ತುಮಕೂರು
12ನೇ ಶತಮಾನದ ಶರಣರು ತಮ್ಮ ಚಳುವಳಿಯಲ್ಲಿ ಭಕ್ತಿಯನ್ನು ತಮ್ಮ ಕಾರ್ಯತಂತ್ರದ ಭಾಗವಾಗಿ ಬಳಸಿ ದೇವರು ಮತ್ತು ಧರ್ಮವನ್ನು ವೈದಿಕ ಮಧ್ಯವರ್ತಿಗಳಿಂದ ಮುಕ್ತಗೊಳಿಸಿದರು. ಅವರು ರಚಿಸಿರುವ ವಚನಗಳು ವೈದಿಕ ವ್ಯವಸ್ಥೆಯ ವಿರುದ್ಧದ ಬಂಡಾಯದ ನುಡಿಗಳಾಗಿವೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಪೀಠಾಧ್ಯಕ್ಷ ಡಾ. ಗುರುಬಸವ ಸ್ವಾಮಿಗಳು ನುಡಿದರು.
ಅವರು ಬಸವಕೇಂದ್ರ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾಗಳು ಮುರುಘ ರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಷಾಢಮಾಸದ ಮನೆಮನಗಳಿಗೆ ಶರಣರ ಸಂದೇಶ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಮಾತನಾಡುತ್ತಿದ್ದರು.
ವಚನ ಸಾಹಿತ್ಯ. ಇವು ಇಂದು ಎಲ್ಲ ಜನಾಂಗ ಧರ್ಮದವರಿಗೂ ಬೇಕಾಗಿವೆ. ಇವುಗಳನ್ನು ರಚಿಸಿದ ಶರಣರನ್ನು ಆಯಾ ಜನಾಂಗಕ್ಕೆ ಜಾತಿಗೆ ಸೀಮಿತಗೊಳಿಸಿ ಜಯಂತಿಗಳನ್ನು ಆಚರಿಸುತ್ತಿರುವುದು ಜಾತ್ಯಾತೀತೆಯನ್ನು ಸಾರಿದ ಶರಣರಿಗೆ ಮಾಡಿದ ದ್ರೋಹ ಎಂದರು. ಬಸವಾದಿ ಶರಣರು ನಿಜ ಜಾತ್ಯಾತೀತ ನಾಯಕರಾಗಿದ್ದರು ಎಂದರು.