ಚಿತ್ರದುರ್ಗ:
ಇದೇ ಮಾ.18ರಂದು ಬುಧವಾರ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಯುಗಾದಿ ಸಂದರ್ಭದಲ್ಲಿ, 12ನೇ ಶತಮಾನದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರ ಜಯಂತಿ ಅಂಗವಾಗಿ ಅಲ್ಲಮಪ್ರಭುದೇವರ ಜೀವನ, ವ್ಯಕ್ತಿತ್ವ ಸಾಧನೆ ಮತ್ತು ಅವರ ವಚನ ವಿಶ್ಲೇಷಣೆಯ ಕವನಗಳ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದ್ದು, ಕವನಗಳನ್ನು ಆಹ್ವಾನಿಸಲಾಗಿದೆ.
ಕವನವು ಮುದ್ರಿತ ಒಂದು ಪುಟಕ್ಕಿಂತ ಹೆಚ್ಚಿರಬಾರದು. ಭಾಗವಹಿಸಲಿಚ್ಚಿಸುವವರು ತಮ್ಮ ಕವನವನ್ನು ಮಾರ್ಚ್ 12, 2026ರ ಒಳಗಾಗಿ ಕೋರಿಯರ್ ಮೂಲಕ ಸಂಯೋಜಕರು, ಯುಗಾದಿ ಕವಿಗೋಷ್ಠಿ ವಿಭಾಗ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಂ.ಕೆ. ಹಟ್ಟಿ-ಅಂಚೆ, ಚಿತ್ರದುರ್ಗ- 577502 ಈ ವಿಳಾಸಕ್ಕೆ ಕಳುಹಿಸಿಕೊಡಲು ಮತ್ತು ನುಡಿ ತಂತ್ರಾಂಶದಲ್ಲಿ ಡಿಟಿಪಿ ಮಾಡಿ basavakendra@gmail.com e ಮೂಲಕ ಸಾಫ್ಟ್ ಕಾಪಿ ಕಳುಹಿಸಲು ಕೋರಲಾಗಿದೆ.
ಆಯ್ಕೆಯಾದ ಕವನಗಳನ್ನು ವಾಚಿಸಲು ಕವಿಗಳನ್ನು ಆಹ್ವಾನಿಸಲಾಗುತ್ತದೆ. ಜೊತೆಗೆ, ಸ್ಮರಣಿಕೆ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತ ಉದಯೋನ್ಮುಖ ಕವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಡಾ. ಸಿ.ಟಿ. ಜಯಣ್ಣ- 9886840737, ಎಂ.ಜೆ. ರುದ್ರಮೂರ್ತಿ-9448664932 ಸಂಪರ್ಕಿಸಲು ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.
