ಬೆಳಗಾವಿ
ಇಂದು ನಗರದಲ್ಲಿ ನಡೆಯುತ್ತಿರುವ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮಕ್ಕೆ ಪ್ರಚಾರ ನೀಡಲು ಕೆಲವು ದಿನಗಳಿಂದ ಭಿತ್ತಿಪತ್ರವೊಂದು ಹರಿದಾಡುತ್ತಿದೆ.

ಅದರಲ್ಲಿ ನಾಗನೂರಿನ ಬಸವ ತತ್ವದ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳ ಭಾವಚಿತ್ರ ಎದ್ದು ಕಾಣುವಂತೆ ಮುದ್ರಣವಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಬಸವ ಮೀಡಿಯಾದ ಜೊತೆ ಮಾತನಾಡುತ್ತ ಶ್ರೀಗಳು ರೇಣುಕಾಚಾರ್ಯರ ಜಯಂತಿಗೆ ನಮ್ಮ ಅನುಮತಿ ಇಲ್ಲದೆ ಭಾವಚಿತ್ರ ಹಾಗು ಹೆಸರು ಮುದ್ರಿಸಿರುವದು ಕಂಡುಬಂದಿದೆ. ಇಂತಹ ಘಟನೆ ಮರುಕಳಿಸದಂತೆ ಆಯೋಜಕರಿಗೆ ಸೂಚಿಸಿದ್ದೇನೆ, ಎಂದು ಹೇಳಿದರು.
ಈ ವಿಷಯ ಇಂದು ಬೆಳಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ತಕ್ಷಣವೇ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಹೇಳಿದರು.
ಜಿಲ್ಲೆಯ ಸರಕಾರಿ ಅಧಿಕಾರಿಯೊಬ್ಬರು ಇದು ಸರಕಾರಿ ಕಾರ್ಯಕ್ರಮವಾದ್ದರಿಂದ ಎಲ್ಲಾ ಸ್ಥಳೀಯ ಮಂತ್ರಿ, ಶಾಸಕರು ಮತ್ತು ಗಣ್ಯರನ್ನು ಆಹ್ವಾನಿಸಲಾಗಿದೆ. 10 ದಿನಗಳ ಮುಂಚೆಯೇ ಅಹ್ವಾನ ಪತ್ರಿಕೆ ಮುದ್ರಣವಾಗಿದ್ದು, ಅದರಲ್ಲಿಯೂ ಶ್ರೀಗಳ ಹೆಸರು ಪ್ರಮುಖವಾಗಿ ಪ್ರಕಟವಾಗಿದೆ, ಎಂದರು.
“ಬಿಜೆಪಿಯ ವಿಧಾನ ಪರಿಷತ್ತಿನ ಮಾಜಿ ಶಾಸಕ ಮಹಾಂತೇಶ ಕವಟಗಿಮಠ ಅವರು ಜಯಂತೋತ್ಸವದ ಸಮಿತಿಯ ಅಧ್ಯಕ್ಷ. ಅವರು ಶ್ರೀಗಳ ಅನುಮತಿಯನ್ನು ಪಡೆದಿದ್ದಾರೋ ಅಥವಾ ಇಲ್ಲವೋ ನನಗೆ ತಿಳಿದಿಲ್ಲ,” ಎಂದು ಅವರು ಹೇಳಿದರು.

ಬಸವಣ್ಣನವರ ಭಾವ ಚಿತ್ರ ಏಕೆ ಅಳವಡಿಸಿ ಪ್ರಚಾರ ಮಾಡುತ್ತಿದ್ದಾರೆ? ಬಸವ ತತ್ವ ಒಪ್ಪಿ ಆಚರಿಸುವುವರು ಯಾರೆ ಆಗಲಿ ಬಸವಣ್ಣ ನವರ ಭಾವಚಿತ್ರ ಅಳವಡಿಸಲು ಅರ್ಹರು. ಬಸವ ತತ್ವ ಒಪ್ಪದೆ ಅವರ ಅಚಾರ ವಿಚಾರಗಳಿಗೆ ವ್ಯತಿರಕ್ತವಾಗಿ ನಡೆಯುವುವರು ಬಸವಣ್ಣನವರ ಹೆಸರು ಮತ್ತು ಚಿತ್ರ ಬಳಸುವುದು ಸೂಕ್ತವಲ್ಲ. ಅದು ಬಸವಾನುಯಾಯಿಗಳ ಅಸ್ಮಿತೆ, ಅದು ಅಲ್ಲದೆ ಅವರು ಇಷ್ಠಲಿಂಗವನ್ನು ಸ್ಥಾವರದ ರೀತಿ ಪೂಜಿಸಿ ಅದರ ಉದ್ದೇಶಕ್ಕೆ ಅವಮಾನಿಸುತ್ತಿದ್ದಾರೆ. ಪಂಚಚಾರ್ಯರು ಮತ್ತು ಅವರ ಅನುಯಾಯಿಗಳು ತಕ್ಷಣ ದಿಂದ ಈರೀತಿ ಭಾವಚಿತ್ರ ಹಾಗು ಇಷ್ಠಲಿಂಗ ಬಳಕೆಯನ್ನು ನಿಲ್ಲಿಸಬೇಕು.
ಈ ಕಾರ್ಯಕ್ರಮ RSS ಕೃಪಾಪೋಷಿತ ನಾಟಕಕಂಪನಿಯದು
ಪ್ರಿಯಾ ಸವದಿ ಈ ಮಹಿಳೆ ಸಂಘಪರಿವಾರದವರು. ಇಂಥವರನ್ನು ಜನರನ್ನು ಸೇರಿಸಲು ಕರೆತರುತ್ತಾರೆ.
ಮಂಜುನಾಥ ಮೈಸೂರು ಅವರ ಅಭಿಮತ, ತುಂಬಾ ಸೂಕ್ತವಾಗಿದೆ, ಲಿಂಗಾಯತ ಧರ್ಮ ಅಖಿಲಭಾರತ ಅಧ್ಯಕ್ಷರಿಂದ ಅನುಮತಿ ಪಡೆದು ಭಾವಚಿತ್ರ, ಬಸವ ವಚನಗಳನ್ನು ಪಂಚಪೀಠದವರು ಬಳಸಬೇಕು. ಯಾವದೇ ತರಹದ ಅಪಪ್ರಚಾರ, ಅವಹೇಳನ, ಇತ್ಯಾದಿ, ಆಗದಂತೆ ತಡೆಯಬೇಕು.. ಕೇವಲ ಟ್ರೇಡ್ ಮಾರ್ಕ್
ನಂತೆ ಬಳಸಿ ಆರ್ಥಿಕ ಅಭಿವೃದ್ಧಿಗಾಗಿ, ವೇದಿಕ ಆಗಬಾರದು ಎಂದು ಕಳಕಳಿಯ ವಿನಂತಿ.
Reel ಮಾಡುವವರು ಸೇರಿದಮೇಲೆ.ರೀಲ್ ರೇಣುಕಾಚಾರ್ಯ ಜಯಂತಿ