ವೀರಶೈವ ಲಿಂಗಾಯತದ ಒಂದು ಉಪಪಂಗಡ, ಆದರೆ ಪ್ರಸ್ತುತ ಸಂದರ್ಭದಲ್ಲಿ ಕಾಲ್ತೊಡಕಾಗಿದೆ.
ಕಲಬುರ್ಗಿ
ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 21ನೇ ದಿನದಂದು ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡಿದರು.
ವೀರಶೈವ ಲಿಂಗಾಯತದ ಒಂದು ಉಪಪಂಗಡವಾಗಿದೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ವೀರಶೈವವು ಲಿಂಗಾಯತರಿಗೆ ಕಾಲ್ತೊಡಕಾಗಿ ಬೇತಾಳದಂತೆ ಬೆನ್ನು ಹತ್ತಿದೆ. ಶರಣರು ಶೈವದ ಲಾಕುಲಿಷ,ಕಾಳಮುಖ, ಕಾಪಾಲಿಕರು ಲಿಂಗಾಯತ ಧರ್ಮ ಒಪ್ಪಿ ಬಂದಂತೆ ವೀರಶೈವವೂ ಲಿಂಗಾಯತದ ಉಪಂಗಡವಾಗಿದ್ದು ಲಿಂಗಾಯತ ಧರ್ಮ ಒಪ್ಪಿ ಇದರೊಂದಿಗೆ ಬಂದಿದೆ.
ಶಿವಯೋಗಿ ಸಿದ್ದರಾಮೇಶ್ವರರು ದೇವರಿಗೆ ಮಂದಿರ ಕಟ್ಟಿ ಧನ್ಯತೆ ಪಡೆಯಲು ಇಚ್ಚಿಸಿದರು, ಬಸವ ಸಿದ್ಧಾಂತ ತಿಳಿದು 84 ಲಕ್ಷ ಜೀವ ರಾಶಿಗಳಲ್ಲಿರುವ ದೇವರಿಗೆ ಮಂದಿರ ಕಟ್ಟಲು ನಾನಾರು ಎಂದು ಪಶ್ಚಾತಾಪ ಪಟ್ಟರು.
ಬಸವಧರ್ಮಕ್ಕೂ ಶೈವ ಧರ್ಮಕ್ಕೂ ವ್ಯತ್ಯಾಸವಿದೆ. ಶರಣರು ಕಂಡ ಶಿವನಿಗೂ ವೈದಿಕರು ಕಂಡ ಶಿವನಿಗೂ ವ್ಯತ್ಯಾಸವಿದೆ. ಕಣ್ಣು ಕಿವಿ ನಾಲಿಗೆ ಶೈವರು ಶಿವನಿಗೆ ಅರ್ಪಿಸುತ್ತಾರೆ, ಇದು ಭಕ್ತಿಯಲ್ಲ. ದೇವರನ್ನು ನೋಡಲು ಕಣ್ಣಿದೆ ದೇವರ ಮಹಾತ್ಮೆ ಕೇಳಲು ಕಿವಿ ಇದೆ ಶಿವ ಸ್ಮರಣೆ ಮಾಡಲು ನಾಲಿಗೆ ಇದೆ ಅವುಗಳು ದೇವರಿಗೆ ಕತ್ತರಿಸಿ ಕೊಡಬಾರದು.
ಸಿರಿಯಾಳನ ಮಗನನ್ನು ದೇವರು ಆಹಾರವಾಗಿ ಕೇಳಿದನೆಂದು ಹೇಳುತ್ತಾರೆ. ಹಾಗೆ ಕೇಳಲು ದೇವರು ಮಾಂಸಾಹಾರಿ ಅಲ್ಲ. ಸಿಂಧುಬಲ್ಲಾಳ ತನ್ನ ಹೆಂಡತಿಯನ್ನು ದೇವರಿಗೆ ಕೊಟ್ಟನೆಂಬರು, ದೇವರು ಯಾರ ಹೆಂಡತಿಯನ್ನು ಕೇಳುವುದಿಲ್ಲ ಕೇಳಿದರೆ ಅವನು ದೇವರಲ್ಲ. ಲಿಂಗವಂತರ ದೇವರು ನಿರಾಕಾರವಾಗಿದ್ದಾನೆ ಜಗದಗಲ ಮುಗಿಲಗಲ ಮಿಗಿಯಗಲವಾಗಿದ್ದಾನೆ.
ವೀರಶೈವ ದೇವರು ಪ್ರತ್ಯಕ್ಷವಾಗಿ ಭಕ್ತನಿಗೆ ವರಕೊಟ್ಟು ಹೋಗುತ್ತಾನಂತೆ. ಆದರೆ ಬಸವಣ್ಣನವರು ಹೇಳಿದ ದೇವರು ಭಕ್ತನೊಂದಿಗೆ ಇದ್ದು ಅವನ ಒಳಗೆ ಇದ್ದು ತಾಯಿ ಮಗನನ್ನು ಕಾಯುವಂತೆ ಕಾಯುತ್ತಾನೆ. ಬಸವಣ್ಣ ಹೇಳಿದ ದೇವರು ಹುಟ್ಟಿಲ್ಲ ಸಾಯುವುದಿಲ್ಲ. ಅವನು ಅಜಾತವಾಗಿದ್ದಾನೆ ಬ್ರಹ್ಮ ತನ್ನ ಮಗಳಾದ ಸರಸ್ವತಿಗೆ ಮದುವೆಯಾದ ಚಾರಿತ್ರ್ಯಹೀನನಾಗಿದ್ದಾನೆ. ಉಳಿದ ವೇದ ಆಗಮ ಆಗಮದ ದೇವರೆಲ್ಲ ಪರಿಪೂರ್ಣರಲ್ಲ, ಕೂಡಲಸಂಗಮದೇವನೊಬ್ಬನೇ ನಿರಾಕಾರ ಪರಿಪೂರ್ಣ ದೇವರಾಗಿದ್ದಾನೆ ಎಂದು ಹೇಳಿದರು.

