ಲಂಡನ್
ಥೇಮ್ಸ್ ನದಿಯ ದಡದಲ್ಲಿರುವ ಬಸವೇಶ್ವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಲು ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಅವರಿಗೆ ಆಹ್ವಾನ ನೀಡಲಾಗಿದೆ.
23ನೇ ಸೆಪ್ಟೆಂಬರ್ 2024 ರಂದು ಲಿವರ್‌ಪೂಲ್‌ನಲ್ಲಿನ ವಾರ್ಷಿಕ ಲೇಬರ್ ಪಕ್ಷದ ಸಮಾವೇಶದಲ್ಲಿ ಸ್ಟಾರ್ಮರ್ ಅವರನ್ನು ಭೇಟಿಯಾಗಿ ಅಹ್ವಾನ ನೀಡಿದೆ ಎಂದು ಲ್ಯಾಂಬೆತ್ತಿನ ಮಾಜಿ ಮೇಯರ್ ನೀರಜ್ ಪಾಟೀಲ್ ಹೇಳಿಕೆ ಕೊಟ್ಟಿದ್ದಾರೆ.
ಲಂಡಲ್‌ನ ಥೇಮ್ಸ್ ನದಿ ತೀರದಲ್ಲಿ ಬಸವೇಶ್ವರ ಸ್ಮಾರಕವನ್ನು ಅನಾವರಣಗೊಳಿಸುವಲ್ಲಿ ನೀರಜ್ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದರು.
2015ರಲ್ಲಿ ಸ್ಥಾಪನೆಯಾದ ಸ್ಮಾರಕದ ದಶಮಾನೋತ್ಸವವನ್ನು ಇಂಗ್ಲೆಂಡಿನ ಸಂಸತ್ತಿನಲ್ಲಿ ಆಚರಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇತ್ತೀಚೆಗ ಹೇಳಿದ್ದರು.
ಈ ಕಾರ್ಯಕ್ರಮಕ್ಕೆ ಎರಡೂ ದೇಶಗಳ ಪ್ರಧಾನಿಗಳನ್ನು ಸೇರಿಸುವ ಚಿಂತನೆಯೂ ಇದೆ. ಭಾರತದ ವಿದೇಶಾಂಗ ಸಚಿವಾಲಯದ ಮೂಲಕ ಈ ಪ್ರಯತ್ನ ನಡೆಯಬೇಕು ಮತ್ತು ಇದರ ಬಗ್ಗೆ ತಾವು ಆಗಲೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು.
ಸ್ಮಾರಕ ನಿರ್ಮಿಸಿದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ದಶಮಾನೋತ್ಸದ ಕಾರ್ಯಕ್ರಮಕ್ಕೆ ಆಹ್ವಾನ ಪತ್ರವನ್ನು ಮೋದಿ ಅವರಿಗೆ ಹಸ್ತಾಂತರಿಸಲು ಬೊಮ್ಮಾಯಿಯವರನ್ನು ವಿನಂತಿಸಿದೆ.
