ಕುರಕುಂದಿ
ಕುರಕುಂದಿ ಗ್ರಾಮದಲ್ಲಿ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು.
ಬಸವಬಳ್ಳಿಯ ಶರಣರು, ಲಿಂಗಜಂಗಮರು, ಶಿವಯೋಗಿಗಳು ವೀರಭದ್ರಪ್ಪ ಅವರ ಅಪಾರವಾದ ಬಸವಸೇವೆಯನ್ನು ನೆನೆದು ಮಾತನಾಡಿ ನುಡಿನಮನ ಸಲ್ಲಿಸಿದರು.
ರಾಜೇಶ ಸಸಿಮಠ ಕೊಪ್ಪಳ, ಗಡಿಹಳ್ಳಿ ಶರಣಮ್ಮ ಸೋಮಸಾಗರ, ರಾಜಶೇಖರ ನಾರನಾಳ ಗಂಗಾವತಿ, ಶಿಲ್ಪಾ ನಾರನಾಳ ಹಟ್ಟಿ, ತಿಮ್ಮನಗೌಡ ತಿಲಕರಾಗಿ ಸಿಂಧನೂರು, ಲಿಂಗರಾಜ ಚಾವಳ್ಳಿ ಮೈಸೂರು, ವೀರಭದ್ರಗೌಡ ಅಮರಾಪುರ ಸಿಂಧನೂರು, ನಿರುಪಾದಿ ವಕೀಲರು ಸಿಂಧನೂರು, ಮಲ್ಲಣ್ಣ ಲಿಂಗಸ್ಗೂರು, ಅಶೋಕ ಬರಗುಂಡಿ ಗದಗ, ರವಿ ಯಡಹಳ್ಳಿ ಜಮಖಂಡಿ, ಶರಣಪ್ಪ ವಕೀಲರು ಕುಷ್ಟಗಿ ಮಾತನಾಡಿದರು.
ನಾಡಿನ ಮೂಲೆ ಮೂಲೆಯಿಂದ ಬಸವಭಕ್ತರು, ಬಸವಾಭಿಮಾನಿಗಳು, ಶರಣ, ಶರಣೆಯರು, ಕುರಕುಂದಿಯವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಸಂಖ್ಯೆಯಲ್ಲಿ ಗ್ರಾಮದಲ್ಲಿ ಸೇರಿದ್ದಾರೆ. ಲಿಂಗೈಕ್ಯ ಶರಣರ ಅಂತಿಮ ದರ್ಶನ ಪಡೆಯುತ್ತಿದ್ದಾರೆ, ಅಂತಿಮ ಕ್ರಿಯೆಗಳಲ್ಲಿ ಫಾಲ್ಗೊಳ್ಳುತ್ತಿದ್ದಾರೆ.
ಭಾವಚಿತ್ರಗಳ ಸಹಿತ ವರದಿ ಚೆನ್ನಾಗಿ ಮಾಡಿದ್ದೀರಿ. ಅಪರೂಪದ ಅಪ್ರತಿಮ ವ್ಯಕ್ತಿಗಳ ನೆನಹು ಇಂತಹ ವರದಿಗಳಿಂದ ಶಾಶ್ವತ.
🎉💐🎉💐🙏