ಹಠ ಯೋಗ, ಶಿವಯೋಗಗಳಿರುವಂತೆ ಇಷ್ಟಲಿಂಗ ಯೋಗವನ್ನು ಬಸವಯೋಗವೆಂದು ಕರೆಯುತ್ತಾರೆ. ಶರಣ ಸಿದ್ದಾಂತವನ್ನು ಬಸವಲಿಂಗ, ಬಸವ ಯೋಗ ,ಬಸವ ಧರ್ಮ ಎಂದು ಕರೆಯಬೇಕೆಂದು ಸೊನ್ನಲಿಗೆ ಸಿದ್ದರಾಮೇಶ್ವರರು ಹೇಳಿದ್ದಾರೆ.
ಶರಣರು ನಾಸ್ತಿಕರಲ್ಲ- ಆಸ್ತಿಕರು ಅವರು ದೇವತಾ ಪ್ರಿಯರಲ್ಲ ದೇವಪ್ರಿಯರು, ಬಹು ಬಹುದೇವೋಪಾಸಕರಲ್ಲ – ಏಕದೇವೋಪಾಸಕರಾಗಿದ್ದರು ಎಂದರು.
ಶಿವ ಚಿಂತೆ ಶಿವ ಧ್ಯಾನವಿಲ್ಲದವರು ಸಗಣಿಯಲ್ಲಿ ಸಾಸಿರ ಹುಳ ಹುಟ್ಟಿದಂತೆ ಎಂದಿದ್ದಾರೆ ಶರಣರು. ಮಣ್ಣ ಬಿಟ್ಟು ಮಡಿಕೆ ಇಲ್ಲ, ತನ್ನ ಬಿಟ್ಟು ದೇವರಿಲ್ಲ. ಮನುಷ್ಯ ಭೂಲೋಕಕ್ಕೆ ಬಂದಿರುವುದೇ ಶಿವ ಧ್ಯಾನ ಮಾಡಲಿಕ್ಕಾಗಿ ಎಂಬುದು ಶರಣರ ಅಭಿಮತ. ಶಿವ ಧ್ಯಾನ ಮಾಡದವರು ಅರಣ್ಯದೊಳಗಿನ ಮೃಗಗಳಂತೆ. ಕೋಳಿಗೆ ಸಮಯಜ್ಞಾನವಿದೆ, ಶ್ವಾನಕ್ಕೆ ಜನ್ಮಾಂತರ ಪತ್ತೆದಾರಿ ಜ್ಞಾನವಿದೆ. ಆನೆಗೆ ಭವಿಷ್ಯ ಜ್ಞಾನವಿದೆ ಅದನ್ನು ಗಜಜ್ಞಾನವೆನ್ನುತ್ತಾರೆ. ಭೂಕಂಪ ವಾಗುವುದು ಪ್ರಕೃತಿ ವಿಕೋಪವಾದ ವಾಗುವುದು ಪ್ರಾಣಿಗಳಿಗೆ ಮನುಷ್ಯನಿಗಿಂತ ಮುಂಚಿತವಾಗಿ ಗ್ರಹಿಸುವ ಶಕ್ತಿ ಇದೆ, ಜಪಾನಿನಲ್ಲಿ ಸುನಾಮಿಯಾಗುವುದು ಮೊದಲು ಪಕ್ಷಿಗಳು ತಿಳಿದಿದ್ದವು. ಆಫ್ರಿಕಾದಲ್ಲಿ ಪ್ರಕೃತಿ ವಿಕೋಪವು ಮೊದಲು ಪ್ರಾಣಿಗಳು ಗ್ರಹಿಸಿದವು.
ಈ ಎಲ್ಲಾ ಜ್ಞಾನ ಮನುಷ್ಯನಿಗೆ ಇಲ್ಲ ಮನುಷ್ಯ ದೊಡ್ಡ ಜ್ಞಾನಿಯಂತೆ ವರ್ತಿಸಿ ದೇವರನ್ನು ಮರೆತು ಬದುಕಬಾರದು. ಭವಿಷ್ಯದ ಜ್ಞಾನ ದಾರ್ಶನಿಕರಿಗೆ ಮಾತ್ರ ತಿಳಿದು ಬರುತ್ತದೆ, ಆದರೆ ಇದನ್ನು ಜ್ಯೋತಿಷ್ಯವೆನ್ನಲಾಗದು.
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ. ಶರಣಗೌಡ ಪಾಟೀಲ ಪಾಳಾ, ಡಾ. ಕೆ ಎಸ್ ವಾಲಿ, ಬಂಡಪ್ಪ ಕೇಸುರ, ಚಿತ್ರಶೇಖರ್ ಕೇಸುರ, ಮಾಲತಿ ರೇಷ್ಮೀ ಹಾಜರಿದ್ದರು.