ಹುಬ್ಬಳ್ಳಿ:
12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯದ ವಿಶ್ವಗುರು ಬಸವಣ್ಣನವರು ನಮ್ಮ ಸಮಾಜದ ದುರ್ಬಲರು ಮತ್ತು ದೀನದಲಿತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಶ್ರಮಿಸಿದರು. ನಮ್ಮ ಭಾರತ ಸಾಂವಿಧಾನ ಸಂಸ್ಥಾಪಕರು ಅದೇ ಆಶಯವನ್ನು ಜಾರಿಗೆ ತಂದಿದ್ದಾರೆಂದು ಹೈಕೋರ್ಟ್ ನ್ಯಾಯವಾದಿ ಕೆ.ಎಸ್.ಕೋರಿಶೆಟ್ಟರ ಹೇಳಿದರು.
ಹುಬ್ಬಳ್ಳಿ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೋರಿಶೆಟ್ಟರ, ವಿಶ್ವಗುರು ಬಸವಣ್ಣನವರು ಜಗತ್ತಿನ ಪ್ರಪ್ರಥಮ ಪ್ರಜಾಸತ್ತಾತ್ಮಕ ಮತ್ತು ಧಾರ್ಮಿಕ ಸಂಸತ್ತಾದ ಅನುಭವ ಮಂಟಪವನ್ನು
ಸ್ಥಾಪಿಸಿದರು. ಇದು ಜಾತ್ಯತೀತ ಪ್ರಜಾಸತ್ತಾತ್ಮಕ ಹಾಗೂ ಪ್ರಜೆಗಳ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ. ಅವರು ಬರೆದ ವಚನಗಳು ಧಾರ್ಮಿಕ ಆಚರಣೆಗಳಾಗಿವೆ, ಅನುಭವ ಮಂಟಪದ ಸಮಯದಲ್ಲಿ ಚರ್ಚೆಗೆ ಒಳಪಟ್ಟಿವೆ ಮತ್ತು ನಮ್ಮ ಸಂವಿಧಾನದಿಂದ ಸ್ಥಾಪಿತವಾದ ಇಂದಿನ ಸಂಸತ್ತು ಮತ್ತು ಶಾಸಕಾಂಗಗಳಂತೆಯೇ ಅಂದಿನ ಶೂನ್ಯಪೀಠ ಅಧ್ಯಕ್ಷರಿಂದ ಇವೆಲ್ಲ ಅಂದೇ ಅನುಮೋದನೆಗೆ ಒಳಪಟ್ಟಿದ್ದವು ಎಂದರು.
ಅಕ್ಕಮಹಾದೇವಿ ಮಹಿಳಾ ವಿ.ವಿ. ವಿಶ್ರಾಂತ ಕುಲಪತಿ ಡಾ. ವಿ.ಬಿ. ಮಾಗನೂರು ಅವರ ಮನೆಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ದಣ್ಣ ಲಂಗೋಟಿ, ಜಿ.ಬಿ.ಹಲ್ಯಾಳ, ಪ್ರೊ. ಪಟ್ಟಣಶೆಟ್ಟಿ, ಲಿಂಗರಾಜ ಅಂಗಡಿ, ಬೆಳ್ಳಿಗಟ್ಟಿ ಮುಂತಾದವರು ಇದ್ದರು.
ಉಮಾ ಹುಲಿಕಂತಿಮಠ ಹಾಗೂ ಕೆಂಧೂಳಿ ವಚನ ಪ್ರಾರ್ಥನೆ ಮಾಡಿದರು.
ಕಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಸಾದ ದಾಸೋಹ ಏರ್ಪಡಿಸಲಾಗಿತ್ತು.