ಬೈಲಹೊಂಗಲ ತಾಲೂಕಿನ ನೇಗಿನಹಾಳ ಹಾಗೂ ಹಾಗೂ ಪಟ್ಟಿಹಾಳ ಕೆ.ಎಸ್. ಗ್ರಾಮದ ಶರಣ ಬಳಗ ಪ್ರತಿ ವರ್ಷದಂತೆ ಈ ಭಾರಿಯೂ ಉಳಿವಿಗೆ ಪಾದಯಾತ್ರೆ ನಡೆಸಿದರು.
ಇವರ ಪಾದಯಾತ್ರೆ ನೇಗಿನಾಳ ಗ್ರಾಮದ ಚೆನ್ನಬಸವೇಶ್ವರ ಜ್ಞಾನ ಮಂಟಪದಿಂದ ಆಗಸ್ಟ್ 22 ಪ್ರಾರಂಭಗೊಂಡು, ಸುಮಾರು 160 ಕಿ.ಮೀ. ನಡಿಗೆ ಮಾಡಿ ಆಗಸ್ಟ್ 25 ರಾತ್ರಿ ಉಳಿವಿಗೆ ಬಂದು ತಲುಪಿತು.
ಮರುದಿನ ಶ್ರಾವಣ ಸೋಮವಾರದಂದು ಉಳವಿ ಪವಿತ್ರ ಕ್ಷೇತ್ರದಲ್ಲಿ ಎಲ್ಲರೂ ಸಾಮೂಹಿಕ ಇಷ್ಟಲಿಂಗ ಪೂಜೆ, ಅನುಭಾವ ಮಾಡಿ ಹಾಗೂ ಮಹಾಪ್ರಸಾದ ಸೇವಿಸಿ, ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.
ಪಾದಯಾತ್ರೆ ಮಾಡುವ ಸಮಯದಲ್ಲಿ ಪ್ರತಿಯೊಬ್ಬರೂ ವಚನಗಳ ಹಾಡುವುದು, ವಚನಗಳ ವಿಶ್ಲೇಷಣೆ ಮಾಡುವುದು, ಇಷ್ಟಲಿಂಗ ಪೂಜೆ, ಶಿವಯೋಗ, ಬಸವತತ್ವ ಸಂಸ್ಕಾರ ಮಾಡಿದೆವು. ಇದರಿಂದ ಬಸವಾದಿ ಶರಣರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತೆಂದು ಪಾದಯಾತ್ರೆಯಲ್ಲಿ ಭಾಗವಹಿಸಿದ ಶರಣ ಮಡಿವಾಳಪ್ಪ ಮಡಿವಾಳರ ಅಭಿಪ್ರಾಯಪಟ್ಟರು.