ಕಂಠಪಾಠ ಸ್ಪರ್ಧೆ: 1000 ವಚನ ಹೇಳಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ಏಪ್ರಿಲ್ 29 ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ

ನೆಲಮಂಗಲ

ವ್ಯಕ್ತಿತ್ವ ವಿಕಸನಕ್ಕಾಗಿ 12ನೇ ಶತಮಾನದ ಬಸವಾದಿ ಶರಣರ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯನ್ನು ಏಪ್ರಿಲ್ 29 ರಂದು ಬೆಳಗ್ಗೆ 8 ಕ್ಕೆ ನೆಲಮಂಗಲದ ಪವಾಡ ಬಸವಣ್ಣ ದೇವರ ಮಠದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಬಸವಣ್ಣ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಅವರ ಪ್ರಾಯೋಜಕತ್ವದಲ್ಲಿ ನಡೆಯುವ ವಚನ ಕಂಠಪಾಠ ಸ್ಪರ್ಧೆಯಲ್ಲಿ 1000 ವಚನಗಳನ್ನು ಹೇಳಿ ಪ್ರಥಮ ಸ್ಥಾನ ಪಡೆಯುವ ವಿಜೇತರಿಗೆ ₹ 1 ಲಕ್ಷ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದವರಿಗೆ ₹ 75 ಸಾವಿರ ನಗದು, ತೃತೀಯ ಸ್ಥಾನ ₹ 50 ಸಾವಿರ ನಗದು ಹಾಗೂ ನಂತರದ ಸ್ಥಾನ ಪಡೆಯುವ ಸ್ಪರ್ಧಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ಆಯೋಜಕರು ನಿಗದಿಪಡಿಸಿದ್ದಾರೆ.

ಕಂಠಪಾಠ ಸ್ಪರ್ಧೆಗೆ ನಿಯಮಗಳು:
ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ನಿಗದಿತ ಸಮಯದೊಳಗೆ ಹಾಜರಿರಬೇಕು. ವಚನ ಹೇಳುವಾಗ ನಿರರ್ಗಳವಾಗಿ, ಸ್ಪಷ್ಟವಾಗಿ, ಯಾವುದೇ ವ್ಯಾಕರಣ ದೋಷವಿಲ್ಲದೇ ಹೇಳಬೇಕು. ಸ್ಪರ್ಧಾರ್ಥಿಗಳು ಹೇಳುವ ವಚನಗಳನ್ನು ಸ್ಪಷ್ಟವಾಗಿ, ಮುದ್ರಿತ/ಲಿಖಿತ ರೂಪದ ಪ್ರತಿಯನ್ನು ಕಡ್ಡಾಯವಾಗಿ ತೀರ್ಪುಗಾರರಿಗೆ ಸಲ್ಲಿಸಬೇಕು. ವಚನ ಹೇಳುವ ಪ್ರತಿಯನ್ನು ಸಲ್ಲಿಸದಿದ್ದಲ್ಲಿ ಅಂಥಹವರನ್ನು ಸ್ಪರ್ಧೆಯಿಂದ ತಿರಸ್ಕರಿಸಲಾಗುವುದು.

ಬೇರೆ ಬೇರೆ ತಾಲೂಕು, ಜಿಲ್ಲೆಗಳಿಂದ ಏ.28 ರಂದೇ ಬರುವ ಸ್ಪರ್ಧಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯವಿದೆ. ಪ್ರಮುಖವಾಗಿ ಸ್ಪರ್ಧಾರ್ಥಿಗಳು ಹೇಳುವ ವಚನಗಳು 12ನೇ ಶತಮಾನದ ಬಸವಾದಿ ಶರಣರ ವಚನಗಳೇ ಆಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಎಂ.ಆರ್. ಅಭಿಲಾಷ 81473 95591, ಟಿ. ಜ್ಞಾನೇಶ 98454 54536, ಷಣ್ಮುಖಪ್ಪ 99804 96763 ಇವರನ್ನು ಸಂಪರ್ಕಿಸಬಹುದಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *