಕಿಳಿದ ಸಾಹಿತಿ ಆಣೆಕಟ್ಟಿ ವಿಶ್ವನಾಥ್ ಬಸವ ತತ್ವದ ಕಾಡಸಿದ್ದೇಶ್ವರ ಮಠದ ಪೀಠಾಧಿಪತಿಯಾಗಿ ಸನಾತನವಾದಿಯಾಗಿರುವುದು ಸರಿಯಾ ಎಂದು ಪ್ರಶ್ನಿಸಿದರು. 

“ಅದಕ್ಕೆ ಭಾರತದಲ್ಲಿರುವ ಎಲ್ಲ ಮಠಗಳು ಹೆಚ್ಚು ಕಡಿಮೆ ವೈದಿಕ ಮಠಗಳು, ಬಸವಣ್ಣನವರು ವೈದಿಕತೆ ವಿರೋಧಿಸಲಿಲ್ಲ,” ಎಂದು ಹೊಸ ವಾದ ಮಂಡಿಸಿದರು. 

ಮಾತು ಮುಂದುವರೆಸಿ, ಭಾರತದಲ್ಲಿ ಮೊದಲು ಗೋತ್ರಗಳಿದ್ದವು ಜಾತಿಯಿರಲಿಲ್ಲ, ಬ್ರಿಟಿಷರು ಮತ್ತು ಕಮ್ಯುನಿಸ್ಟರು ಸಮಾಜ ಒಡೆಯಲು ಜಾತಿ ಹುಟ್ಟುಹಾಕಿದರು, ಎಂದು  ಕನ್ನೇರಿ ಶ್ರೀ ವಿವರಿಸಿದರು. 

ಭಾರತದಲ್ಲಿ ಜಾತಿ ವ್ಯವಸ್ಥೆಯಿಲ್ಲದಿದ್ದರೆ ಉಡಪಿ ಮಠದಲ್ಲಿ ಸಹ ಭೋಜನಕ್ಕೆ ಯಾಕೆ ಅವಕಾಶವಿಲ್ಲ ಎಂದು ವಿಶ್ವನಾಥ್ ಪ್ರಶ್ನಿಸಿದಾಗ ಕನ್ನೇರಿ ಶ್ರೀ ಕೊಟ್ಟ ಉತ್ತರ: “ಅದೊಂದು ಅಪವಾದ, ಸಿದ್ಧಾಂತವಲ್ಲ.”

Share This Article
4 Comments
  • ಗುರುಗಳೇ ಯಾವ ವಚನದಲ್ಲಿ ಕುಂಕುಮ ಹಾಕಬೇಕೆಂದು ಹೇಳಿದ್ದಾರೆ …ಬಸವ ತತ್ವ ನಿಷ್ಠೆಯಿದ್ದರೆ ನೀವೇ ಹೇಳಿ ನೋಡೋಣ

    • ರಾಜಕೀಯ ಕ್ಷೇತ್ರದಲ್ಲಿ ಬಸವಣ್ಣಗೌಡಯತ್ನಾಲ್ ಧಾರ್ಮಿಕ ಕ್ಷೇತ್ರದಲ್ಲಿ ಈ ಸ್ವಾಮಿಗಳು ಇವರು ಆರ್ ಎಸ್ ಎಸ್ ಪ್ರತಿನಿಧಿಗಳು ಇಂತವರ ಮಾತುಗಳನ್ನು ಕೇಳಿಸಿಕೊಳ್ಳಬಾರದು ಮತ್ತು ಅಜ್ಞಾನಿಗಳ ಜೊತೆ ವಾದ ಮಾಡುತ್ತಾ ಹೋದರೆ ಅವರು ಪ್ರಚಾರಕ್ಕೆ ಬರುತ್ತಾರೆ .

  • ಬಸವ ಪ್ರಣೀತ ಮಠವೊಂದರ ಮಠಾಧಿಪತಿಯಾಗಲು ಅಥವಾ ಮುಂದುವರಿಯಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ. ನಮ್ಮ ಮಠ ವೈದಿಕ ಅಥವಾ ಅವೈದಿಕ ಅಂತ ತೀರ್ಮಾನ ಮಾಡಲು ನೀವ್ಯಾರು ಅಂತ ಪ್ರಶ್ನೆ ಕೇಳಿದವರ ಮೇಲೆಯೇ ಹಾರಾಡಿದ್ದು ಇವರು ಮಠಾಧಿಪತಿಯಾಗಿ ಮುಂದುವರಿಯಲು ಅರ್ಹರಲ್ಲ. ಇವರು ತಾವೇ ಸ್ವತಹ ದುಡಿದು ಸಂಪಾದಿಸಿರುವ ಆಸ್ತಿಯಲ್ಲ ಮತ್ತು ಇವರೆ ಕಟ್ಟಿಸಿರುವ ಮಠವಲ್ಲ. ಅದು ಸಾರ್ವಜನಿಕರಿಗೆ ಸೇರಿದ ಆಸ್ತಿ. ಅದು ಬಸವ ಪ್ರಣೀತ ಭಕ್ತರು ಮಾಡಿದ ದಾಸೋಹದ ಪ್ರತೀಕ. ಯಾರಿಗಾದರೂ ಅದರ ಮೇಲೆ ಹಕ್ಕು ಇದೆ ಅಂದರೆ ಅದು ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಮಾತ್ರ. ಆದುದರಿಂದ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಮತ್ತು ಕ್ಷಮೆ ಯಾಚಿಸಲಿ.

Leave a Reply

Your email address will not be published. Required fields are marked *